ಮುತ್ತಿನ ಸತ್ತಿಗೆ ಕಲಿಕಾ ಕಿರುಚಿತ್ರ



        ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು, ಮತ್ತು ವಿದ್ಯಾರ್ಥಿಗಳ ಮೂಲಕ ನುಡಿಗನ್ನಡ ಬಳಗ ಶಿರಸಿ, ಪೂರ್ಣಿಮಾ ಸಾಹಿತ್ಯ ವೇದಿಕೆ ಸಿದ್ದಾಪುರ, ಮತ್ತು ಕರ್ನಾಟಕ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಕಲಾ ಸಂಘಗಳ ಸಹಯೋಗದಲ್ಲಿ ನಿರ್ಮಿಸಿದ “ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು “ ಕನ್ನಡ ಭಾಷಾ ಕಲಿಕಾ ಕಿರುಚಿತ್ರವನ್ನು ಇಂದು ಅಂತರ್ಜಾಲವನ್ನು ಬಳಸಿಕೊಂಡು ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ 96 ಶಿಕ್ಷಕರು ಮತ್ತು ಸಾಹಿತಿಗಳು ಪಾಲ್ಗೊಂಡಿದ್ದರು.

            ಕವಿ ರಾಘವಾಂಕ ಬರೆದ “ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು “ ಕೃತಿಯನ್ನು ಆಧಾರವಾಗಿಟ್ಟುಕೊಂಡು ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಗೋಪಾಲ ನಾಯ್ಕ ಭಾಶಿರವರು ಈ ಕಿರುಚಿತ್ರವನ್ನು ರಚಿಸಿದ್ದಾರೆ. ಈ ಕಿರುಚಿತ್ರಕ್ಕೆ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಹಿಂದಿ ಭಾಷಾ ಶಿಕ್ಷಕರಾದ ಶ್ರೀ ರಾಘವೇಂದ್ರ ನಾಯ್ಕರವರು ನಿರ್ದೇಶನ ಮತ್ತು ತಾಂತ್ರಿಕ ಸಹಕಾರ ನೀಡಿದ್ದಾರೆ. ಹಾಗೂ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ ನಾರಾಯಣ ಭಾಗವತರು ಅಗತ್ಯ ಸಲಹೆಗಳನ್ನು ನೀಡಿದ್ದಾರೆ.

            ಇಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾದ ಮಾನ್ಯ ಉಪನಿರ್ದೇಶಕರಾದ ಶ್ರೀ ದಿವಾಕರ ಶೆಟ್ಟಿರವರು ಕಿರುಚಿತ್ರವನ್ನು ಲೋಕಾರ್ಪಣೆಗೊಳಿಸಿ “ಕೊವಿಡ್ ಸಂದಿಗ್ಧ ಸಂದರ್ಭದಲ್ಲಿ ಮಕ್ಕಳಿಗೆ ಅಂತರ್ಜಾಲ ಬಳಸಿಕೊಂಡು ಇಂತಹ ಕಿರುಚಿತ್ರಗಳು ಕಲಿಕೆಯನ್ನು ಪರಿಣಾಮಕಾರಿಯಾಗಿಸುತ್ತವೆ. ಉತ್ತಮವಾದ ಪ್ರಯತ್ನವೆಂದು ಶ್ಲಾಘಿಸಿದರು. ಶಿರಸಿ ಡಯಟ್‍ನ ಪ್ರಾಂಶುಪಾಲರಾದ ಶ್ರೀ ಡಿ. ಆರ್. ನಾಯ್ಕರವರು ಮಾತನಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

            ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸಿದ್ದಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸದಾನಂದಸ್ವಾಮಿ ಸಿ. ರವರು ಕಿರುಚಿತ್ರದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಇಂತಹ ಪ್ರಯತ್ನಗಳಿಗೆ ತಮ್ಮ ಸಹಕಾರ ಮತ್ತು ಬೆಂಬಲವಿದೆ ಮತ್ತು ಸಾಧನೆ ಮುಂದುವರಿಯಲಿ ಎಂದು ಹಾರೈಸಿದರು.

            ಕಾರ್ಯಕ್ರಮವನ್ನು ವಿಷ್ಣು ನಾಯ್ಕ ನಿರೂಪಿಸಿದರು. ಪಾರ್ವತಿ ಹೆಗಡೆ ಪ್ರಾರ್ಥನೆ    ಮಾಡಿದರು. ವಿಷ್ಣು ಪಟಗಾರ ಸ್ವಾಗತಿಸಿದರು. ಗೋಪಾಲ ನಾಯ್ಕ ಮತ್ತು ರಾಘವೇಂದ್ರ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಶಿಕ್ಷಕರಾದ ಉಮೇಶ ಹೆಗಡೆ ಅಭಿನಂದನೆ ಸಲ್ಲಿಸಿದರು. ಸಿ.ಪಿ.ಹೆಗಡೆ ವಂದನಾರ್ಪಣೆ ಮಾಡಿದರು.


Post a Comment

0 Comments