ಸಿದ್ದಾಪುರ ತಾಲೂಕಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಮತ್ತು ವಿಜ್ಞಾನ ನಾಟಕ 2023-24

ವಿಜ್ಞಾನ ವಿಚಾರಗೋಷ್ಠಿ

    




                  ದಿನಾಂಕ: 28-08-2023 ರಂದು ಸರ್ಕಾರಿ ಉರ್ದು ಪ್ರೌಢಶಾಲೆ ಸಿದ್ದಾಪುರದಲ್ಲಿ ಪ್ರೌಢಶಾಲಾ  ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ವಿಜ್ಞಾನ  ವಿಚಾರಗೋಷ್ಠಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಹಶಿಕ್ಷಕರಾದ ಶ್ರೀ ಶ್ರೀಕಾಂತ ಬೂದಿಹಾಳರವರು ಸರ್ವರನ್ನು ಸ್ವಾಗತಿಸಿದರು. ಮುಖ್ಯಾಧ್ಯಾಪಕರಾದ ಶ್ರೀಮತಿ ದೀಪಾ ಪಟಗಾರ ರವರು ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿರ್ಣಾಯಕರಾಗಿ ಕರ್ನಾಟಕ ಪಬ್ಲಿಕ್ ಶಾಲೆ ಉಪನ್ಯಾಸಕರಾದ ಶ್ರೀಮತಿ ಸಾವಿತ್ರಿ ಭಂಢಾರಿ ರವರು ಮತ್ತು ಮಲನಾಡು ಪ್ರೌಢಶಾಲೆ ಕವಂಚೂರು ಮುಖ್ಯಾಧ್ಯಾಪಕರಾದ ಶ್ರೀ ಸುರೇಶ ಈ.  ರವರು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಎಮ್. ವಿ. ನಾಯ್ಕ ರವರು ಅಧ್ಯಕ್ಷತೆ ವಹಿಸಿದ್ದರು.
 
    28 ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜ್ಞಾನ  ಶಿಕ್ಷಕರಾದ ಶ್ರೀಮತಿ ರಜನಿ ಹೆಗಡೆ ಶ್ರೀ ವಿನಾಯಕ ಹೆಗಡೆ ಮತ್ತು ಶ್ರೀಮತಿ ಜಯಲಕ್ಷ್ಮಿ ಹೆಗಡೆ ರವರು ಸ್ಪರ್ಧಾ ಕಾರ್ಯಕ್ರಮವನ್ನು ನಿರ್ವಹಿಸಿದರು.  ಸ್ಪರ್ಧಾರ್ಥಿಗಳಿಗೆ 20 ಅಂಕದ ಲಿಖಿತ ಪರೀಕ್ಷೆಯನ್ನು ನೀಡಲಾಯಿತು. ತದನಂತರ  ಎಲ್ಲಾ ವಿದ್ಯಾರ್ಥಿಗಳು ತಾವು ತಯಾರಿಸಿಕೊಂಡ ದೃಶ್ಯೋಪಕರಣಗಳ ಸಹಾಯದಿಂದ “ಸಿರಿಧಾನ್ಯಗಳು - ಅಧ್ಬುತ ಾಹಾರ ಮತ್ತು ರೂಢಿಗತ ಪಥ್ಯಾಹಾರ” ವಿಷಯದ ಕುರಿತು ಮಂಡನೆ ಮಾಡಿದರು. ಲಿಟ್ಲ್ ಫ್ಲವರ್ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾಪ್ತಿ ಆರ್. ಎಚ್. ಇವಳು ಪ್ರಥಮ ಸ್ಥಾನವನ್ನು, ಸಿದ್ದಿವಿನಾಯಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿತಾ  ಆರ್. ನಾಯ್ಕ ಇವಳು ದ್ವಿತೀಯ ಸ್ಥಾನವನ್ನು ಹಾಗೂ  ಸಿದ್ದಿವಿನಾಯಕ ಆಂಗ್ಲ ಮಾಧ್ಯಮ  ಪ್ರೌಢಶಾಲೆಯ ವಿದ್ಯಾರ್ಥಿನಿ ಸುನಿಧಿ ಹೆಗಡೆ ಇವಳು ತೃತೀಯ ಸ್ಥಾನವನ್ನು ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು


ಕ್ರಮ ಸಂಖ್ಯೆ ವಿಜೇತರ ಹೆಸರು ಪ್ರೌಢಶಾಲೆಯ ಹೆಸರು ಪಡೆದ ಸ್ಥಾನ
1ಪ್ರಾಪ್ತಿ ಆರ್. ಎಚ್. ಲಿಟ್ಲ್ ಫ್ಲವರ್ ಪ್ರೌಢಶಾಲೆ ಸಿದ್ದಾಪುರಪ್ರಥಮ
2ಹರ್ಷಿತಾ ಆರ್. ನಾಯ್ಕ ಸಿದ್ದಿವಿನಾಯಕ ಬಾಲಕಿಯರ ಪ್ರೌಢಶಾಲೆ ಸಿದ್ದಾಪುರದ್ವಿತೀಯ
3ಸುನಿಧಿ ಹೆಗಡೆಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸಿದ್ದಾಪುರತೃತೀಯ

 

                                          

ವಿಜ್ಞಾನ ನಾಟಕ

    




    ದಿನಾಂಕ: 07.09.2023 ರಂದು ಪ್ರಶಾಂತಿ ಪ್ರೌಢಶಾಲೆ ಸಿದ್ದಾಪುರದಲ್ಲಿ ಪ್ರೌಢಶಾಲಾ  ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ವಿಜ್ಞಾನ  ನಾಟಕ  ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮುಖ್ಯಾಧ್ಯಾಪಕರಾದ ಶ್ರೀ ದಿನೇಶ ಶೆಟ್ಟಿರವರು ಸರ್ವರನ್ನು ಸ್ವಾಗತಿಸಿದರು.  ಶಿಕ್ಷಣ ಸಂಯೋಜಕರಾಗಿರುವ ಶ್ರೀ ಮಹೇಶ ಹೆಗಡೆರವರು ಪ್ರಾಸ್ತಾವಿಕ ಮಾತನ್ನಾಡಿದರು. ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಗೋಪಾಲ ನಾಯ್ಕ ರವರು ಜ್ಯೋತಿ ಬೆಳಗುವುದರ ಮೂಲಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಂಗಕಲೆ ಇಂದು ತನ್ನ ವ್ಯಾಪ್ತಿಯನ್ನು ಎಲ್ಲೆಡೆ ವಿಸ್ತರಿಸಿದ್ದು ವಿಜ್ಞಾನ, ಗಣಿತದ  ಕ್ಲಿಷ್ಟಕರ ಪರಿಕಲ್ಪಗಳನ್ನೂ ಸಹ ರಂಗಕಲೆಯ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬಹುದು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಮತಿ ಅರುಂದತಿ ಹೆಗಡೆ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ಣಾಯಕರಾದ ಶ್ರೀ ಶ್ರೀಪಾದ ಹೆಗಡೆ ಕೊಡಗಿಬೈಲ್ ಮತ್ತು ಶ್ರೀ ಸಂಧ್ಯಾ ಶಾಸ್ತ್ರಿ ರವರು ಉಪಸ್ಥಿತರಿದ್ದರು.  ನಿರ್ಣಾಯಕರಾದ ರಂಗಕರ್ಮಿ ಮತ್ತು ಶಿಕ್ಷಕರಾದ ಶ್ರೀಪಾದ ಹೆಗಡೆರವರು ಮಾತನಾಡಿ ಮನುಷ್ಯನ ಬದುಕಿನ ಘಟನೆಗಳನ್ನು ವೇದಿಕೆ ಮೇಲೆ ಸಹಜವಾಗಿ ಅಭಿವ್ಯಕ್ತಿ ಪಡಿಸುವುದೇ ನಾಟಕ ಹಾಗೂ ಶಿಕ್ಷಣದಲ್ಲಿ ರಂಗಕಲೆಯು ಪರಿಣಾಮಕಾರಿ ಕಲಿಕೆಗೆ ಸಾಧನವಾಗಿದೆ ಎಂದರು. ಮುಖ್ಯಾಧ್ಯಾಪಕರಾದ ಶ್ರೀ ರಾಘವೇಂದ್ರ ಬೇಡ್ಕಣಿ ರವರು ಸರ್ವರನ್ನು ವಂದಿಸಿದರು.  

ನಾಟಕಕ್ಕೆ “Science and Tachnology for the benefit of mankind” ವಿಷಯವನ್ನು ನೀಡಲಾಗಿತ್ತು. ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತಾಲೂಕಿನ 05 ಪ್ರೌಢಶಾಲೆಗಳಿಂದ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ದಿನನಿತ್ಯ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಸಿರಿ ಧಾನ್ಯಗಳು ಹಾಗೂ ಮೂಢನಂಬಿಕೆಗಳ ಕುರಿತು ಮನೋಜ್ಞವಾಗಿ ನಾಟಕ ಪ್ರಸ್ತುತ ಪಡಿಸಿದರು. ಶ್ರೀ ಕಾಳಿಕಾಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾನಸೂರು ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಪ್ರಶಾಂತಿ ಪ್ರೌಢಶಾಲೆ ಸಿದ್ದಾಪುರ ದ್ವಿತೀಯ ಸ್ಥಾನ, ಹಾಗೂ ಸರ್ಕಾರಿ ಪ್ರೌಢಶಾಲೆ ಹಳ್ಳಿಬೈಲ್ ಮತ್ತು ಸರ್ಕಾರಿ ಪ್ರೌಢಶಾಲೆ ಹಾಳದಕಟ್ಟಾ ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. 


ಕ್ರಮ ಸಂಖ್ಯೆ ವಿಜೇತರ ಹೆಸರು ಪ್ರೌಢಶಾಲೆಯ ಹೆಸರು ಪಡೆದ ಸ್ಥಾನ
1ಪೃಥ್ವಿ ಹೆಗಡೆ ಮತ್ತು ಸಂಗಡಿಗರು ಶ್ರೀ ಕಾಳಿಕಾಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾನಸೂರುಪ್ರಥಮ
2ದಿಶಾ ಶಾನಭಾಗ ಮತ್ತು ಸಂಗಡಿಗರು ಪ್ರಶಾಂತಿ ಪ್ರೌಢಶಾಲೆ ಸಿದ್ದಾಪುರದ್ವಿತೀಯ
3ವಿದ್ಯಾ ನಾಯ್ಕ ಮತ್ತು ಸಂಗಡಿಗರು ಸರ್ಕಾರಿ ಪ್ರೌಢಶಾಲೆ ಹಳ್ಳಿಬೈಲ್ತೃತೀಯ
3ಭುವನ್ ನಾಯ್ಕ ಮತ್ತು ಸಂಗಡಿಗರು ಸರ್ಕಾರಿ ಪ್ರೌಢಶಾಲೆ ಹಾಳದಕಟ್ಟಾತೃತೀಯ