ಸಿದ್ದಾಪುರ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ 2023-24

  

ದಿನಾಂಕ: 02-11-2023 ರಂದು ಸರ್ಕಾರಿ  ಪ್ರೌಢಶಾಲೆ ಹಾಳದಕಟ್ಟಾದಲ್ಲಿ ಪ್ರೌಢಶಾಲಾ  ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ತಾಲೂಕಾ ಮಟ್ಟದ ವಿಜ್ಞಾನ  ವಸ್ತು ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ನೋಡಲ್ ಅಧಿಕಾರಿಯಾಗಿರುವ ಶ್ರೀ ಮಹೇಶ ಹೆಗಡೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು.  ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿ. ಐ. ನಾಯ್ಕರವರು ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯಾಧ್ಯಾಪಕರಾದ ಶ್ರೀಮತಿ ಲಲಿತಾ ನಾಯ್ಕರವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಚೈತನ್ಯಕುಮಾರರವರು ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀಮತಿ ರಾಜಶ್ರೀ ಕಾಮತ್, ಸರ್ಕಾರಿ ಉರ್ದು ಪ್ರೌಢಶಾಲೆ ಸಿದ್ದಾಪುರದ ಮುಖ್ಯಾಧ್ಯಾಪಕರಾದ ಶ್ರೀಮತಿ  ದೀಪಾ ಪಟಗಾರ, ಚೇತನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮದಾಸ ಗಾಂವಕರ ಮತ್ತು ಕ್ಷೇತ್ರ ಸಮಪನ್ಮೂಲ ವ್ಯಕ್ತಿಯಾಗಿರುವ  ಶ್ರೀ ಕೃಷ್ಣಮೂರ್ತಿ ಕೆ. ಜಿ. ರವರು ಉಪಸ್ಥಿತರಿದ್ದರು.  ಸಹಶಿಕ್ಷಕರಾಗಿರುವ ಶ್ರೀ ನಿತ್ಯಾನಂದ ಹೆಗಡೆರವರು ವಂದಿಸಿದರು. ವಿಜ್ಞಾನ ಶಿಕ್ಷಕಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.   

33 ಪ್ರೌಢಶಾಲೆಗಳಿಂದ 70 ವಿದ್ಯಾರ್ಥಿ‍ಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ವೈಯಕ್ತಿಕ ಮತ್ತು ಗುಂಪು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಯಿತು. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಬಯೋಸೈನ್ಸ್ , ಪರಿಸರ ವಿಜ್ಞಾನ ಹಾಗೂ ಭೂಮಿ ಮತ್ತು ಬಾಹ್ಯಾಕಾಶ ವಿಜ್ಞಾನ ಈ 8 ವಿಭಾಗಗಳಿಂದ ಒಟ್ಟೂ  45 ಮಾದರಿಗಳು ಪ್ರದರ್ಶನಗೊಂಡವು. ಎಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಪ್ರಾತ್ಯಕ್ಷಿಕೆ ಮತ್ತು ಮಂಡನೆಯನ್ನು ಮಾಡಿದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ವೈಯಕ್ತಿಕ ವಿಭಾಗ

ಕ್ರಮ ಸಂಖ್ಯೆ ವಿಜೇತರ ಹೆಸರು ಪ್ರೌಢಶಾಲೆಯ ಹೆಸರು ಪಡೆದ ಸ್ಥಾನ
1ಚಂದನ ಚವ್ಹಾಣ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕವಂಚೂರುಪ್ರಥಮ
2ಅನನ್ಯಾ ಎನ್. ಹೆಗಡೆಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರದ್ವಿತೀಯ
3ಪ್ರತೀಕ್ ಆರ್. ಮಡಿವಾಳಲಿಟ್ಲ್ ಫ್ಲವರ್ ಪ್ರೌಢಶಾಲೆ ಸಿದ್ದಾಪುರತೃತೀಯ

ಗುಂಪು ವಿಭಾಗ

ಕ್ರಮ ಸಂಖ್ಯೆ ವಿಜೇತರ ಹೆಸರು ಪ್ರೌಢಶಾಲೆಯ ಹೆಸರು ಪಡೆದ ಸ್ಥಾನ
1ನವ್ಯಾ ಡಿ.ಎನ್.
ಮತ್ತು
ಕೆ.ಜಿ. ಲಿಖಿತಾ
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕವಂಚೂರುಪ್ರಥಮ
2ಬಾರ್ಗವ ವಿ. ನಾಯ್ಕ
ಮತ್ತು
ಶಶಿತ್ ಡಿ.ಜೆ.
ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಹಾರ್ಸಿಕಟ್ಟಾದ್ವಿತೀಯ
3ವರ್ಷಾ ಹೆಗಡೆ
ಮತ್ತು
ದಿಯಾ ಶೆಟ್ಟಿ
ಜಗದಂಬಾ ಪ್ರೌಢಶಾಲೆ ಸರಕುಳಿತೃತೀಯ