ದಿನಾಂಕ 10.01.2024 ರಂದು ಸರ್ಕಾರಿ ಪ್ರೌಢಶಾಲೆ ಹಾಳದಕಟ್ಟಾದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣಪತಿ ಐ. ನಾಯ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯಾಧ್ಯಾಪಕರಾದ ಶ್ರೀಮತಿ ಲಲಿತಾ ನಾಯ್ಕರವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕರಾಗಿರುವ ಶ್ರೀ ಮಹೇಶ ಹೆಗಡೆರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವಿಕ್ಷಕರಾಗಿರುವ ಶ್ರೀ ಎಂ.ವಿ. ನಾಯ್ಕರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಹಶಿಕ್ಷಕರಾಗಿರುವ ಶ್ರೀ ನಿತ್ಯಾನಂದ ಹೆಗಡೆರವರು ಸರ್ವರನ್ನು ವಂದಿಸಿದರು. ಸಹಶಿಕ್ಷಕಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ಹೆಗಡೆಯವರು ನಿರೂಪಿಸಿದರು. ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು. ತಾಲೂಕಿನ 33 ಪ್ರೌಢಶಾಲೆಗಳಿಂದ 100 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾಷಣ ಸ್ಪರ್ಧೆ
ಪಡೆದ ಸ್ಥಾನ | ವಿಜೇತರ ಹೆಸರು | ಪ್ರೌಢಶಾಲೆಯ ಹೆಸರು |
---|---|---|
ಪ್ರಥಮ | ಆಶ್ರಿತ್ ಜಿ. | ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ |
ದ್ವಿತೀಯ | ಭೂಮಿಕಾ ಪಿ. ಹೆಗಡೆ | ಅಶೋಕ ಪ್ರೌಢಶಾಲೆ ಹಾರ್ಸಿಕಟ್ಟಾ |
ತೃತೀಯ | ತನ್ಮಯ ಜಿ. ನಾಯ್ಕ | ಸರ್ಕಾರಿ ಪ್ರೌಢಶಾಲೆ ಲಂಬಾಪುರ |
ಪ್ರಬಂಧ ಸ್ಪರ್ಧೆ
ಪಡೆದ ಸ್ಥಾನ | ವಿಜೇತರ ಹೆಸರು | ಪ್ರೌಢಶಾಲೆಯ ಹೆಸರು |
---|---|---|
ಪ್ರಥಮ | ಧನ್ಯಾ ರವೀಂದ್ರ ನಾಯ್ಕ | ಸರ್ಕಾರಿ ಪ್ರೌಢಶಾಲೆ ಮನಮನೆ |
ದ್ವಿತೀಯ | ಪ್ರತೀಕ್ಷಾ ಪ್ರಸನ್ನ ನಾಯ್ಕ | ಎಂ.ಜಿ.ಸಿ.ಎಂ. ಪ್ರೌಢಶಾಲೆ ಬಿದ್ರಕಾನ |
ತೃತೀಯ | ಲಾವಣ್ಯ ಬಿ. ಗೌಡ | ಸರ್ಕಾರಿ ಪ್ರೌಢಶಾಲೆ ಹಾಳದಕಟ್ಟಾ |
ಚಿತ್ರಕಲೆ ಸ್ಪರ್ಧೆ
ಪಡೆದ ಸ್ಥಾನ | ವಿಜೇತರ ಹೆಸರು | ಪ್ರೌಢಶಾಲೆಯ ಹೆಸರು |
---|---|---|
ಪ್ರಥಮ | ಅಂಕಿತಾ ಎಸ್. ಹೆಗಡೆ | ಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾನಸೂರು |
ದ್ವಿತೀಯ | ಕಾವ್ಯಾ ಬಿ. ಮಡಿವಾಳ | ಸರ್ಕಾರಿ ಪ್ರೌಢಶಾಲೆ ಕಾನಗೋಡ |
ತೃತೀಯ | ಸನತ್ ಗಣಪತಿ ಹೆಗಡೆ | ಶ್ರೀ ಜಗದಾಂಬಾ ಪ್ರೌಢಶಾಲೆ ಸರಕುಳಿ |
ರಸಪ್ರಶ್ನೆ ಸ್ಪರ್ಧೆ
ಪಡೆದ ಸ್ಥಾನ | ವಿಜೇತರ ಹೆಸರು | ಪ್ರೌಢಶಾಲೆಯ ಹೆಸರು |
---|---|---|
ಪ್ರಥಮ | ದೀಕ್ಷಾ ಎಸ್. ಗೌಡ | ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ |
ಪ್ರಥಮ | ಶ್ರೇಯಾ ಪಿ.ಎನ್. | ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ |
ದ್ವಿತೀಯ | ಶಮಂತ ಹೆಗಡೆ | ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿ |
ದ್ವಿತೀಯ | ರಜತ ಹೆಗಡೆ | ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿ |
0 Comments