ನಿಯಂತ್ರಣ ಮತ್ತು ಸಹಭಾಗಿತ್ವ

ಸಾರಾಂಶ

1. ನಿಯಂತ್ರಣ ಮತ್ತು ಸಹಭಾಗಿತ್ವದ ಅವಶ್ಯಕತೆ.
2. ಮಾನವದೇಹದಲ್ಲಿ ನಿಯಂತ್ರಣ ಮತ್ತು ಸಹಭಾಗಿತ್ವಕ್ಕೆ ಪೂರಕವಾದ ಘಟಕಗಳೆಂದರೆ ನರವ್ಯೂಹ ಮತ್ತು ನಿರ್ನಾಳ ಗ್ರಂಥಿಗಳು.
3. ನರವ್ಯೂಹದ ಘಟಕಗಳಾದ ಮೆದುಳು, ಮೆದುಳುಬಳ್ಳಿ, ಮತ್ತು ನರಗಳ (ಜ್ಞಾನವಾಹಿ ಮತ್ತು ಕ್ರಿಯಾವಾಹಿ) ರಚನೆ ಮತ್ತು ಕಾರ್ಯಗಳು.
4. ಪರಾವರ್ತಿತ ಪ್ರತಿಕ್ರಿಯೆ, ಅನೈಚ್ಛಿಕ ಕ್ರಿಯೆಗಳು ಮತ್ತು ಐಚ್ಛಿಕ ಕ್ರಿಯೆಗಳ ನಿಯಂತ್ರಣ ನರವ್ಯೂಹದ ಪ್ರಮುಖ ಕಾರ್ಯ . ನರವ್ಯೂಹದಲ್ಲಿ ಸಂದೇಶಗಳ ರವಾನೆ ವಿದ್ಯುತ್ ಆವೇಗಗಳ ಮೂಲಕ ಉಂಟಾಗುತ್ತದೆ.
5. ಸಸ್ಯ ಮತ್ತು ಪ್ರಾಣಿಗಳಲ್ಲಿ ಹಾರ್ಮೋನುಗಳು : ರಾಸಾಯನಿಕ ಸಂದೇಶವಾಹಕಗಳು, ಅವುಗಳ ಪ್ರಾಮುಖ್ಯತೆ.
6. ಮಾನವನಲ್ಲಿನ ವಿವಿಧ ನಿರ್ನಾಳ ಗ್ರಂಥಿಗಳು ಮತ್ತು ವಿವಿಧ ಹಾರ್ಮೋನುಗಳು ಮತ್ತು ಅವುಗಳ ಕಾರ್ಯಗಳು.
7. ಸಸ್ಯ ಹಾರ್ಮೋನುಗಳು ಮತ್ತು ಅವುಗಳ ಕಾರ್ಯಗಳು : ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಬೆಳವಣಿಗೆಯನ್ನು ಕುಂಠಿತಗೊಳಿಸುವ ಹಾರ್ಮೋನುಗಳು.