ಬೆಳಕು: ಪ್ರತಿಫಲನ ಮತ್ತು ವಕ್ರೀಭವನ

ಮುಖ್ಯಾಂಶಗಳು

ವಿವಿಧ ವಸ್ತುಗಳಲ್ಲಿ ವಕ್ರೀಭವನ ಸೂಚ್ಯಂಕ

ದ್ರವ್ಯ ಮಾಧ್ಯಮ ವಕ್ರೀಭವನ ಸೂಚ್ಯಂಕ
ಗಾಳಿ 1.0003
ಮಂಜುಗಡ್ಡೆ 1.31
ನೀರು 1.33
ಆಲ್ಕೋಹಾಲ್ 1.36
ಸೀಮೆ ಎಣ್ಣೆ 1.44
ಸಂಯೋಜಿಸಿದ ಸ್ಪಟಿಕ ಶಿಲೆ 1.46
ಟರ್ಪೆಂಟೈನ್ ಆಯಿಲ್ 1.47
ಬೆಂಜೀನ್ 1.50
ಕ್ರೌನ್ ಗಾಜು 1.52
ಕೆನಡಾ ಬಾಲ್ಸಮ್ 1.53
ಕಲ್ಲುಪ್ಪು 1.54
ಸಾಂದ್ರ ಫ್ಲಿಂಟ್ ಗಾಜು 1.65
ಮಾಣಿಕ್ಯ 1.71
ನೀಲಮಣಿ 1.77
ವಜ್ರ 2.42

ದರ್ಪಣ ಮತ್ತು ಮಸೂರಕ್ಕೆ ಸಂಬಂಧಿಸಿದ ಪ್ರಮುಖ ಪದಗಳ ಪರಿಚಯ

ಪದಗಳು ವಿವರ
ದರ್ಪಣದ ಧ್ರುವ ಗೋಲಿಯ ದರ್ಪಣದ ಮಧ್ಯಬಿಂದು
ದೃಕ ಕೇಂದ್ರ ಮಸೂರದ ಕೇಂದ್ರ ಬಿಂದು
ವಕ್ರತಾ ಕೇಂದ್ರ ದರ್ಪಣ/ ಮಸೂರದ ಪ್ರತಿ ಫಲಿಸುವ ವಕ್ರ ಮೇಲ್ಮೈ ಗೊಳದ ಕೇಂದ್ರ
ವಕ್ರತಾ ತ್ರಿಜ್ಯ ದರ್ಪಣ/ಮಸೂರದ ಪ್ರತಿಫಲಿಸುವ ಭಾಗವನ್ನು ಹೂಂದಿರುವ ಗೋಳದ ತ್ರಿಜ್ಯ
ಪ್ರಧನಾಕ್ಷ ಧೃವ/ದೃಕ ಕೇಂದ್ರ ಮತ್ತು ವಕ್ರತಾ ಕೇಂದ್ರಗಳನ್ತು ಸೇರಿಸುವ ಕಾಲ್ಪನಿಕ ರೇಖೆ
ಪ್ರಧಾನ ಸಂಗಮ ದರ್ಪಣ/ಮಸೂರದಲ್ಲಿ ಬೆಳಕಿನ ಕಿರಣಗಳು ಪ್ರತಿಫಲಿಸುವ/ವಕ್ರಿಭವನ ಹೊಂದಿ ಸಂಧಿಸುವ ಬಿಂದು
ಸಂಗಮದೂರ ಪ್ರಧಾನ ಸಂಗಮ ಮತ್ತು ದೃಕ ಕೇಂದ್ರದ ನಡುವಿನ ದೂರ
ದ್ಯುತಿ ರಂಧ್ರ ದರ್ಪಣದ ಪ್ರತಿಫಲಿಸುವ ಮೇಲ್ಮೈನ ವ್ಯಾಸ

ದರ್ಪಣ ಅಥವಾ ಮಸೂರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಸಂಕೇತಾಕ್ಷರಗಳ ಪರಿಚಯ

ಸಂಕೇತ ಹೆಸರು ಅರ್ಥ
Pದರ್ಪಣದ ಧ್ರುವ ಗೋಲಾಕಾರದ ಪ್ರತಿಫಲಿಸುವ ಮೇಲ್ಮೈ
Cವಕ್ರತಾ ಕೇಂದ್ರ ದರ್ಪಣದ ಕೇಂದ್ರ ಬಿಂದು
Rವಕ್ರತಾ ತ್ರಿಜ್ಯ ಗೋಳೀಯ ದರ್ಪಣದ ಪ್ರತಿಫಲಿಸುವ ಭಾಗವನ್ನು ಹೊಂದಿರುವ ಗೋಳದ ತ್ರಿಜ್ಯ
Fಸಂಗಮ ಬಿಂದು ಪ್ರತಿಫಲಿತ ಕಿರಣಗಳು ಪ್ರಧಾನಾಕ್ಷದ ಮೇಲೆ ಕೇಂದ್ರೀಕೃತವಾಗುವ ಬಿಂದು
fಸಂಗಮ ದೂರಗೋಳೀಯ ದರ್ಪಣದ ಧ್ರುವ ಮತ್ತು ಸಂಗಮ ಬಿಂದುಗಳ ನಡುವಿನ ಅಂತರ
MNದ್ಯುತಿರಂಧ್ರ ಗೋಳೀಯ ದರ್ಪಣದ ಪ್ರತಿಫಲಿಸುವ ಮೇಲ್ಮೈನ ವ್ಯಾಸ
Pಪ್ರಧಾನಾಕ್ಷ ಗೋಳೀಯ ದರ್ಪಣದ ವಕ್ರತಾ ಕೇಂದ್ರ ಮತ್ತು ಧ್ರುವದ ಮೂಲಕ ಹಾದು ಹೋಗುವ ಸರಳರೇಖೆ

ದರ್ಪಣದಲ್ಲಿ ಉಂಟಾಗುವ ಬಿಂಬ ಸ್ಥಾನ ಮತ್ತು ಸ್ವಭಾವ

ವಸ್ತುವಿನ ಸ್ಥಾನ ಬಿಂಬದ ಸ್ಥಾನ ಬಿಂಬದ ಗಾತ್ರ ಬಿಂಬದ ಸ್ವಭಾವ
ಅನಂತದೂರ F ನಲ್ಲಿ ತುಂಬ ಚಿಕ್ಕದು ಆಗಿರುತ್ತದೆ ನೈಜ ಮತ್ತು ತಲೆಕೆಳಗೆ
C ನಿಂದ ಆಚೆ C ಮತ್ತು F ನಡುವೆ ಚಿಕ್ಕದು ಆಗಿರುತ್ತದೆ ನೈಜ ಮತ್ತು ತಲೆಕೆಳಗೆ
C ನಲ್ಲಿ C ನಲ್ಲಿ ವಸ್ತುವಿನಷ್ಟೆ ಇರುತ್ತದೆ ನೈಜ ಮತ್ತು ತಲೆಕೆಳಗೆ
C ಮತ್ತು F ನಡುವೆ C ಯಿಂದ ಆಚೆ ದೊಡ್ದದು ಆಗಿರುತ್ತದೆ ನೈಜ ಮತ್ತು ತಲೆಕೆಳಗೆ
F ನಲ್ಲಿ ಅನಂತದಲ್ಲಿ ತುಂಬ ದೊಡ್ದದು ಆಗಿರುತ್ತದೆ ನೈಜ ಮತ್ತು ತಲೆಕೆಳಗೆ
F ಮತ್ತು P ನಡುವೆ ದರ್ಪಣದ ಹಿಂದೆ ದೊಡ್ದದು ಆಗಿರುತ್ತದೆ ಮಿಥ್ಯ ಮತ್ತು ನೇರ

ಪೀನ ದರ್ಪಣದಲ್ಲಿ ಉಂಟಾಗುವ ಬಿಂಬ ಸ್ಥಾನ ಮತ್ತು ಸ್ವಭಾವ

ವಸ್ತುವಿನ ಸ್ಥಾನ ಬಿಂಬದ ಸ್ಥಾನ ಬಿಂಬದ ಗಾತ್ರ ಬಿಂಬದ ಸ್ವಭಾವ
ಅನಂತದೂರ F ನಲ್ಲಿ ದರ್ಪಣದ ಹಿಂಭಾಗ ತುಂಬ ಚಿಕ್ಕದು ಆಗಿರುತ್ತದೆ ಮಿಥ್ಯ ಮತ್ತು ನೇರ
ಅನಂತ ಮತ್ತು P ನಡುವೆ P ಮತ್ತು F ಈ ನಡುವೆ ದರ್ಪಣದ ಹಿಂಭಾಗ ದೊಡ್ಡದು ಆಗಿರುತ್ತದೆ ಮಿಥ್ಯ ಮತ್ತು ನೇರ

ಮಸೂರದಲ್ಲಿ ಉಂಟಾಗುವ ಬಿಂಬ ಸ್ಥಾನ ಮತ್ತು ಸ್ವಭಾವ

ವಸ್ತುವಿನ ಸ್ಥಾನ ಬಿಂಬದ ಸ್ಥಾನ ಬಿಂಬದ ಗಾತ್ರ ಬಿಂಬದ ಸ್ವಭಾವ
ಅನಂತದೂರ F ನಲ್ಲಿ ತುಂಬ ಚಿಕ್ಕದು ಆಗಿರುತ್ತದೆ ನೈಜ ಮತ್ತು ತಲೆಕೆಳಗೆ
2F ನಿಂದ ಆಚೆ F ಮತ್ತು 2F ನಡುವೆ ಚಿಕ್ಕದು ಆಗಿರುತ್ತದೆ ನೈಜ ಮತ್ತು ತಲೆಕೆಳಗೆ
2F ನಲ್ಲಿ 2F ನಲ್ಲಿ ವಸ್ತುವಿನಷ್ಟೆ ಇರುತ್ತದೆ ನೈಜ ಮತ್ತು ತಲೆಕೆಳಗೆ
2F ಮತ್ತು F ನಡುವೆ 2F ನಿಂದ ಆಚೆ ದೊಡ್ದದು ಆಗಿರುತ್ತದೆ ನೈಜ ಮತ್ತು ತಲೆಕೆಳಗೆ
F ನಲ್ಲಿ ಅನಂತದಲ್ಲಿ ತುಂಬ ದೊಡ್ದದು ಆಗಿರುತ್ತದೆ ನೈಜ ಮತ್ತು ತಲೆಕೆಳಗೆ
F ಮತ್ತು O ನಡುವೆ ದರ್ಪಣದ ಹಿಂದೆ ದೊಡ್ದದು ಆಗಿರುತ್ತದೆ ಮಿಥ್ಯ ಮತ್ತು ನೇರ

ಸಮಸ್ಯೆಗಳನ್ನು ಬಿಡಿಸುವಾಗ ಗಮಣನಿಸಬೇಕಾದ ಅಂಶಗಳು

ನಿಮ್ನ ದರ್ಪಣದ ಸಂಗಮದೂರವು -ve ಆಗಿರುತ್ತದೆ. ಪೀನ ದರ್ಪಣದ ಸಂಗಮದೂರವು +ve ಆಗಿರುತ್ತದೆ.
ನಿಮ್ನ ಮಸೂರದ ಸಂಗಮದೂರವು -ve ಆಗಿರುತ್ತದೆ. ಪೀನ ಮಸೂರದ ಸಂಗಮದೂರವು +ve ಆಗಿರುತ್ತದೆ.
ನಿಮ್ನ ಮಸೂರದ ಸಾಮಥ್ಯವು -ve ಆಗಿರುತ್ತದೆ. ಪೀನ ಮಸೂರದ ಸಾಮಥ್ಯವು +ve ಆಗಿರುತ್ತದೆ.
ದರ್ಪಣ/ ಮಸೂರಗಳಲದಲಿ ವಸ್ತುದೂರವು ಯಾವಾಗಲು -ve ಆಗಿರುತ್ತದೆ.
ಸತ್ಯ ಬಿಂಬದ ವರ್ಧನೆಯು -ve ಆಗಿರುತ್ತದೆ.
ಮಿಥ್ಯ ಬಿಂಬದ ವರ್ಧನೆಯು +ve ಆಗಿರುತ್ತದೆ.