बसंत की सच्चाई

सारांश

बसंत नाम का एक गरीब शरणार्थी लड़का था। वह अपने भाई प्रताप के साथ भीखू अहीर के घर में रहता था।वे दोनों अनाथ थे । दंगों में उनके माता-पिता मर चुके थे।बसंत एक स्वाभिमानी लड़का था। बाजार में बटन, दियासलाई,छलनी आदी चीजें बेचता था।एक दिन की बात है उसकी कोई चीजें बिकी नहीं थीं। तभी मजदूरों नेता पंडित राजकिशोर आते हैं। चीजें खरिदने के लिए बसंत उनसे बार बार विनती करता है तो वे दो पैसे भीख देना चाहते हैं। बसंत के भीख लेने से इनकार करने पर उसके स्वाभिमान से प्रेरित होकर छलनी खरिदते हैं और बदले में एक रूपये देते हैं।पंडित राजकिशोर को साडे चौदह आने लौटाने थे। नोट भुनाने के लिए बसंत चला गया मगर कई समय तक वापस लौटा नहीं।पंडित राजकिशोर के पैसे लौटाने प्रताप किशनगंज आया।वास्तव में नोट भुनाकर लौटते समय बसंत मोटर के नीचे आगया था।उसके पैर कुचले गये थे।वह बेहोश हो गया था। होश आने पर उसीने प्रताप को किशनगंज भेजा था । पंडित राजकिशोर परदुःख कातर व्यक्ति थे।बसंत के बारे में सुनकर वे खुद अहीर टीला आये।अमरसिंह से कहकर डा. वर्मा को अहीर टीला बुलवाया।घायल बसंत की चिकित्सा की।

ಕನ್ನಡ ಸಾರಾಂಶ

ಬಸಂತ ಎಂಬ ಒಬ್ಬ ಬಡ ಅನಾಥ ಹುಡುಗನಿದ್ದನು. ಅವನು ತನ್ನ ತಮ್ಮ ಪ್ರತಾಪನ ಜೊತೆಗೆ ಭಿಖು ಎಂಬ ಗೊಲ್ಲನ ಮನೆಯಲ್ಲಿ ಇರುತ್ತಿದ್ದನು. ದಂಗೆಯಲ್ಲಿ ಅವರ ತಂದೆ-ತಾಯಿ ಮರಣ ಹೊಂದಿದ್ದರು. ಬಸಂತ ಒಬ್ಬ ಸ್ವಾಭಿಮಾನಿ ಹುಡುಗನಾಗಿದ್ದ. ಪೇಟೆಯಲ್ಲಿ ಬೆಂಕಿ ಪೊಟ್ಟಣ, ಬಟನ್, ಸಾಣಿಗೆಯನ್ನು ಮಾರುತ್ತಿದ್ದ. ಒಂದು ದಿನ ಅವನ ಯಾವ ವಸ್ತುಗಳು ಮಾರಾಟವಾಗಿರಲಿಲ್ಲ. ಅದೆ ಸಮಯಕ್ಕೆ ಕಾರ್ಮಿಕರ ನಾಯಕ ಪಂಡಿತ ರಾಜ ಕಿಶೋರರು ಅಲ್ಲಿ ಆಗಮಿಸುತ್ತಾರೆ. ಬಸಂತ ಅವರಲ್ಲಿ ಸಾಕಷ್ಟು ಬಾರಿ ಖರೀಧಿ ಮಾಡಲು ವಿನಂತಿ ಮಾಡಿದಾಗ ಎರಡು ಪೈಸೆ ಭಿಕ್ಷೆ ನೀಡಲು ಮುಂದಾಗುತ್ತಾರೆ. ಆದರೆ ಬಸಂತ ಭಿಕ್ಷೆ ಪಡೆಯಲು ನಿರಾಕರಿಸಿದಾಗ ಅವನ ಸ್ವಾಭಿಮಾನದಿಂದ ಪ್ರೇರಣೆಗೊಂಡು ಸಾಣಿಗೆ ಖರೀಧಿಸಲು ಒಂದು ರೂಪಾಯಿ ನೀಡುತ್ತಾರೆ. ಪಂಡಿತ ರಾಜಕಿಶೊರರ ಹದಿನಾಲ್ಕುವರೆ ಆಣೆ ಮರಳಿಸಲು ಚಿಲ್ಲರೆ ಮಾಡಲು ಹೋದ ಬಸಂತ ಬಹಳ ಹೊತ್ತಿನವರೆಗೆ ಮರಳಿ ಬರುವುದಿಲ್ಲ. ಪಂಡಿತ ರಾಜ ಕಿಶೋರರ ಹಣವನ್ನು ಮರಳಿಸಲು ಪ್ರತಾಪ ಕಿಶನಗಂಜಗೆ ಬರುತ್ತಾನೆ. ವಾಸ್ತವದಲ್ಲಿ ಚಿಲ್ಲರೆ ಮಾಡಿ ಬರುವಾಗ ಅವನು ಗಾಡಿಯ ಕೆಳಗೆ ಬಂದಿದ್ದ. ಅವನ ಕಾಲುಗಳು ಜಜ್ಜಿ ಹೋಗಿದ್ದವು. ಅವನು ಎಚ್ಚರ ತಪ್ಪಿದ್ದ. ಎಚ್ಚರವಾದ ಮೇಲೆ ಅವನೆ ಪ್ರತಾಪನಿಗೆ ಕಳುಹಿಸಿ ಕೊಟ್ಟಿದ್ದ. ಪಂಡಿತ ರಾಜ ಕಿಶೋರರು ಪರದುಃಖ ಕಾತರದ ವ್ಯಕ್ತಿಯಾಗಿದ್ದರು. ಬಸಂತನ ಕುರಿತಾಗಿ ಕೇಳಿ ಅವರೇ ಸ್ವತಃ ಅಹೀರ ಟೀಲಾ ಬಂದರು. ಅಮರಸಿಂಹನಿಗೆ ಹೇಳಿ ಡಾ. ವರ್ಮಾರನ್ನು ಅಲ್ಲಿಗೆ ಕರೆಸಿಕೊಂಡರು ಹಾಗೂ ಬಸಂತನಿಗೆ ಚಿಕಿತ್ಸೆ ನೀಡಿದರು.