ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
ಪಾಠದ ಸಾರಾಂಶ
ಪೀಠಿಕೆ
       ಬ್ರಿಟಿಷ್ ಈಸ್ಟ ಇಂಡಿಯಾ ಕಂಪನಿ ಆರಂಭದಲ್ಲಿ ಕೇವಲ ವ್ಯಾಪಾರ ಕಂಪನಿಯಾಗಿ ತನ್ನ ವ್ಯಾಪಾರ ಹಿತಾಸಕ್ತಿಗಳನ್ನು ಮಾತ್ರ ಕಾಪಾಡಿ ಕೊಂಡು ಬರುವ ಕೆಲಸ ಮಾಡುತ್ತಿತ್ತು.ಆದರೆ ತದನಂತರ ಭಾರತದ ರಾಜರುಗಳ ನಡುವೆ ಒಡೆದು ಆಳುವ ನೀತಿ ಬಳಸಿ ಒಂದೊಂದೆ ರಾಜ್ಯಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಅದಕ್ಕಾಗಿ ಯುದ್ಧ ಮತ್ತು ಸಂಧಾನ ಮಾರ್ಗಗಳನ್ನು ಸರಿಯಾಗಿ ಬಳಸಿಕೊಂಡರು. ಗಳಿಸಿಕೊಂಡ ಭಾರತವನ್ನು ಉಳಿಸಿಕೊಳ್ಳಲು ನಾನಾ ಕ್ಷೇತ್ರಗಳಲ್ಲಿ ಅನೇಕ ಸುಧಾರಣೆ ತಂದರು ಇದರ ಫಲ ಭಾರತದ ಶಿಕ್ಷಣ, ನ್ಯಾಯಾಂಗ, ಕಂದಾಯ ಕೃಷಿ, ವ್ಯಾಪಾರ ಆಡಳಿತ ಕ್ಷೇತ್ರದಲ್ಲಿ ಸಾಕಷ್ಟು ಪರಿಣಾಮ ಬೀರಿತು.
* ಭಾರತೀಯರಿಗೆ ಸೇನೆಯಲ್ಲಿ ಸಿಗುತ್ತಿದ್ದ ಅತ್ಯುನ್ನತ ಹುದ್ದೆ ಎಂದರೆ “ ಸುಬೇದಾರ್ “ ಸ್ಥಾನ.
* “ ಪೀಲ್ “ ನೇತೃತ್ವದ ಸಮಿತಿಯ ಸಿಫಾರಸ್ಸಿನಂತೆ ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲಾಯಿತು.
* ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ “ವಾರನ್ ಹೇಸ್ಟಿಂಗ್ಸ”. ಈತ ಕಲ್ಕತ್ತಾ ಮದರಸಾ ಆರಂಭಿಸಿದ.
* ಜೋನಾಥನ್ ಡಂಕನ್ ಎನ್ನುವವನು ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜ್ ಆರಂಭಿಸಿದ.
* ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು “ಚಾರ್ಲ್ಸ ಗ್ರಾಂಟ್”.
* ಗವರ್ನರ್ ವಿಲಿಯಂ ಬೆಂಟಿಂಕ್ ಆಂಗ್ಲ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ಕೊಟ್ಟ.
* ಮೆಕಾಲೆ ಗವರ್ನರ್ ಜನರಲ್ ನ ಕಾರ್ಯಾಂಗ ಸಭೆಗೆ ಆಯ್ಕೆಯಾದ ಮೊದಲ ಕಾನೂನು ಸದಸ್ಯ.
* ಇಂಗ್ಲಿಷ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೆಕಾಲೆ ಕೊಟ್ಟ ವರದಿಯೆ “ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ” ತಳಹದಿಯಾಯಿತು.
* ಸರ್ ಚಾರ್ಲ್ಸ ವುಡ್ ಆಯೋಗದ ಶಿಪಾರಸ್ಸಿನಂತೆ ಗವರ್ನರ್ ಡಾಲ್ ಹೌಸಿ “ಕಲ್ಕತ್ತಾ, ಬಾಂಬೆ, ಮತ್ತು ಮದರಾಸು” ಗಳಲ್ಲಿ ವಿಶ್ವವಿದ್ಯಾಲಯಗಳನ್ನು ಆರಂಭಿಸಿದ. ಇಲ್ಲಿಂದ ಶಿಕ್ಷಣ ಸಾರ್ವತ್ರಿಕರಣಗೊಳ್ಳತೊಡಗಿತು.
* ವಾರ್ಷಿಕವಾಗಿ ಈಸ್ಟ ಇಂಡಿಯಾ ಕಂಪನಿ ಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು “ಅಪರಾಧ ತೆರಿಗೆ” ಎಂದವನು “ಎಡ್ಮಂಡ್ ಬರ್ಕ್”.
* ಚರ್ಚ್ / ಕ್ರೈಸ್ತ ಮಿಶನರಿಗಳಿಗೆ ಭಾರತಕ್ಕೆ ಅಧಿಕೃತ ಪ್ರವೇಶ ಕೊಟ್ಟ ಶಾಸನ 1813ರ ಚಾರ್ಟರ್ ಕಾಯ್ದೆ.