ಕಾರ್ಬನ್ ಮತ್ತು ಅದರ ಸಂಯುಕ್ತಗಳು
ಒಂದು ಅಂಕದ ಪ್ರಶ್ನೆಗಳು
ಉತ್ತರ: ರಾಸಾಯನಿಕವಾಗಿ ಬದಲಾವಣೆಗೆ ಒಳಪಡದೆ ಕ್ರಿಯಾ ದರದಲ್ಲಿ ಬದಲಾವಣೆ ತರುವ ವಸ್ತುಗಳಿಗೆ ಕ್ರಿಯಾವರ್ಧಕಗಳು ಎನ್ನುವರು.
ಉತ್ತರ: ಹೈಡ್ರೋಜನ್ ಮತ್ತು ಕಾರ್ಬನ್ ನ್ನು ಒಳಗೊಂಡಿರುವ ಸಂಯುಕ್ತಕ್ಕೆ ಹೈಡ್ರೋಕಾರ್ಬನ್ ಗಳು ಎನ್ನುವರು.
ಉತ್ತರ: CH4
ಉತ್ತರ: ಸಹವೆಲೆನ್ಸಿ ಬಂಧ.
ಉತ್ತರ: ಫೇಲ್ಡ್ ಡಿಯಮ್.
ಉತ್ತರ: ಏಳು ಕೋವೆಲೆಂಟ್ ಬಂಧ.
ಉತ್ತರ: ಇಂಧನವು ಸಂಪೂರ್ಣವಾಗಿ ದಹನ ಹೊಂದುತ್ತಿಲ್ಲ ಎಂದು ಅರ್ಥ.
ಉತ್ತರ: ಸಾಬೂನು ಗಡಸು ನೀರಿನೊಂದಿಗೆ ವರ್ತಿಸಿದಾಗ ಬಿಳಿ ಬಣ್ಣದ ಅವಕ್ಷೇಪ ಉಂಟಾಗುತ್ತದೆ. ಇದೇ ಕಲ್ಮಶ.
ಉತ್ತರ: 6
ಉತ್ತರ : ಬ್ಯೂಟ ನಾಲ್. CH3-CH2-CH2-CH2-OH.
ಎರಡು ಅಂಕದ ಪ್ರಶ್ನೆಗಳು
ಉತ್ತರ : ಒಂದೇ ಅಣುಸೂತ್ರ ವನ್ನು ಹೊಂದಿದ್ದು ಬೇರೆ ಬೇರೆ ರಚನಾಸೂತ್ರ ವನ್ನು ಹೊಂದಿರುವ ಸಾವಯವ ಸಂಯುಕ್ತಗಳ ವಿದ್ಯಮಾನವನ್ನು ಸಮಾಂಗತೆ ಎನ್ನುವರು.
ಉದಾಹರಣೆ: n ಬ್ಯೂಟೇನ್ ಮತ್ತು ಐಸೋ ಬ್ಯೂಟೇನ್.
ಉತ್ತರ : ಕೆಟನೀಕರಣ, ಟೆಟ್ರಾ ವೆಲೆನ್ಸಿ, ಸಮಾಂಗತೆ, ಕಾರ್ಬನ್ ನ ಅನನ್ಯ ಗುಣ.
ಉತ್ತರ : ಎಥೆನಾಲ್ ನ್ನು ಎಥನೋಯಿಕ್ ಆಮ್ಲವಾಗಿ ಪರಿವರ್ತಿಸುವಾಗ 2 ಹೈಡ್ರೋಜನ್ ತೆಗೆದು ಒಂದು ಆಕ್ಸಿಜನ್ ಸೇರಿಸಲಾಗುವುದು. ಆದ್ದರಿಂದ ಉತ್ಕರ್ಷಣ ಕ್ರಿಯೆ ಆಗಿದೆ.
ಉತ್ತರ : ಯಾವ ರಾಸಾಯನಿಕಗಳು ಆಕ್ಸಿಜನ್ ಅನ್ನು ಬೇರೆ ರಾಸಾಯನಿಕಗಳಿಗೆ ಒದಗಿಸುತ್ತವೆ ಅವುಗಳಿಗೆ ಉತ್ಕರ್ಷಣಕಾರಿಗಳು ಎನ್ನುವರು.
ಉತ್ತರ :
ಇಲ್ಲ. ಏಕೆಂದರೆ ಮಾರ್ಜಕಗಳು ಗಡಸು ನೀರಿನ ಜೊತೆಗೆ ಚೆನ್ನಾಗಿ ನೊರೆಯನ್ನು ಕೊಡುತ್ತವೆ. ಆದರೆ ಸಾಬೂನು ಮಾತ್ರ ಗಡಸು ನೀರಿನ ಜೊತೆ ಹೆಚ್ಚಾದ ನೊರೆಯನ್ನು ಕೊಡುವುದಿಲ್ಲ.
ಉತ್ತರ: ಒಂದೇ ಸಾಮಾನ್ಯ ಅಣುಸೂತ್ರ ಒಂದೇ ರೀತಿಯ ರಾಸಾಯನಿಕ ಗುಣ ಹಾಗೂ ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವು ಒಂದೇ ಆಗಿರುವ ಸಾವಯವ ಸಂಯುಕ್ತಗಳು ವರ್ಗಕ್ಕೆ ಅನುರೂಪ ಶ್ರೇಣಿ ಎನ್ನುವರು.
ಉತ್ತರ: ಗಡಸು ನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಲವಣಗಳು ಇರುತ್ತವೆ. ಅವು ಸಾಬೂನಿನ ಅಣುಗಳ ಒಡನೆ ವರ್ತಿಸಿ ನೀರಿನಲ್ಲಿ ವಿಲೀನವಾಗದೆ ಕಲ್ಮಶವು ನೀರಿನ ಮೇಲ್ಮೈಗೆ ಬಂದು ತೇಲುತ್ತಿರುತ್ತದೆ.
ಉತ್ತರ : ಸಾಬೂನು ಪ್ರತ್ಯಾಮ್ಲೀಯ ಗುಣ ಹೊಂದಿರುವುದರಿಂದ ಸಾಬೂನಿನ ದ್ರಾವಣದಲ್ಲಿ ಕೆಂಪು ಲಿಟ್ಮಸ್ ಕಾಗದವನ್ನು ಅದ್ದಿದಾಗ ನೀಲಿ ಬಣ್ಣಕ್ಕೆ ತಿರುಗುತ್ತದೆ. ನೀಲಿ ಲಿಟ್ಮಸ್ ಕಾಗದವನ್ನು ಅದ್ದಿದರೆ ಯಾವ ಬದಲಾವಣೆಯೂ ಆಗುವುದಿಲ್ಲ.
ಉತ್ತರ : ಆಲ್ಕೇನ್ ಗಳು ಪೂರ್ಣಪ್ರಮಾಣದಲ್ಲಿ ದಹಿಸುತ್ತವೆ. ಮತ್ತು ಉರಿಯದ ಕಾರ್ಬನ್ ಬಿಡುಗಡೆಯಾಗುವುದಿಲ್ಲ. ಆದ್ದರಿಂದ ನೀಲಿ ಅಥವಾ ಸ್ವಚ್ಛ ಜ್ವಾಲೆ ಉಂಟಾಗುತ್ತದೆ.
ಮೂರು/ನಾಲ್ಕು ಅಂಕದ ಪ್ರಶ್ನೆಗಳು
ಉತ್ತರ:
C6H14 ಮತ್ತು C4H10 ಗಳು ಪರ್ಯಾಪ್ತ ಹೈಡ್ರೋಕಾರ್ಬನ್ ಗಳು. ಏಕೆಂದರೆ ಇವು ಕಾರ್ಬನ್ ಕಾರ್ಬನ್ ಪರಮಾಣುಗಳ ನಡುವೆಯೇ ಏಕ ಬಂಧ ಹೊಂದಿವೆ. ಹಾಗಾಗಿ ಆಲ್ಕೇನ್ ಗಳ ಗುಂಪಿಗೆ ಸೇರಿವೆ
ಉತ್ತರ : ಆಮ್ಲ ಮತ್ತು ಆಲ್ಕೋಹಾಲ್ ಗಳ ನಡುವಿನ ಕ್ರಿಯೆಯಿಂದ ಉಂಟಾದ ಸಂಯುಕ್ತಕ್ಕೆ ಎಸ್ಟರ್ ಎನ್ನುವರು. ಈ ಕ್ರಿಯೆಗೆ ಎಸ್ಟರೀಕರಣ ಎನ್ನುವರು.
ಉದಾಹರಣೆ: CH3COOCHCH3, ಈಥೈಲ್ ಎಥನೋಯೇಟ್.
ಉಪಯೋಗ: ಸುವಾಸಿಕಗಳಲ್ಲಿ ಬಳಸುತ್ತಾರೆ.
ಎಥನಾಲ್ | ಎಥನೋಯಿಕ್ |
---|---|
ಲಿಟ್ಮಸ್ ಪರೀಕ್ ಷೆ- ಇದು ತಟಸ್ಥ ದ್ರವ ಹಾಗಾಗಿ ಲಿಟ್ಮಸ್ ಜೊತೆ ವರ್ತಿಸುವುದಿಲ್ಲ. | ನೀಲಿ ಲಿಟ್ಮಸ್ ಕೆಂಪು ಲಿಟ್ಮಸ್ ಆಗಿ ಬದಲಾಗುತ್ತದೆ. |
Na2CO3 ಜೊತೆ ವರ್ತಿಸುವುದಿಲ್ಲ. | Na2CO3 ಜೊತೆ ವರ್ತಿಸಿ ಕಾರ್ಬನ್ ಡೈಯಾಕ್ಸೈಡ್ ಬಿಡುಗಡೆ ಮಾಡುತ್ತದೆ. |
ಉತ್ತರ : ಉದ್ದ ಸರಪಳಿಯ ಕೊಬ್ಬಿನ ಆಮ್ಲಗಳ ಸೋಡಿಯಂ ಅಥವಾ ಪೊಟ್ಯಾಶಿಯಂ ಲವಣಗಳಿಗೆ ಸಾಬೂನು ಎನ್ನುವರು.
ಸಾಬೂನು | ಮಾರ್ಜಕ |
---|---|
ಮೆದು ನೀರಿನಲ್ಲಿ ಮಾತ್ರ ಹೆಚ್ಚು ನೊರೆ ಉಂಟುಮಾಡುತ್ತವೆ. | ಗಡಸು ನೀರಿನಲ್ಲಿ ಹೆಚ್ಚು ನೊರೆ ಉಂಟುಮಾಡುತ್ತವೆ. |
ಜೈವಿಕ ಶಿಥೀಲಿಯ. | ಜೈವಿಕ ಶಿಥೀಲಿಯವಲ್ಲ. |
ಉತ್ತರ:
CH2O ---> C2H4O, C3H6O, C4H8O
C2H2 ---> C3H4, C4H6, C5H8
C2H5COOH ---> C3H7COOH, C4H9COOH, C3H10COOH
ದುಷ್ಪರಿಣಾಮಗಳು:
* ಜೀವ ದ್ರವ್ಯವನ್ನು ಗಟ್ಟಿ ಮಾಡುತ್ತದೆ.
* ಕಣ್ಣಿನ ಚಾಕ್ಷುಷ ನರದ ಮೇಲೆ ದುಷ್ಪರಿಣಾಮ ಬೀರಿ ಅಂಧತ್ವಕ್ಕೆ ಕಾರಣವಾಗುತ್ತದೆ.
ಉತ್ತರ: ಕಾರ್ಬನ್ ಸಂಯುಕ್ತದ ವಿಶಿಷ್ಟ ಗುಣಗಳಿಗೆ ಕಾರಣವಾದ ಪರಮಾಣು ಅಥವಾ ಪರಮಾಣುಗಳ ಗುಂಪಿಗೆ ಕ್ರಿಯಾಗುಂಪುಗಳು ಎನ್ನುವರು.
ಉದಾಹರಣೆ:
OH ಆಲ್ಕೋಹಾಲ್
CHO ಆಲ್ಡಿಹೈಡ್
C ಕೀಟೋನ್
COOH ಕಾರ್ಬಾಕ್ಸಿಲಿಕ್ ಆಮ್ಲ
ಉತ್ತರ :
ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳು ಪೆಲ್ಲೇ ಡಿಯಮ್/ನಿಕ್ಕಲ್ ನಂತಹ ಕ್ರಿಯಾವರ್ಧಕಗಳ ಸಮ್ಮುಖದಲ್ಲಿ ಹೈಡ್ರೋಜನ್ ಜೊತೆ ಸೇರಿಕೊಂಡು ಪರ್ಯಾಪ್ತ ಹೈಡ್ರೋಕಾರ್ಬನ್ ಗಳನ್ನು ಉಂಟು ಮಾಡುವ ಕ್ರಿಯೆಗೆ ಸಂಕಲನ ಕ್ರಿಯೆ ಎನ್ನುವರು.
ಉತ್ತರ:
ಸಾಬೂನುಗಳು ಸ್ವಚ್ಛಗೊಳಿಸುವ ಪ್ರಕ್ರಿಯೆ:
* ಸಾಬೂನಿನ ಅಣುಗಳು ಉದ್ದ ಸರಪಳಿಯ ಕಾರ್ಬಾಕ್ಸಿಲಿಕ್ ಆಮ್ಲಗಳ ಸೋಡಿಯಂ ಅಥವಾ ಪೊಟ್ಯಾಶಿಯಂ ಲವಣಗಲಾಗಿವೆ.
* ಸಾಬೂನಿನ ಅಯಾನಿಕ್ ತುದಿ ನೀರಿನೊಂದಿಗೆ ವರ್ತಿಸಿದರೆ ಕಾರ್ಬನ್ ಸರಪಳಿಯ ಎಣ್ಣೆಯೊಂದಿಗೆ ವರ್ತಿಸುತ್ತದೆ .
* ಹೀಗೆ ವರ್ತಿಸಿ ಸಾಬೂನಿನ ಅಣುಗಳುಗಳು ನೀರಿನಲ್ಲಿ ಎಮಲ್ಷನ್ ಅನ್ನು ಉಂಟುಮಾಡುತ್ತದೆ.
* ಹೀಗೆ ಸಾಬೂನಿನ ಅಣುಗಳು ಮಿಸಲ್ ಗಳ ರಚನೆಯನ್ನು ಉಂಟುಮಾಡಿ ಕೊಳೆಯನ್ನು ಮೇಲ್ಮೈಗೆ ತರುತ್ತದೆ.
* ಇದನ್ನು ಉಜ್ಜುವಿಕೆಯಿಂದ ಮತ್ತು ನೀರಿನಲ್ಲಿ ಚಲಿಸುವುದರಿಂದ ಹೋಗಲಾಡಿಸಬಹುದ. ಈ ರೀತಿ ಕೊಳೆಯು ಹೊರಬಂದು ಸ್ವಚ್ಛವಾಗುತ್ತದೆ.
ಎಥನಾಲ್ | ಎಥನೋಯಿಕ್ |
---|---|
ಕೊಠಡಿಯ ಉಷ್ಣತೆಯಲ್ಲಿ ದ್ರಾವಣ ರೂಪದಲ್ಲಿರುತ್ತದೆ. | ಕೊಠಡಿಯ ಉಷ್ಣತೆಯಲ್ಲಿ ಹೆಪ್ಪುಗಟ್ಟಿರುತ್ತದೆ. |
ಸಿಹಿ ವಾಸನೆ ಹೊಂದಿರುತ್ತದೆ. | ಘಾಟು ವಾಸನೆ ಹೊಂದಿರುತ್ತದೆ. |
ಸೋಡಿಯಂ ಬೈಕಾರ್ಬೋನೇಟ್ ಜೊತೆ ವರ್ತಿಸುವುದಿಲ್ಲ. | ಸೋಡಿಯಂ ಬೈಕಾರ್ಬೋನೇಟ್ ಜೊತೆ ಗುರ್ತಿಸಿ ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿ ಮಾಡುತ್ತದೆ. |
ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗಿಸುವುದಿಲ್ಲ. | ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ. |