ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮ
ಒಂದು ಅಂಕದ ಪ್ರಶ್ನೆಗಳು
ಉತ್ತರ: ದಂಡಕಾಂತದ ಸುತ್ತಲೂ ಕಾಂತೀಯ ಬಲದ ಪ್ರಭಾವ ಇರುವ ಪ್ರದೇಶವನ್ನು ಕಾಂತಕ್ಷೇತ್ರ ಎನ್ನುವರು.
ಉತ್ತರ: ಕೆಂಪು
ಉತ್ತರ: ಒಂದು ವಾಹಕದಲ್ಲಿ ಬದಲಾಗುತ್ತಿರುವ ಕಾಂತಕ್ಷೇತ್ರವು ಇನ್ನೊಂದು ವಾಹಕದಲ್ಲಿ ವಿದ್ಯುತ್ರವಾಹವನ್ನು ಪ್ರೇರೇಪಿಸುತ್ತದೆ. ಈ ವಿದ್ಯಾಮಾನವನ್ನು ವಿದ್ಯುತ್ಕಾಂತೀಯ ಪ್ರೇರಣೆ ಎನ್ನುವರು.
ಉತ್ತರ: ವಿದ್ಯುತ್ಕಾಂತೀಯ ಪ್ರೇರಣೆಯ ತತ್ವವನ್ನು ಬಳಸಿ ಯಾಂತ್ರಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವತಿ೯ಸುವ ಸಾಧನವನ್ನು ವಿದ್ಯುತ ಜನಕ ಎನ್ನುವರು.
ಉತ್ತರ: ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನವನ್ನು ಮೋಟರ್ ಎನ್ನುವರು.
ಉತ್ತರ: ವಿದ್ಯುತ್ಪ್ರವಹಿಸುತ್ತಿರುವ ವಾಹಕವನ್ನು ಕಾಂತಕ್ಷೇತ್ರದಲ್ಲಿಟ್ಟಾಗ ಅದು ಯಾಂತ್ರಿಕ ಬಲವನ್ನು ಅನುಭವಿಸುತ್ತದೆ.
ಉತ್ತರ: ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರವನ್ನು ಸೊಲೆನಾಯ್ಡ್ ಎನ್ನವರು.
ಉತ್ತರ: ಬಲಗೈನ ಹೆಬ್ಬೆರೆಳು ತೋರುಬೆರಳು ಹಾಗೂ ಮಧ್ಯದ ಬೆರಳನ್ನು ಪರಸ್ಪರ ಲಂಬವಾಗಿರುವಂತೆ ಇರಿಸಿದಾಗ ತೋರುಬೆರೆಳು ಕಾಂತಕ್ಷೇತ್ರದ ದಿಕ್ಕನ್ನು, ಹೆಬ್ಬೆರೆಳು ವಾಹಕದ ಚಲನೆಯ ದಿಕ್ಕನ್ನು ಹಾಗೂ ಮಧ್ಯದ ಬೆರೆಳು ಪ್ರೇರಿತ ವಿದ್ಯುತ್ಪ್ರವಾಹದ ದಿಕ್ಕನ್ನು ಸೂಚಿಸುತ್ತದೆ.
ಉತ್ತರ: ಎಡಗೈನ ಹೆಬ್ಬೆರೆಳು ತೋರುಬೆರಳು ಹಾಗೂ ಮಧ್ಯದ ಬೆರಳನ್ನು ಪರಸ್ಪರ ಲಂಬವಾಗಿರುವಂತೆ ಇರಿಸಿದಾಗ ತೋರುಬೆರೆಳು ಕಾಂತಕ್ಷೇತ್ರದ ದಿಕ್ಕನ್ನು, ಮಧ್ಯದ ಬೆರೆಳು ವಿದ್ಯುತ್ಪ್ರವಾಹದ ದಿಕ್ಕನ್ನು ಹಾಗೂ ಹೆಬ್ಬೆರೆಳು ವಾಹಕದ ಮೇಲೆ ವತಿ೯ಸುವ ಚಲನೆಯ ಅಥವಾ ಬಲದ ದಿಕ್ಕನ್ನು ಸೂಚಿಸುತ್ತದೆ.
ಉತ್ತರ: ನಮ್ಮ ಬಲಗೈನಲ್ಲಿ ವಿದ್ಯುತ್ಪ್ರವಹಿಸುತ್ತಿರುವ ನೇರವಾದ ಒಂದು ವಾಹಕ ತಂತಿಯನ್ನು ಹಿಡಿದುಕೊಂಡಿದ್ದೇವೆಂದು ಭಾವಿಸಿದಾಗ ಹೆಬ್ಬೆರೆಳು ವಿದ್ಯುತ್ಪ್ರವಾಹದ ದಿಕ್ಕನ್ನು ಸೂಚಿಸುತ್ತದೆ. ಹಾಗೂ ಉಳಿದ ಬೆರೆಳುಗಳು ಕಾಂತಕ್ಷೇತ್ರದ ಕಾಂತೀಯ ಬಲರೇಖೆಗಳ ದಿಕ್ಕಿನಲ್ಲಿ ವಾಹಕದ ಸುತ್ತಲೂ ಸುತ್ತಿಕೊಂಡಿರುತ್ತದೆ.
ಉತ್ತರ: ಸಮಾಂತರ ಸರಳರೇಖೆಯಂತೆ ಇರುತ್ತದೆ.
ಉತ್ತರ: ಒಂದೇ ದಿಕ್ಕನಲ್ಲಿ ಪ್ರವಹಿಸುವ ವಿದ್ಯುತ್ಪ್ರವಾಹಕ್ಕೆ ನೇರ ವಿದ್ಯುತ್ಪ್ರವಾಹ ಎನ್ನುವರು.
ಉತ್ತರ: ವಿದ್ಯುತ್ ಫ್ಯಾನ್, ರೆಫ್ರಿಜರೇಟರ್, ಮಿಕ್ಷರ್, ವಾಷಿಂಗ್ ಮಷಿನ್,ಇತ್ಯಾದಿ.
ಉತ್ತರ: 220 ವೋಲ್ಟ್.
ಉತ್ತರ: ಸಮಯದ ಸಮಾನ ಕಾಲಾವಧಿಗಳಲ್ಲಿ ತನ್ನ ದಿಕ್ಕನ್ನು ಬದಲಾಯಿಸುವ ವಿದ್ಯುತ್ಪ್ರವಾಹವನ್ನು ಪಯಾ೯ಯ ವಿದ್ಯುತ್ಪ್ರವಾಹ ಎನ್ನುವರು.
ಉತ್ತರ: ನೇರ ವಿದ್ಯುತ್ ಜನಕದಲ್ಲಿ ದಿಕ್ಪರಿವತ೯ಕವಾಗಿ ಒಡಕು ಉಂಗುರವು ಕೆಲಸ ಮಾಡುತ್ತದೆ.
ಉತ್ತರ:
1. ಪ್ಯೂಸ್
2. ಭೂಸಂಪಕ೯ ತಂತಿ
ಉತ್ತರ: ಲಂಬವಾಗಿಟ್ಟಾಗ.
ಉತ್ತರ: ವಿದ್ಯುತ್ಕಾಂತೀಯ ಪ್ರೇರಣೆ
ಉತ್ತರ: ವಿದ್ಯುಚ್ಛಕ್ತಿಯನ್ನು ದೂರದ ಸ್ಥಳಗಳಿಗೆ ಹೆಚ್ಚಿನ ಶಕ್ತಿಯು ನಷ್ಟವಾಗುವುದಂತೆ ರವಾನಿಸಬಹುದು.
ಉತ್ತರ: ವಿದ್ಯುತ್ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುವ ಸಾಧನವನ್ನು ದಿಕ್ಪರಿವತ೯ಕ ಎನ್ನುವರು.
ಉತ್ತರ: ಗೆಲ್ವೆನೋಮೀಟರ್
ಉತ್ತರ: 50 ಹಟ್ಸ೯
ಎರಡು ಅಂಕದ ಪ್ರಶ್ನೆಗಳು
ಉತ್ತರ:
1. ಪಯಾ೯ಯ ವಿದ್ಯುತ್ ಜನಕವು ಜಾರು ಉಂಗುರಗಳನ್ನು ಹೊಂದಿದೆ. ಆದರೆ ನೇರ ವಿದ್ಯುತ್ ಜನಕವು ಒಡಕು ಉಂಗುರಗಳನ್ನು ಹೊಂದಿದೆ.
2.ಪಯಾ೯ಯ ವಿದ್ಯುತ್ ಜನಕವು ಪಯಾ೯ಯ ವಿದ್ಯುತ್ ಉಂಟುಮಾಡುತ್ತದೆ. ನೇರ ವಿದ್ಯುತ್ ಜನಕವು ನೇರ ವಿದ್ಯುತ್ ಉಂಟುಮಾಡುತ್ತದೆ.
3. ಪಯಾ೯ಯ ವಿದ್ಯುತ್ ಜನಕವು ದಿಕ್ಪರಿವತ೯ಕವನ್ನು ಹೊಂದಿಲ್ಲ. ನೇರ ವಿದ್ಯುತ್ ಜನಕವು ದಿಕ್ಪರಿವತ೯ಕವನ್ನು ಹೊಂದಿದೆ.
ಉತ್ತರ:
1.ಹಲವು ಉಪಕರಣಗಳನ್ನು ಒಂದೇ ಸಾಕೆಟ್ ಗೆ ಜೋಡಿಸಬಾರದು.
2.ಹೆಚ್ಚು ವಿದ್ಯುತ್ ಸಾಮಥ್ಯ೯ದ ಉಪಕರಣಗಳಾದ ಏರ್ ಕಂಡೀಷನರ್, ರೆಫ್ರಿಜರೇಟರ್, ವಾಟರ್ ಹೀಟರ್ ಇತ್ಯಾದಿಗಳನ್ನು ಏಕಕಾಲದಲ್ಲಿ ಒಟ್ಟಿಗೆ ಬಳಸಬಾರದು.
3. ವಿದ್ಯುತ್ ಮಂಡಲದಲ್ಲಿ ಉಂಟಾಗುವ ಓವರ್ ಲೋಡನಿಂದ ಉಂಟಾಗುವ ಹಾನಿ ತಪ್ಪಿಸಲು ವಿದ್ಯುತ್ ಫ್ಯೂಸ್ ಬಳಸಬೇಕು.
ಉತ್ತರ: ಹಸಿರು ಅವಾಹಕ ಹೊದಿಕೆ ಇರುವ ಭೂ ಸಂಪಕ೯ ತಂತಿಯನ್ನು ಮನೆಯ ಹತ್ತಿರ ಭೂಮಿಯ ಆಳದಲ್ಲಿ ಹೂಳಲಾಗಿರುವ ಲೋಹದ ತಟ್ಟೆಗೆ ಜೋಡಿಸಲಾಗುತ್ತದೆ. ಇದನ್ನು ಲೋಹದ ಮೇಲ್ಮೈ ಇರುವ ವಿದ್ಯುತ್ ಉಪಕರಣಗಳ ಸುರಕ್ಷತೆಗೆ ಬಳಸುತ್ತಾರೆ. ಉದಾ:- ಇಸ್ತ್ರಿ ಪೆಟ್ಟಿಗೆ, ಟೋಸ್ಟರ್ ಇತ್ಯಾದಿ. ಇದು ಕಡಿಮೆ ರೋಧವನ್ನು ಹೊಂದಿರುವ ವಿದ್ಯುತ್ಪ್ರವಾಹವನ್ನು ಉಂಟುಮಾಡುತ್ತದೆ. ಹೀಗಾಗಿ ಲೋಹದ ಮೇಲ್ಮೈ ಇರುವ ವಿದ್ಯುತ್ ಉಪಕರಣಗಳಲ್ಲಿ ಯಾವುದೇ ರೀತಿಯ ವಿದ್ಯುತ್ ಸೋರಿಕೆ ಉಂಟಾದರೆ ಅದರ ವಿಭವಾಂತರವನ್ನು ಭೂಮಿಯ ವಿಭವಾಂತರಕ್ಕೆ ಸಮನಾಗಿಸುತ್ತದೆ.ಮತ್ತು ಬಳಕದಾರರಿಗೆ ತೀವ್ರ ವಿದ್ಯುತ್ ಆಘಾತವಾಗುವುದಿಲ್ಲ.
ಉತ್ತರ: ಫ್ಯೂಸ್ ಒಂದು ಸುರಕ್ಷಾ ಸಾಧನವಾಗಿದ್ದು, ಅಯಾಚಿತವಾಗಿ ಉಂಟಾಗುವ ಹೆಚ್ಚಿನ ಪ್ರಮಾಣದ ವಿದ್ಯುತ್ಪ್ರವಾಹವನ್ನು ನಿಲ್ಲಿಸುವ ಮೂಲಕ ವಿದ್ಯುತ್ ಮಂಡಲ ಮತ್ತು ವಿದ್ಯುತ್ ಉಪಕರಣಗಳಿಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಫ್ಯೂಸ್ ನಲ್ಲಿ ಜರುಗುವ ಜೌಲ್ ನ ತಾಪದಿಂದ ಫ್ಯೂಸ್ ಕರಗಿ ಅದರಿಂದ ವಿದ್ಯುತ್ ಸಂಪಕ೯ ಕಡಿತಗೊಳ್ಳುತ್ತದೆ.
ಉತ್ತರ: ಕಾಂತಕ್ಷೇತ್ರವು ದಿಕ್ಕು ಮತ್ತು ಪರಿಮಾಣ ಎರಡನ್ನೂ ಹೊಂದಿರುವ ಪರಿಮಾಣವಾಗಿದೆ. ದಿಕ್ಷೂಚಿಯೊಳಗೆ ಅದರ ಉತ್ತರ ಧ್ರುವವು ತೋರಿಸುವ ದಿಕ್ಕನ್ನೇ ಕಾಂತಕ್ಷೇತ್ರದ ದಿಕ್ಕೆಂದು ತೆಗೆದುಕೊಳ್ಳಲಾಗಿತ್ತದೆ. ಸಾಂಪ್ರದಾಯಿಕವಾಗಿ ಕಾಂತಕ್ಷೇತ್ರದ ಬಲರೇಖಗಳು ಉತ್ತರ ಧ್ರುವದಿಂದ ಹೊರಡುತ್ತವೆ ಮತ್ತು ದಕ್ಷಿಣ ಧ್ರುವದಲ್ಲಿ ವಿಲೀನಗೊಳ್ಳುತ್ತವೆ. ಕಾಂತದೊಳಗೆ ಕ್ಷೇತ್ರರೇಖೆಗಳ ದಿಕ್ಕು ಅದರ ದಕ್ಷಿಣ ಧ್ರುವದಿಂದ ಉತ್ತರ ಧ್ರುವದ ಕಡೆಗಿರುತ್ತದೆ. ಆದ್ದರಿಂದ ಕಾಂತಕ್ಷೇತ್ರ ರೇಖೆಗಳು ಆವೃತ ವಕ್ರ ರೇಖೆಗಳು. ಎರಡು ಕ್ಷೇತ್ರರೇಖೆಗಳು ಒಂದನ್ನೊಂದು ಛೇದಿಸುವುದಿಲ್ಲ.
ಉತ್ತರ:
1. ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇಧಿಸುವುದಿಲ್ಲ.
2. ಉತ್ತರ ದ್ರುವದಲ್ಲಿ ಪ್ರಾರಂಭವಾಗಿ ದಕ್ಷಿಣ ದ್ರುವದಲ್ಲಿ ವಿಲೀನಗೊಳ್ಳುತ್ತದೆ.
3. ಆವೃತ ಜಾಲಗಳಾಗಿವೆ.
4. ಕಾಂತೀಯ ಬಲರೇಖೆಗಳ ಸಾಂದ್ರತೆಯು ಹೆಚ್ಚಾದಲ್ಲಿ ಕಾಂತಕ್ಷೇತ್ರದ ಬಲವು ಹೆಚ್ಚಾಗಿರುತ್ತದೆ.
ಉತ್ತರ: ವಿದ್ಯುತ್ ಮೋಟಾರ್ ಗಳಲ್ಲಿ ಸುರುಳಿಯಿಂದ ಸುತ್ತಲ್ಪಟ್ಟ ಮೃದು ಕಬ್ಬಿಣವನ್ನು ಬಳಸಲಾಗುತ್ತದೆ. ಮೃದು ಕಬ್ಬಿಣದ ಮೇಲೆ ತಂತಿ ತಂತಿ ಸುರುಳಿಯನ್ನು ಸುತ್ತಿರುವುದು ಮತ್ತು ಸುರುಳಿಗಳನ್ನು ಒಳಗೊಂಡ ವ್ಯವಸ್ಥೆಗೆ ಆರ್ಮೇಚರ್ ಎನ್ನುವರು. ಇದು ಮೋಟರ್ ನ ಶಕ್ತಿಯನ್ನು ಹೆಚ್ಚಿಸುತ್ತದೆ.
ಉತ್ತರ:
1.ಹಲವು ಉಪಕರಣಗಳನ್ನು ಒಂದೇ ಸಾಕೆಟ್ ಗೆ ಜೋಡಿಸಬಾರದು.
2.ಹೆಚ್ಚು ವಿದ್ಯುತ್ ಸಾಮಥ್ಯ೯ದ ಉಪಕರಣಗಳಾದ ಏರ್ ಕಂಡೀಷನರ್ ,ರೆಫ್ರಿಜರೇಟರ್, ವಾಟರ್ ಹೀಟರ್ ಇತ್ಯಾದಿಗಳನ್ನು ಏಕಕಾಲದಲ್ಲಿ ಒಟ್ಟಿಗೆ ಬಳಸಬಾರದು.
3. ವಿದ್ಯುತ್ ಮಂಡಲದಲ್ಲಿ ಉಂಟಾಗುವ ಓವರ್ ಲೋಡನಿಂದ ಉಂಟಾಗುವ ಹಾನಿ ತಪ್ಪಿಸಲು ವಿದ್ಯುತ್ ಫ್ಯೂಸ್ ಬಳಸಬೇಕು.
1. ಸಜೀವ ತಂತಿ ಮತ್ತು ತಟಸ್ಥ ತಂತಿಗಳು ಎರಡೂ ನೇರ ಸಂಪಕ೯ಕ್ಕೆ ಬಂದಾಗ ಓವರ್ ಲೋಡ್ ಉಂಟಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ಮಂಡಲದಲ್ಲಿ ವಿದ್ಯುತ್ ಪ್ರವಾಹವು ಥಟ್ಟನೆ ಬಹಳ ಹೆಚ್ಚಾಗುತ್ತದೆ. ಇದೇ ಶಾಟ೯ ಸಕೂ೯ಟ್.
2. ಸರಬರಾಜಾಗುವ ವೋಲ್ಟೇಜ್ ನ ಆಕಸ್ಮಿಕ ಹೆಚ್ಚಳದಿಂದ ಓವರ್ ಲೋಡ್ ಉಂಟಾಗುತ್ತದೆ.
3. ಹಲವು ಉಪಕರಣಗಳನ್ನುಒಂದೇ ಸಾಕೆಟ್ ಗೆ ಜೋಡಿಸುವುದರಿಂದ ಓವರ್ ಲೋಡ್ ಉಂಟಾಗುತ್ತದೆ.
4. ಈ ರೀತಿ ಉಂಟಾಗುವ ಓವರ್ ಲೋಡನಿಂದ ಶಾಟ೯ ಸಕೂ೯ಟ್ ಉಂಟಾಗುತ್ತದೆ.
ಮೂರು/ನಾಲ್ಕು ಅಂಕದ ಪ್ರಶ್ನೆಗಳು
ಉತ್ತರ:
1. ಪಯಾ೯ಯ ವಿದ್ಯುತ್ ಜನಕವು ಜಾರು ಉಂಗುರಗಳನ್ನು ಹೊಂದಿದೆ. ಆದರೆ ನೇರ ವಿದ್ಯುತ್ ಜನಕವು ಒಡಕು ಉಂಗುರಗಳನ್ನು ಹೊಂದಿದೆ.
2.ಪಯಾ೯ಯ ವಿದ್ಯುತ್ ಜನಕವು ಪಯಾ೯ಯ ವಿದ್ಯುತ್ ಉಂಟುಮಾಡುತ್ತದೆ. ನೇರ ವಿದ್ಯುತ್ ಜನಕವು ನೇರ ವಿದ್ಯುತ್ ಉಂಟುಮಾಡುತ್ತದೆ.
3. ಪಯಾ೯ಯ ವಿದ್ಯುತ್ ಜನಕವು ದಿಕ್ಪರಿವತ೯ಕವನ್ನು ಹೊಂದಿಲ್ಲ. ನೇರ ವಿದ್ಯುತ್ ಜನಕವು ದಿಕ್ಪರಿವತ೯ಕವನ್ನು ಹೊಂದಿದೆ.
ಉತ್ತರ:
ಅ) ಒಂದು ವಾಹಕದಲ್ಲಿ ಕಾಂತಕ್ಷೇತ್ರವು ಬದಲಾಗುತ್ತಿದ್ದರೆ ಇನ್ನೊಂದು ವಾಹಕದಲ್ಲಿ ವಿದ್ಯುತ್ಪ್ರವಾಹವನ್ನು ಪ್ರೇರೇಪಿಸುತ್ತದೆ.
ಆ) ನಾವು ಸುರುಳಿಯನ್ನು ಕಾಂತಕ್ಷೇತ್ರದಲ್ಲಿ ಚಲಿಸುವುದರ ಮೂಲಕ ಅಥವಾ ಅದರ ಸುತ್ತಲಿನ ಕಾಂತಕ್ಷೇತ್ರವನ್ನುಬದಲಾಯಿಸುವುದರ ಮೂಲಕ ವಿದ್ಯುತ್ಪ್ರವಾಹವನ್ನು ಪ್ರೇರೇಪಿಸಬಹುದು.
ಇ) ಸುರುಳಿಯ ಚಲನೆಯ ದಿಕ್ಕು ಕಾಂತಕ್ಷೇತ್ರಕ್ಕೆ ಲಂಬವಾಗಿರುವಾಗ ಅತಿ ಹೆಚ್ಚಿನ ಪ್ರಮಾಣದ ಪ್ರೇರಿತ ವಿದ್ಯುತ್ ಉತ್ಪತ್ತಿಯಾಗುವುದು.
ಉತ್ತರ:
ಅ) ಒಂದು ನಿರ್ದಿಷ್ಟ ದಿಕ್ಕಿಗೆ ವಿಚಲನೆ ಹೊಂದುತ್ತದೆ.
ಆ) ಸೂಚಕ ವಿರುದ್ಧ ದಿಕ್ಕಿಗೆ ವಿಚಲನೆ ಹೊಂದುತ್ತದೆ.
ಇ) ಗೆಲ್ವೆನೋಮೀಟರ್ ನಲ್ಲಿ ಯಾವುದೇ ವಿಚಲನೆ ಇರವುದಿಲ್ಲ.
ಉತ್ತರ:
ಅ)ಮ್ಯಾಕ್ಷವೆಲ್ ನ ಬಲಗೈ ಹಬ್ಬೆಟ್ಟಿನ ನಿಯಮ
ಆ)ಫ್ಲೇಮಿಂಗನ ಎಡಗೈ ನಿಯ
ಇ) ಫ್ಲೇಮಿಂಗನ ಬಲಗೈ ನಿಯಮ
ಉತ್ತರ:
ಉತ್ತರ: ಚಿತ್ರ 13.5 ಬಿಡಿಸುವುದು.
ವಿದ್ಯುತ್ ಮೋಟರ್ ಎಂಬುದು ತಿರುಗುವ ಸಾಧನವಾಗಿದ್ದು ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಅಪರಿವರ್ತಿಸುತ್ತದೆ.ವಿದ್ಯುತ್ ಮೋಟಾರ್ ಒಂದು ಅವಾಹಕ ಲೇಪನವಿರುವ ತಾಮ್ರದ ತಂತಿಯನ್ನೊಳಗೊಂಡ ಆಯತಾಕಾರದ ಸುರುಳಿ ABCD ಯನ್ನು ಹೊಂದಿದೆ.ಅಯಸ್ಕಾಂತದ ಎರಡು ಧ್ರುವಗಳ ನಡುವೆ ಸುರುಳಿಯನ್ನು ಇರಿಸಲಾಗಿದೆ.ಸುರುಳಿಯ AB ಮತ್ತು CD ಬದಿಗಳು ಕಾಂತಕ್ಷೇತ್ರದ ದಿಕ್ಕಿಗೆ ಲಂಬವಾಗಿರುತ್ತದೆ .ಸುರುಳಿಯ ತುದಿಗಳನ್ನು ಎರಡು ಒಡಕು ಉಂಗುರಗಳಾದ P ಮತ್ತು Q ಗಳಿಗೆ ಜೋಡಿಸಲಾಗಿದೆ.ಸುರುಳಿABCD ಯಲ್ಲಿನ ವಿದ್ಯುತ್ಪ್ರವಾಹವು ವಿದ್ಯುತ್ ಕೋಶದಿಂದ ವಾಹಕ ಕುಂಚ X ಮೂಲಕ ಪ್ರವೇಶಿಸಿ ಮತ್ತು ವಾಹಕ ಕುಂಚ Y ನ ಮೂಲಕ ವಿದ್ಯುತ್ ಕೋಶಕ್ಕೆ ವಾಪಸಾಗುತ್ತದೆ. AB ಯಲ್ಲಿ ವಿದ್ಯುತ್ A ದಿಂದ B ಮತ್ತು CD ಯಲ್ಲಿ C ದಿಂದD ಗೆ ಹರಿಯುತ್ತದೆ. AB ಬಾಹುವಿನ ವಿರುದ್ಧ ದಿಕ್ಕಿನಲ್ಲಿ CD ಬಾಹುವಿನಲ್ಲಿ ಹರಿಯುತ್ತದೆ. ಅರ್ಧ ಪರಿಬ್ರಮಣೆಯ ನಂತರ ಸುರುಳಿಯಲ್ಲಿನ ವಿದ್ಯುತ್ಪ್ರವಾಹವು ಹಿಮ್ಮುಖಗೊಳ್ಳುತ್ತದೆ. ಮತ್ತು DCBA ಮಾರ್ಗದಲ್ಲಿ ಪ್ರವಹಿಸುತ್ತದೆ. ಒಂದು ಮಂಡಲದಲ್ಲಿ ವಿದ್ಯುತ್ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುವ ಸಾಧನವನ್ನು ದಿಕ್ಪರಿವರ್ತಕ ಎನ್ನುತ್ತಾರೆ. ವಿದ್ಯುತ್ ಮೋಟಾರ್ ಗಳಲ್ಲಿ ಒಡಕು ಉಂಗುರಗಳು ದಿಕ್ಪರಿವರ್ತಕಗಳಾಗಿ ಕೆಲಸ ಮಾಡುತ್ತವೆ.ಪ್ರತಿ ಅರ್ಧ ಸುತ್ತಿನ ತಿರುಗುವಿಕೆಯಲ್ಲಿ ವಿದ್ಯುತ್ಪ್ರವಾಹದ ದಿಕ್ಕು ಹಿಮ್ಮುಖವಾಗುವುದು. ಇದು ಸುರುಳಿ ಮತ್ತು ದಂಡದ ನಿರಂತರ ಸುತ್ತುವಿಕೆಗೆ ಕಾರಣವಾಗುತ್ತದೆ.
ಉತ್ತರ:
ಪರ್ಯಾಯ ವಿದ್ಯುತ್ ಜನಕ:
1.ಗೃಹೋಪಯೋಗಕ್ಕೆ ಪರ್ಯಾಯ ವಿದ್ಯುತ್ತನ್ನು ಬಳಸುತ್ತೇವೆ.
2.ರೇಡಿಯೋ ಮತ್ತು ದೂರದರ್ಶನ ಪ್ರಸಾರದಲ್ಲಿ ಬೇಕಾಗುವ ರೇಡಿಯೋ ತರಂಗಗಳನ್ನು ಪಡೆಯಲು ಉಪಯೋಗಿಸುತ್ತಾರೆ.
3. ವೈದ್ಯಕೀಯ ಕ್ಷೇತ್ರಗಳಲ್ಲಿ ಬಳಸುವ ಅಲ್ಟ್ರಾಸೌಂಡ್ ಸ್ಕಾನಿಂಗ್ ನಲ್ಲಿ ಬಳಸುತ್ತಾರೆ.
ನೇರ ವಿದ್ಯುತ ಜನಕ :
1. ವಿದ್ಯುತ್ ವಿಭಜನೆಯಲ್ಲಿ ನೇರ ವಿದ್ಯುತ್ತನ್ನು ಪಡೆಯಲು ಬಳಸುತ್ತಾರೆ.
2. ಬೈಸಿಕಲ್ ಗಳಲ್ಲಿ ದೀಪವನ್ನು ಬೆಳಗಿಸಲು ಬಳಸುತ್ತಾರೆ.
3. ಮಕ್ಕಳ ಆಟಿಕೆಗಳಲ್ಲಿ ನೇರ ವಿದ್ಯುತ್ ಮೋಟರನ್ನು ಬಳಸುತ್ತಾರೆ.