ವಿದ್ಯುಚ್ಛಕ್ತಿ
ವಿದ್ಯುತ್ ಪ್ರವಾಹದ ನಿರಂತರ ಮತ್ತು ಆವೃತ ಮಾರ್ಗವನ್ನು ವಿದ್ಯುತ್ ಮಂಡಲ ಎಂದು ಕರೆಯಲಾಗುತ್ತದೆ.
ವಿದ್ಯುತ್ ಪ್ರವಾಹವು ಒಂದು ಏಕಮಾನ ಸಮಯದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಮಾಣ ಅಥವಾ ವಿದ್ಯುದಾವೇಶಗಳ ಪ್ರವಾಹದ ದರ.
ವಿದ್ಯುತ್ ಆವೇಶದ SI ಏಕಮಾನ ಕೂಲಮ್(C)(Coulomb). ಇದು ಸುಮಾರು 6x1018 ಎಲೆಕ್ಟ್ರಾನ್ ಗಳಿಗೆ ಸಮನಾಗಿರುತ್ತದೆ.
ವಿದ್ಯುತ್ ವಿಭವಾಂತರ
ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಆಗುವ ಕೆಲಸ. ವಿಭವಾಂತರವನ್ನು ಅಳೆಯುವ ಉಪಕರಣ ವೋಲ್ಟ್ ಮೀಟರ್.
ಓಮ್ ನ ನಿಯಮ
ಸ್ಥಿರ ತಾಪಮಾನದಲ್ಲಿ ವಿದ್ಯುತ್ ಮಂಡಲದಲ್ಲಿನ ಲೋಹದ ತಂತಿಯ ನಡುವಿನ ವಿಭವಾಂತರ (V) ಅದರ ಮೂಲಕ ಹರಿಯುವ ವಿದ್ಯುತ್ಪ್ರವಾಹಕ್ಕೆ (I) ನೇರ ಅನುಪಾತದಲ್ಲಿರುತ್ತದೆ.
ವಾಹಕದಲ್ಲಿ ಪ್ರವಹಿಸುವ ಆವೇಶಗಳ ಪ್ರವಾಹವನ್ನು ಪ್ರತಿರೋಧಿಸುವ ಗುಣವೇ ರೋಧ. ರೋಧದ SI ಏಕಮಾನ ಓಮ್.
ವಿದ್ಯುತ್ ವಿಭವಾಂತರದ ಮೂಲವನ್ನು ಬದಲಾಯಿಸದೆ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಉಪಯೋಗಿಸುವ ಉಪಕರಣವನ್ನು ಪರಿವರ್ತಿತ ರೋಧ ಎನ್ನುವರು. ವಿದ್ಯುತ್ ಮಂಡಲದಲ್ಲಿ ಅನೇಕ ಬಾರಿ ರೋಧವನ್ನು ಬದಲಾಯಿಸಲು ರಿಯೋಸ್ಟಾಟ್ ಎಂಬ ಸಾಧನವನ್ನು ಬಳಸಲಾಗುತ್ತದೆ.
ವಾಹಕದ ರೋಧವು ವಾಹಕದ ಉದ್ದ, ವಾಹಕದ ಅಡ್ಡಕೊಯ್ತ, ವಸ್ತುವಿನ ಪ್ರಾಕೃತಿಕ ಗುಣ ಮತ್ತು ತಾಪ ಇವುಗಳ ಮೇಲೆ ಅವಲಂಬಿಸಿದೆ.
ಬಹಳಷ್ಟು ರೋಧಕಗಳನ್ನು ಸರಣಿಯಲ್ಲಿ ಜೋಡಿಸಿದಾಗ, ಸಂಯೋಜನೆಯ ರೋಧವು Rs ವೈಯಕ್ತಿಕ ರೋಧಗಳಾದ R1, R2, R3 ಗಳ ಮೊತ್ತಕ್ಕೆ ಸಮನಾಗಿರುತ್ತದೆ.
ಸಮಾಂತರವಾಗಿ ಜೋಡಿಸಲಾದ ರೋಧಕಗಳ ಸಮೂಹದ ಸಮಾನ ರೋಧದ ವ್ಯುತ್ಕ್ರಮವು ಪ್ರತಿಯೊಂದು ರೋಧಕಗಳ ರೋಧದ ವ್ಯುತ್ಕ್ರಮಗಳ ಮೊತ್ತಕ್ಕೆ ಸಮನಾಗಿರುತ್ತದೆ.
ರೋಧಕಗಳ ಸರಣಿ ಸಂಯೋಜನೆಯಲ್ಲಿ ಮಂಡಲದ ಪ್ರತಿಯೊಂದು ಭಾಗದಲ್ಲಿ ಸಮನಾದ ವಿದ್ಯುತ್ ಪ್ರವಾಹವಿರುತ್ತದೆ.
ವಿದ್ಯುತ್ಪ್ರವಾಹದ ಉಷ್ಣೋತ್ಪಾದನಾ ಪರಿಣಾಮಕ್ಕೆ ಕಾರಣ ವಸ್ತುವಿನ ರೋಧ.
ಜೌಲ್ ನ ಉಷ್ಣೋತ್ಪಾದನಾ ನಿಯಮ H = I2Rt.
ವಿದ್ಯುತ್ ಇಸ್ತ್ರಿಪೆಟ್ಟಿಗೆ, ವಿದ್ಯುತ್ ಒಲೆ, ವಿದ್ಯುತ್ ಹೀಟರ್, ವಿದ್ಯುತ್ ಫ್ಯೂಸ್ ಮತ್ತು ವಿದ್ಯುತ್ ಕೆಟಲ್ ಗಳು ವಿದ್ಯುತ್ಪ್ರವಾಹದ ಉಷ್ಣೋತ್ಪಾದನಾ ಪರಿಣಾಮ ಆಧರಿಸಿದ ಸಾಧನಗಳು.
ವಿದ್ಯುನ್ಮಂಡಲದಲ್ಲಿ ಶಕ್ತಿ ಬಳಕೆಯಾಗುವ ಅಥವಾ ಕ್ಷೀಣಿಸುವ ದರವೇ ವಿದ್ಯುತ್ ಸಾಮರ್ಥ್ಯ. ಇದರ SI ಏಕಮಾನ ವ್ಯಾಟ್(W).
ವಿದ್ಯುತ್ ಶಕ್ತಿಯ ವ್ಯವಹಾರಿಕ ಏಕಮಾನ ಕಿಲೋ ವ್ಯಾಟ್ ಗಂಟೆ (kWh).