ಅನುವಂಶೀಯತೆ ಮತ್ತು ಜೀವವಿಕಾಸ

ಲೈಂಗಿಕ ಸಂತಾನೋತ್ಪತ್ತಿ ಮೂಲಕ ಹೊಸ ಜೀವಿಗಳು ಉಂಟಾದಾಗ ಹೆಚ್ಚು ಭಿನ್ನತೆಗಳು ಉಂಟಾಗುತ್ತದೆ.

ಒಂದು ಪ್ರೋಟೋನ್ ತಯಾರಿಕೆಗೆ ಬೇಕಾದ ಮಾಹಿತಿಯನ್ನು ಒದಗಿಸುವ ಡಿ.ಎನ್.ಎ. ಘಟಕವನ್ನು ಆ ಪ್ರೋಟೀನ್ ವಂಶವಾಹಿ ಎಂದು ಕರೆಯಲಾಗುತ್ತದೆ.

ಮಾನವರಲ್ಲಿ ಲಿಂಗಗಳು ಪೋಷಕರಿಂದ ಪಡೆದ ವಂಶವಾಹಿಗಳಿಂದ ನಿರ್ಧರಿಸಲ್ಪಡುತ್ತದೆ.

ತಂದೆಯಿಂದ X ವರ್ಣತಂತು ಪಡೆದ ಮಗು ಹುಡುಗಿಯಾಗುತ್ತದೆ. ಮತ್ತು Y ವರ್ಣತಂತುವನ್ನು ಪಡೆದ ಮಗು ಹುಡುಗನಾಗುತ್ತದೆ.

ನೈಸರ್ಗಿಕ ಆಯ್ಕೆಯು ಹೆಚ್ಚಿನ ಜೀವಿಗಳಲ್ಲಿ ಜೀವವಿಕಾಸವನ್ನು ನಿರ್ದೇಶಿಸುತ್ತಿದೆ. ಇದರ ಪರಿಣಾಮವಾಗಿ, ಜೀವಿ ತನ್ನ ಪರಿಸರಕ್ಕೆ ಉತ್ತಮವಾಗಿ ಹೊಂದಿಕೊಳ್ಳುವಂತೆ ರೂಪಾಂತರಗಳು ಉಂಟಾಗಿವೆ.

ಸಣ್ಣ ಸಮೂಹದಲ್ಲಿನ ನೈಸರ್ಗಿಕ ಅವಘಡಗಳು ಕೆಲವು ವಂಶವಾಹಿಗಳ ಪುನಾರಾವರ್ತನೆಯನ್ನು ಬದಲಾಯಿಸಿ ಹೊಂದಾಣಿಕೆಗಳಿಲ್ಲದೆ ವೈವಿಧ್ಯತೆಯನ್ನು ಒದಗಿಸುವುದು ಅನುವಂಶೀಯ ದಿಕ್ಚ್ಯುತಿ.

ಅಲೈಂಗಿಕ ಅಂಗಾಂಶಗಳಲ್ಲಾದ ಬದಲಾವಣೆಯು ಲಿಂಗಾಣು ಕೋಶದ ಡಿಎನ್ಎ ಗೆ ವರ್ಗಾವಣೆಯಾಗುವುದಿಲ್ಲವಾದ್ದರಿಂದ ಜೀವಿಯು ಜೀವಿತಾವಧಿಯಲ್ಲಿ ಪಡೆದ ಲಕ್ಷಣಗಳು ಅದರ ಸಂತತಿಗೆ ವರ್ಗಾವಣೆಗೊಳ್ಳುವದಿಲ್ಲ ಮತ್ತು ಜೀವವಿಕಾಸವನ್ನು ನಿರ್ದೇಶಿಸುವುದಿಲ್ಲ.

ಒಂದೇ ಸಾಮಾನ್ಯ ಪೂರ್ವಜರಿಂದ ಅನುವಂಶೀಯವಾಗಿದ್ದು, ಒಂದೇ ಮೂಲವಿನ್ಯಾಸ ಹೊಂದಿದ್ದು ವಿಭಿನ್ನ ಕಾರ್ಯಗಳನ್ನು ನಿರ್ವಸುವಂತೆ ಮಾರ್ಪಾಡಾಗಿರುವ ಅಂಗಗಳನ್ನು ಸಮರೂಪಿ ಅಂಗಗಳು ಎನ್ನುವರು.

ಭಿನ್ನ ಮೂಲದಿಂದ ಉಗಮವಾಗಿದ್ದು ಒಂದೇ ಕಾರ್ಯವನ್ನು ನಿರ್ವಹಿಸುವ ಅಂಗಗಳೇ ಕಾರ್ಯಾನುರೂಪಿ ಅಂಗಗಳು.

ಬಹುಕಾಲದ ಹಿಂದೆ ಸತ್ತ ಜೀವಿಯ ಸಂರಕ್ಷಿಸಲ್ಪಟ್ಟ ಅವಶೇಷವೇ ಪಳೆಯುಳಿಕೆ.

ಸಂತಾನೋತ್ಪತ್ತಿಯ ಸಮಯದಲ್ಲಿ ಡಿಎನ್ಎ ಯಲ್ಲಾಗುವ ಬದಲಾವಣೆಗಳೇ ಜೀವವಿಕಾಸದ ಮೂಲಭೂತ ಪ್ರಕ್ರಿಯೆಯಾಗಿದೆ.

ಭಿನ್ನತೆಗಳು ಭೌಗೋಳಿಕ ಬೇರ್ಪಡುವಿಕೆಯೊಂದಿಗೆ ಜೊತೆಗೂಡಿದಾಗ ಪ್ರಭೇದೀಕರಣ ಉಂಟಾಗಬಹುದು.

ನಿಸರ್ಗದ ಆಯ್ಕೆ ಹಾಗೂ ವಂಶವಾಹಿ ಹರಿವು ಒಟ್ಟಾಗಿ ಮೂಲ ಪ್ರಭೇದದೊಂದಿಗೆ ಸಂತಾನೋತ್ಪತ್ತಿ ಮಾಡಲಾಗದ ಜೀವಸಮೂಹವನ್ನು ಸೃಷ್ಟಿಸುತ್ತವೆ.