ಅನುವಂಶೀಯತೆ ಮತ್ತು ಜೀವವಿಕಾಸ
ಒಂದು ಅಂಕದ ಪ್ರಶ್ನೆಗಳು
ಉತ್ತರ: ಪ್ರಭೇದಗಳಲ್ಲಿ ಭಿನ್ನತೆ ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವ ಮೂಲಕ ಅವುಗಳ ಉಳಿವನ್ನು ಪ್ರೋತ್ಸಾಹಿಸುತ್ತದೆ.
ಉತ್ತರ: ಈ ಮಾಹಿತಿ A ಅಥವಾ O ಗುಣಗಳಲ್ಲಿ ಯಾವುದು ಪ್ರಬಲ ಎಂದು ಹೇಳಲು ಸಾಕಾಗುವುದಿಲ್ಲ. ರಕ್ತದ ಗುಂಪು ಒಂದು ಜೊತೆ ವಂಶವಾಹಿಗಳಿಂದ ನಿಯಂತ್ರಿಸಲ್ಪಡುತ್ತದೆ. ಮೇಲಿನ ಉದಾಹರಣೆಯಲ್ಲಿ ಮಗಳು ತಂದೆ ಮತ್ತು ತಾಯಿಯರಲ್ಲಿರುವ ವಂಶವಾಹಿನಿಗಳನ್ನು ಸ್ಪಷ್ಟಪಡಿಸಿಲ್ಲವಾದ್ದರಿಂದ ಈ ಮಾಹಿತಿ ಅಪೂರ್ಣವಾಗಿದೆ.
ಉತ್ತರ: ನಿರ್ದಿಷ್ಟ ಗುಣವಿರುವ ಜೀವಿಗಳು ಜೀವಿ ಸಮೂಹವೊಂದರಲ್ಲಿ ಹೆಚ್ಚಾಗುವ ವಿವಿಧ ರೀತಿಗಳು
ಅ) ನಿಸರ್ಗದ ಆಯ್ಕೆ
ಆ) ಅನುವಂಶೀಯ ದಿಕ್ಚ್ಯುತಿ
ಉತ್ತರ: ಅಲೈಂಗಿಕ ಅಂಗಾಂಶಗಳಲ್ಲಾದ ಬದಲಾವಣೆಯು ಲಿಂಗಾಣು ಕೋಶದ ಡಿಎನ್ಎ ಗೆ ವರ್ಗಾವಣೆಯಾಗುವುದಿಲ್ಲ. ಆದ್ದರಿಂದ ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಗಳಿಸಿಕೊಂಡ ಗುಣಗಳು ಅನುವಂಶೀಯವಾಗುವುದಿಲ್ಲ.
ಉತ್ತರ: ಇಲ್ಲ. ಏಕೆಂದರೆ ಸ್ವಕೀಯ ಪರಾಗಸ್ಪರ್ಶ ಹೊಂದುವ ಸಸ್ಯಪ್ರಭೇದಗಳಲ್ಲಿ ಯಾವುದೇ ಹೊಸ ಲಕ್ಷಣಗಳು ಅನುವಂಶೀಯ ಆಗುವದಿಲ್ಲ. ಆದ್ದರಿಂದ ಇಂತಹ ಸಸ್ಯಗಳ ಪ್ರಭೇದಿಕರಣದಲ್ಲಿ ಬೌಗೋಳಿಕ ಬೇರ್ಪಡುವಿಕೆಯು ಒಂದು ಪ್ರಮುಖ ಅಂಶವಾಗುವುದಿಲ್ಲ.
ಉತ್ತರ: ಮಾನವ ಮತ್ತು ಚಿಂಪಾಂಜಿಗಳನ್ನು ಹೋಲಿಸಿದಾಗ ದೇಹರಚನೆ ಮತ್ತು ವರ್ಣತಂತುಗಳಲ್ಲಿ ಅತಿಹೆಚ್ಚಿನ ಹೋಲಿಕೆ ಕಂಡು ಬರುತ್ತದೆ. ಹೀಗೆ ಹೆಚ್ಚು ಸಾಮ್ಯತೆ ಹೊಂದಿರುವ ಪ್ರಭೇದಗಳು ಜೀವ ವಿಕಾಸದ ನಿಯಮಗಳ ಪ್ರಕಾರ ಹೆಚ್ಚು ಹತ್ತಿರವಾಗಿದೆ ಎಂದು ತಿಳಿಯಬಹುದು.
ಉತ್ತರ: ಮಾನವರು ನೋಡರು ಪರಸ್ಪರ ವಿಭಿನ್ನವಾಗಿರುವ ಗಾತ್ರ, ಬಣ್ಣ ಮತ್ತು ರೂಪ ಹೊಂದಿದ್ದರೂ ತಮ್ಮ ತಮ್ಮಲ್ಲಿ ಸಂತಾನೋತ್ಪತ್ತಿ ನಡೆಸುವ ಸಾಮರ್ಥ್ಯ ಹೊಂದಿರುವುದರಿಂದ ಎಲ್ಲರನ್ನೂ ಒಂದೇ ಪ್ರಭೇದಕ್ಕೆ ಸೇರಿಸಲಾಗಿದೆ.
ಉತ್ತರ: ಎಲ್ಲವೂ. ಏಕೆಂದರೆ ಜೀವ ವಿಕಾಸ ಪ್ರಕ್ರಯೆಯಲ್ಲಿ ಬದಲಾದ ಪರಿಸರಕ್ಕೆ ಹೊಂದಿಕೊಂಡು ಅವು ಬದುಕಲು ಸಾಧ್ಯವಾಗಿದೆ.
ಉತ್ತರ: ತಿಳಿಗಣ್ಣಿಗೆ ಕಾರಣವಾದ ಗುಣ ಪ್ರಬಲವಾಗಿದೆ. ಏಕೆಂದರೆ ಮೊದಲನೇ ಪೀಳಿಗೆಯಲ್ಲಿ ಯಾವಾಗಲೂ ಪ್ರಬಲವಾದ ಗುಣವೇ ವ್ಯಕ್ತವಾಗುತ್ತದೆ.
ಉತ್ತರ : ಪಳೆಯುಳಿಕೆಗಳ ಕಾಲ ನಿರ್ಣಯಿಸುವ ಎರಡು ವಿಧಾನಗಳು:
1. ಸಾಪೇಕ್ಷ ವಿಧಾನ
2. ಪಳೆಯುಳಿಕೆಯಲ್ಲಿರುವ ಧಾತುವೊಂದರ ವಿವಿಧ ಸಮಸ್ಥಾನಿಗಳಿಗಿರುವ ಅನುಪಾತ ಲೆಕ್ಕಿಸುವುದು.
ಉತ್ತರ : ಒಂದು ಪ್ರೋಟೀನ್ ತಯಾರಿಕೆಗೆ ಬೇಕಾದ ಮಾಹಿತಿಯನ್ನು ಒದಗಿಸುವ ಡಿಎನ್ಎ ಘಟಕವೇ ಆ ಪ್ರೋಟೀನ್ ನ ವಂಶವಾಹಿ.
ಉತ್ತರ : ಸಣ್ಣ ಸಮೂಹದಲ್ಲಿನ ನೈಸರ್ಗಿಕ ಅವಘಡಗಳು ಕೆಲವು ವಂಶವಾಹಿಗಳ ಪುನಾರಾವರ್ತನೆಯನ್ನು ಬದಲಾಯಿಸಿ ಹೊಂದಾಣಿಕೆಗಳಿಲ್ಲದೆ ವೈವಿಧ್ಯತೆಯನ್ನು ಒದಗಿಸುವುದು ಅನುವಂಶೀಯ ದಿಕ್ಚ್ಯುತಿ.
ಉತ್ತರ : ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ರಭೇದಗಳಿಂದ ಹೊಸ ಪ್ರಭೇದ/ಪ್ರಭೇದಗಳು ಉಂಟಾಗುವುದನ್ನು ಪ್ರಭೇದೀಕರಣ ಎನ್ನುವರು.
ಎತ್ತರದ ಗುಣವು ಪ್ರಬಲವಾಗಿದ್ದು ಕುಬ್ಜ ಗುಣ ಅಪ್ರಬಲವಾಗಿರುವುದರಿಂದ ಎತ್ತರದ ಬಟಾಣಿ ಸಸ್ಯವನ್ನು ಕುಬ್ಜ ಬಟಾಣಿ ಸಸ್ಯದೊಂದಿಗೆ ಸಂಕರಿಸಿದಾಗ ಮೊದಲ ಪೀಳಿಗೆಯಲ್ಲಿ ಯಾವಾಗಲೂ ಎತ್ತರದ ಸಸ್ಯಗಳೇ ಉಂಟಾಗುತ್ತವೆ.
ಎರಡು ಅಂಕದ ಪ್ರಶ್ನೆಗಳು
ಉತ್ತರ : ಮೆಂಡಲ್ರು ಬಟಾಣಿ ಸಸ್ಯಗಳ ಮೇಲೆ ಸಸ್ಯದ ಹಲವು ವಿಭಿನ್ನ ಗೋಚರ ಗುಣವನ್ನು ಬಳಸಿಕೊಂಡರು. ಶುದ್ಧ ಎತ್ತರ (T T) ಸಸ್ಯವನ್ನು ಶುದ್ಧ ಗಿಡ್ಡ (tt) ಸಸ್ಯದೊಂದಿಗೆ ಅಡ್ಡಹಾಯಿಸಿದರು. F1 ಸಂತತಿಯಲ್ಲಿ ಎಲ್ಲಾ ಸಸ್ಯಗಳು Tt ಹೊಂದಿದ್ದ ಎತ್ತರದ ಸಸ್ಯಗಳಾಗಿದ್ದವು. ವ್ಯಕ್ತವಾಗ ಗುಣ ‘t’ ಪ್ರಬಲವಾಗಿದ್ದು F1 ಸಂತತಿಯಲ್ಲಿ ವ್ಯಕ್ತವಾಗದ ಗುಣ ದುರ್ಬಲವಾಗಿದೆ. F2 ಸಂತತಿಯಲ್ಲಿ ಸಸ್ಯಗಳು ಎತ್ತರವಾಗಿದ್ದು ಸಸ್ಯಗಳು ಕುಬ್ಜವಾಗಿದ್ದವು. ಹೀಗೆ ಗುಣಗಳ ಪ್ರಬಲ ಅಥವಾ ದುರ್ಬವಾಗಿರಬಹುದು ಎಂಬುದನ್ನು ಮೆಂಡಲ್ರ ಪ್ರಯೋಗಗಳು ತೋರಿಸುತ್ತವೆ.
ಉತ್ತರ : ಮಹಿಳೆಯರು ಲಿಂಗ ವರ್ಣತಂತುಗಳು ಪರಿಪೂರ್ಣ ಜೋಡಿಯನ್ನು ಹೊಂದಿದ್ದು, ಎರಡನ್ನೂ X ವರ್ಣತಂತುಗಳು ಎಂದು ಕರೆಯಲಾಗುತ್ತದೆ. ಆದರೆ ಪುರುಷರಲ್ಲಿ ಹೊಂದಿಕೆಯಾಗದ ಜೋಡಿಯಿದ್ದು, ಒಂದು ಸಾಮಾನ್ಯ ಗಾತ್ರದ X ಮತ್ತು ಇನ್ನೊಂದು ಚಿಕ್ಕದಾದ Y. ಆದ್ದರಿಂದ ಮಹಿಳೆಯರು XX ಪುರುಷರು XY ಆಗಿದ್ದಾರೆ. ತಂದೆಯಿಂದ X ವರ್ಣತಂತು ಪಡೆದ ಮಗು ಹುಡುಗಿಯಾಗುತ್ತದೆ ಮತ್ತು Y ವರ್ಣತಂತುವನ್ನು ಪಡೆದ ಮಗು ಹುಡುಗನಾಗುತ್ತದೆ.
ಉತ್ತರ : ಜೀವಿಸಮೂಹವೊಂದರಲ್ಲಿ ಜೀವಿಯೊಂದರ ಸಂಖ್ಯೆ ಕಡಿಮೆಯಾದಂತೆ ವಂಶವಾಹಿಗಳ ಹರಿವಿನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಭಿನ್ನತೆಗಳು ಕಡಿಮೆಯಾಗುತ್ತದೆ. ಇದು ಜೀವಿಯ ಉಳಿವಿಗೆ ಮಾರಕವಾಗಿವೆ. ಹುಲಿಗಳ ಸಂಖ್ಯೆ ಕಡಿಮೆಯಾದಂತೆ ಭಿನ್ನತೆಗಳ ಕೊರತೆಯಿಂದ ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲಾರದೆ ಅವುಗಳು ಅಳಿದು ಹೋಗುವ ಅಪಾಯವೂ ಹೆಚ್ಚುತ್ತದೆ.
ಉತ್ತರ : ಹೊಸ ಪ್ರಭೇದವೊಂದರ ಉಗಮಕ್ಕೆ ಕಾರಣವಾಗುವ ಅಂಶಗಳು:
ಅ) ವಂಶವಾಹಿಗಳ ಹರಿವು ಮತ್ತು ನಿಸರ್ಗದ ಆಯ್ಕೆ.
ಆ) ವರ್ಣತಂತುಗಳ ಸಂಖ್ಯೆಯಲ್ಲಿ ಬದಲಾವಣೆ.
ಇ) ಭೌಗೋಳಿಕವಾಗಿ ಪ್ರತ್ಯೇಕಿಸಲ್ಪಟ್ಟ ಉಪ ಸಮೂಹಗಳ ನಡುವೆ ಸಂತಾನೋತ್ಪತ್ತಿ.
ಉತ್ತರ : ಅಲೈಂಗಿಕ ಸಂತಾನೋತ್ಪತ್ತಿ ಮಾಡುವ ಜೀವಿಗಳ ಪ್ರಭೇದಿಕರಣದಲ್ಲಿ ಭೌಗೋಳಿಕ ಬೇರ್ಪಡುವಿಕೆಯು ಒಂದು ಪ್ರಮುಖ ಅಂಶವಾಗುವುದಿಲ್ಲ. ಏಕೆಂದರೆ ಅಲೈಂಗಿಕವಾಗಿ ಸಂತಾನೋತ್ಪತ್ತಿ ನಡೆಸುವ ಜೀವಿಗಳಲ್ಲಿ ಭಿನ್ನತೆಗಳು ಉಂಟಾಗುವ ಸಾಧ್ಯತೆಗಳು ಕಡಿಮೆ ಮತ್ತು ಗುಣಗಳು ಬದಲಾಗದೇ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಗೊಳ್ಳುತ್ತದೆ.
ಉತ್ತರ: ಚಿಟ್ಟೆಯ ರೆಕ್ಕೆ ಹಾಗೂ ಬಾವಲಿಯ ರೆಕ್ಕೆಗಳನ್ನು ಸಮರೂಪಿ ಅಂಗಗಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಇವೆರಡರ ರೆಕ್ಕೆಗಳ ವಿನ್ಯಾಸ, ರಚನೆ ಹಾಗೂ ಘಟಕಗಳು ಬಹಳ ವಿಭಿನ್ನವಾಗಿದೆ. ಅವು ಹಾರಾಡಲು ಬಳಕೆಯಾಗುವುದರಿಂದ ಒಂದೇ ರೀತಿ ಕಂಡರೂ ಅವುಗಳ ಮೂಲ ಒಂದೇ ಅಲ್ಲ. ಹಾಗಾಗಿ ಇವು ಕಾರ್ಯಾನುರೂಪಿ ಅಂಗಗಳು.
ಉತ್ತರ: ಸತ್ತ ಜೀವಿಯ ಸಂರಕ್ಷಿಸಲ್ಪಟ್ಟ ಅವಶೇಷಗಳನ್ನೂ ಪಳೆಯುಳಿಕೆಗಳು ಎನ್ನುವರು. ಇವುಗಳ ಅಧ್ಯಯನ ನಮಗೆ ಅಳಿದು ಹೋಗಿರುವ ಪ್ರಭೇದಗಳ ಲಕ್ಷಣಗಳನ್ನು ತಿಳಿಯಲು ಸಹಾಯಕವಾಗಿದೆ. ಈ ಲಕ್ಷಣಗಳನ್ನು ನಾವು ಜೀವಂತ ಪ್ರಭೇದಗಳೊಂದಿಗೆ ಹೋಲಿಸಿ ಜೀವ ವಿಕಾಸದ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿ ಅರಿಯಬಹುದು.
ಉತ್ತರ : ಜೀವಿಗಳ ನಡುವಿನ ಸಾಮ್ಯತೆಗಳ ಆಧಾರದ ಮೇಲೆ ಜೀವಿಗಳನ್ನು ವರ್ಗೀಕರಿಸಲಾಗುತ್ತದೆ. ಎರಡು ಪ್ರಭೇದಗಳ ಸಾಮನ್ಯ ಲಕ್ಷಣಗಳು ಹೆಚ್ಚಿದಂತೆಲ್ಲಾ ಅವುಗಳ ನಡುವಿನ ಸಂಬಂಧವೂ ನಿಕಟವಾಗುತ್ತದೆ. ನಿಕಟ ಸಂಬಂಧವಿದ್ದಷ್ಟೂ ಇತ್ತೀಚಿನ ಸಾಮಾನ್ಯ ಪೂರ್ವಜರನ್ನು ಹೊಂದಿರುತ್ತದೆ. ಹೀಗೆ ವರ್ಗೀಕರಣ ಜೀವವಿಕಾಸೀಯ ಸಂಬಂಧಗಳು ಪ್ರತಿಬಿಂಬವಾಗಿದೆ.
ಉತ್ತರ :
1. ದುಂಡಾದ ಬೀಜಗಳುಳ್ಳ ಎತ್ತರವಾದ ಸಸ್ಯ - 9
2. ದುಂಡಾದ ಬೀಜಗಳುಳ್ಳ ಕುಬ್ಜ ಸಸ್ಯ - 3
3. ಸುಕ್ಕಗಟ್ಟಿದ ಬೀಜಗಳುಳ್ಳ ಎತ್ತರದ ಸಸ್ಯ - 3
4. ಸುಕ್ಕಗಟ್ಟಿದ ಬೀಜಗಳುಳ್ಳ ಕುಬ್ಜ ಸಸ್ಯ - 1
ಅನುಪಾತ 9:3:3:1
ಉತ್ತರ : ವಿವಿಧ ಪ್ರಭೇದಗಳ ನಡುವಣ ಅನುವಂಶೀಯ ಸಂಬಂಧಗಳ ಅಧ್ಯಯನಕ್ಕೆ ಇರುವ ಪ್ರಮುಖ ಸಾಕ್ಷ್ಯಾಧಾರಗಳು:
1. ಪಳಯುಳಿಕೆಗಳ ಅಧ್ಯಯನ
2. ಸಮರೂಪಿ ಅಂಗಗಳ ಅಧ್ಯಯನ
3. ಕಾರ್ಯಾನುರೂಪಿ ಅಂಗಗಳ ಅಧ್ಯಯನ
4. ಡಿ.ಎನ್.ಎ ಅನುಕ್ರಮಣಿಗಳ ಅಧ್ಯಯನ
ಉತ್ತರ : ಪಳೆಯುಳಿಕೆಗಳ ಅಧ್ಯಯನದಿಂದ ಪಕ್ಷಿಗಳಲ್ಲಿ ಗರಿಗಳು ಅವುಗಳ ದೇಹವನ್ನು ಚಳಿಯಿಂದ ರಕ್ಷಿಸಲೆಂದೇ ಕಾಣಿಸಿಕೊಂಡಿರುವದು ಮತ್ತು ಕಾಲಾನುಕ್ರಮದಲ್ಲಿ ಪಕ್ಷಿಗಳು ಗರಿಗಳನ್ನು ಬಳಸಿ ಹಾರಲು ಹೊಂದಿಕೊಂಡಂತೆ ಕಾಣುತ್ತವೆ. ಸರೀಸೃಪಗಳಾದ ಡೈನೋಸಾರ್ ಗಳೂ ಗರಿಗಳನ್ನು ಹೊಂದಿರುವುದು ಕಂಡುಬಂದಿದೆ. ಹೀಗೆ ಪಕ್ಷಿಗಳ ಸರೀಸೃಪಗಳ ಅತಿ ಹತ್ತಿರದ ಸಂಬಂಧಿಗಳಾಗಿದೆ.
ಉತ್ತರ : ಮಾನವನಂತಹ ಜೀವಿಗಳಲ್ಲಿ ಅನುವಂಶೀಯ ದಿಕ್ಚ್ಯುತಿಯ ಮೂಲಕ ಭಿನ್ನತೆಗಳು ಉಂಟಾಗುವುದು ಸಾಧ್ಯವಿಲ್ಲ. ಏಕೆಂದರೆ ಮಾನವನಂತಹ ಜೀವಿಗಳು ವಿಶಾಲವಾದ ಭೂ ಭಾಗಗಳಲ್ಲಿ ಆವಾಸವನ್ನು ಹೊಂದಿದೆ. ಮತ್ತು ಸಮೂಹವು ಸಾಕಷ್ಟು ದೊಡ್ಡದಾಗಿದೆ. ನೈಸರ್ಗಿಕ ಅವಘಡಗಳು ವಂಶವಾಹಿಗಳು ಪುನರಾವರ್ತನೆಯನ್ನು ಬದಲಾಯಿಸುವುದಿಲ್ಲ.
ಉತ್ತರ :
ಎ) ಅವುಗಳ ಮೂಲವಿನ್ಯಾಸ ಒಂದೇ ಆಗಿದ್ದರೂ ವಿಭಿನ್ನ ಕಾರ್ಯಗಳನ್ನು ನಿರ್ವಹಿಸುವಂತೆ ರಚನೆ ಮಾರ್ಪಾಡಾಗಿದೆ.
ಬಿ) ಸಮರೂಪಿ ಅಂಗಗಳು.
ಮೂರು/ನಾಲ್ಕು ಅಂಕದ ಪ್ರಶ್ನೆಗಳು
ಉತ್ತರ: ಮೆಂಡಲ್ರ ದ್ವಿತಳೀಕರಣದ ಪ್ರಯೋಗದಲ್ಲಿ ದುಂಡಾದ ಬೀಜದ ಎತ್ತರವಾದ ಸಸ್ಯ ಹಾಗೂ ಸುಕ್ಕುಗಟ್ಟಿದ ಬೀಜದ ಕುಬ್ಜ ಸಸ್ಯಗಳನ್ನು ಅಡ್ಡಹಾಯಿಸಿದಾಗ F1 ಸಂತತಿಯಲ್ಲಿ ಎಲ್ಲಾ ಸಸ್ಯಗಳು ದುಂಡಾದ ಬೀಜದ ಎತ್ತರವಾದ ಸಸ್ಯಗಳೇ ಆಗಿದ್ದವು. ಆದರೆ F2 ಸಂತತಿಯಲ್ಲಿ ಕೆಲವು ಸಸ್ಯಗಳು ಹೊಸ ಸಂಯೋಜನೆಗಳಿಂದ ಸಹ ಕೂಡಿರುತ್ತವೆ. ಒಂದಿಷ್ಟು ಸಸ್ಯಗಳು ಎತ್ತರವಾಗಿರುತ್ತವೆ, ಆದರೆ ಸುಕ್ಕುಗಟ್ಟಿದ ಬೀಜಗಳನ್ನು ಹೊಂದಿದೆ. ಇನ್ನು ಕೆಲವು ಕಬ್ಜವಾಗಿದೆ, ಆದರೆ ದುಂಡಾದ ಬೀಜಗಳನ್ನು ಹೊಂದಿರುತ್ತವೆ. ಹೀಗೆ ಪ್ರತೀ ಗುಣವೂ ಇತರ ಗುಣದಿಂದ ಸ್ವತಂತ್ರವಾಗಿ ಅನುವಂಶೀಯವಾಗುತ್ತದೆ ಎಂದು ಮೆಂಡಲ್ರ ಪ್ರಯೋಗಗಳು ತೋರಿಸುತ್ತವೆ.
ಉತ್ತರ : ಒಂದೇ ಸಾಮಾನ್ಯ ಪೂರ್ವರಿಂದ ಅನುವಂಶೀಯವಾಗಿದ್ದು, ಒಂದೇ ಮೂಲವಿನ್ಯಾಸ ಹೊಂದಿದ್ದು, ವಿಭಿನ್ನ ಕಾರ್ಯಗಳನ್ನು ನಿರ್ವಸುವಂತೆ ಮಾರ್ಪಾಡಾಗಿರುವ ಅಂಗಗಳನ್ನು ಸಮರೂಪಿ ಅಂಗಗಳು ಎನ್ನುವರು. ಉದಾಹರಣೆ: ಹಲ್ಲಿಯ ಮುಂಗಾಲುಗಳು, ಪಕ್ಷಿಯ ರೆಕ್ಕೆಗಳು, ಮಾನವನ ಮುಂಗಾಲುಗಳು. ಭಿನ್ನ ಮೂಲದಿಂದ ಉಗಮವಾಗಿದ್ದು ಒಂದೇ ಕಾರ್ಯವನ್ನು ನಿರ್ವಹಿಸುವ ಅಂಗಗಳೇ ಕಾರ್ಯಾನುರೂಪಿ ಅಂಗಗಳು. ಉದಾಹರಣೆ:- ಚಿಟ್ಟೆ ಪಕ್ಷಿ ಮತ್ತು ಬಾವಲಿಯ ರೆಕ್ಕೆಗಳು.
ಉತ್ತರ : ಸಸ್ಯದಲ್ಲಿ ಉತ್ಪತ್ತಿಯಾಗುವ ರಾಸಾಯನಿಕವಾಗಿದ್ದು ಅದರ ಸಹಕಾರ ಮತ್ತು ನಿಯಂತ್ರಣಕ್ಕೆ ಪೂರಕವಾಗುವ ರಾಸಾಯನಿಕಗಳೇ ಸಸ್ಯ ಹಾರ್ಮೋನುಗಳು.
1. ಆಕ್ಸಿನ್ : ಜೀವಕೋಶವನ್ನು ಉದ್ದವಾಗಿರುತ್ತದೆ.
2. ಜಿಬ್ಬರಲಿನ್ : ಕಾಂಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
3. ಸೈಟೋಕೈನಿನ್ : ಕೋಶ ವಿಭಜನೆಯನ್ನು ಪ್ರಚೋದಿಸುತ್ತದೆ.
4. ಇಥಲೀನ್ : ಹಣ್ಣುಗಳು ಮಾಗಲು ಸಹಾಯಕ.
5. ಅಬ್ಸಿಸಿಕ್ ಆಮ್ಲ : ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಉತ್ತರ : ಲೈಂಗಿಕ ಸಂತಾನೋತ್ಪತ್ತಿಯಲ್ಲಿ ವಂಶವಾಹಿನಿಗಳಲ್ಲಿ ಬದಲಾವಣೆಗಳು ಉಂಟಾಗಿ ಭಿನ್ನತೆಗಳು ಉಂಟಾಗುವುದರಿಂದ ಅವು ಜೀವಗಳು ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಸಹಾಯಕರವಾಗಿದೆ. ಆದರೆ ಅಲೈಂಗಿಕ ಸಂತಾನೋತ್ಪತ್ತಿಯಲ್ಲಿ ವಂಶವಾಹಿಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಯಾವುದೇ ಹೆಚ್ಚಿನ ಬದಲಾವಣೆಗೆ ಒಳಪಡದೇ ವರ್ಗಾವಣೆಗೊಳ್ಳುವುದರಿಂದ ಅವು ಜೀವಿ ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಪೂರಕವಲ್ಲದೇ ಇರಬಹುದು. ಹೀಗೆ ಅಲೈಂಗಿಕ ಸಂತಾನೋತ್ಪತ್ತಿಯಿಂದಾದ ಭಿನ್ನತೆಗಳಿಗಿಂತ ಲೈಂಗಿಕ ಸಂತಾನೋತ್ಪತ್ತಿಯಿಂದಾದ ಭಿನ್ನತೆಗಳು ಹೆಚ್ಚು ಸಮರ್ಥಗಿರುತ್ತದೆ.
ಉತ್ತರ: ಪ್ರತಿಯಂದು ಜೀವಕೋಶವು ವರ್ಣತಂತುವೊಂದರ ಎರಡು ಪ್ರತಿಯನ್ನು ಹೊಂದಿರುತ್ತದೆ. ಹಾಗೂ ತಲಾ ಒಂದು ಪ್ರತಿಯನ್ನು ಗಂಡು ಮತ್ತು ಹೆಣ್ಣು ಪೋಷಕ ಜೀವಿಗಳಿಂದ ಪಡೆದಿರುತ್ತದೆ. ಪ್ರತಿಯೊಂದು ಲಿಂಗಾಣು ಕೋಶವು ತಂದೆಯ ಅಥವಾ ತಾಯಿಯ ವರ್ಣತಂತುವಿನ ಪ್ರತಿ ಜೋಡಿಯಿಂದ ಒಂದು ಪ್ರತಿ ಮಾತ್ರ ಪಡೆದುಕೊಳ್ಳುತ್ತದೆ. ಎರಡು ಲಿಂಗಾಣು ಕೋಶಗಳು ಸಂಯೋಗಗೊಂಡು ಪೀಳಿಗೆಯಲ್ಲಿ ನಿರ್ದಿಷ್ಟ ಸಂಖ್ಯೆಯ ವರ್ಣತಂತುಗಳನ್ನು ಪುನಃ ಸ್ಥಾಪಿಸುವ ಮೂಲಕ ಪ್ರಭೇದವೊಂದು ವರ್ಣತಂತುಗಳ ಸಂಖ್ಯೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ.
ಉತ್ತರ : ಇಲಿಗಳ ಬಾಲವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದರೆ, ಬಾಲವಿಲ್ಲದ ಈ ಇಲಿಗಳಿಂದ ಬಾಲವಿರುವ ಮರಿಇಲಿಗಳೇ ಹುಟ್ಟುತ್ತವೆಯೇ ಹೊರತು ಬಾಲವಿಲ್ಲದ ಮರಿಇಲಿಗಳು ಹುಟ್ಟುವುದಿಲ್ಲ. ಏಕೆಂದರೆ ಬಾಲವನ್ನು ಕತ್ತರಿಸಿದರೆ ಲಿಂಗಾಣು ಕೋಶಗಳ ವಂಶವಾಹಿಗಳು ಬದಲಾಗುವುದಿಲ್ಲ. ಹೀಗೆ ತನ್ನ ಜೀವಿತಾವಧಿಯಲ್ಲಿ ಜೀವಿಯು ಗಳಿಸಿದ ಲಕ್ಷಣಗಳನ್ನು ಅದರ ಸಂತತಿಗೆ ವರ್ಗಾಯಿಸಲು ಸಾಧ್ಯವಿಲ್ಲ.
ಉತ್ತರ: ಸಸ್ಯದ ಎತ್ತರ ಒಂದು ನಿರ್ದಿಷ್ಟ ಸಸ್ಯ ಹಾರ್ಮೋನ್ ನ ಪ್ರಮಾಣವನ್ನು ಅವಲಂಬಿಸಿರುತ್ತದೆ. ಸಸ್ಯವು ಉತ್ಪತ್ತಿ ಮಾಡುವ ದಕ್ಷತೆಯನ್ನು ಅವಲಂಬಿಸಿರುತ್ತದೆ. ಈ ಪ್ರಕ್ರಿಯೆಗೆ ಅಗತ್ಯವಾದ ಕಿಣ್ವವೊಂದನ್ನು ಪರಿಗಣಿಸಿ. ಈ ಕಿಣ್ವ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ಸಸ್ಯವು ಅಧಿಕ ಪ್ರಮಾಣದ ಹಾರ್ಮೋನನ್ನು ತಯಾರಿಸುತ್ತದೆ. ಇದರ ಪರಿಣಾಮವಾಗಿ ಸಸ್ಯವು ಎತ್ತರವಾಗಿ ಬೆಳೆಯುತ್ತದೆ. ಸದರಿ ಕಿಣ್ವದ ಜೀನ್ನಲ್ಲಿ ಬದಲಾವಣೆಯಾದರೆ ಆ ಕಿಣ್ವದ ಹಾರ್ಮೋನ ಪ್ರಮಾಣವು ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಸಸ್ಯವು ಕುಬ್ಜವಾಗುತ್ತದೆ. ಹೀಗಾಗಿ ವಂಶವಾಹಿಗಳು ಗುಣಗಳು ಅಥವಾ ಲಕ್ಷಣಗಳನ್ನು ನಿಯಂತ್ರಿಸುತ್ತದೆ.
ಉತ್ತರ: ಹಕ್ಕಿ ಹಾಗೂ ಬಾವಲಿಯ ರೆಕ್ಕೆಗಳು ಕಾರ್ಯನುರೂಪಿ ಅಂಗಗಳು. ಬಾವಲಿಯ ರೆಕ್ಕೆಗಳು ನೀಳವಾದ ಬೆರಳುಗಳ ನಡುವೆ ಇರುವ ಚರ್ಮದ ಮಡಿಕೆಗಳಿಂದಾಗಿದೆ. ಆದರೆ ಹಕ್ಕಿಗಳ ರೆಕ್ಕೆ ಉದ್ದಕ್ಕೂ ಆವರಿಸಿರುವ ಗರಿ-ಪುಕ್ಕಗಳಿಂದ ಕೂಡಿದೆ. ಹೀಗೆ ಎರಡೂ ರೆಕ್ಕೆಗಳ ವಿನ್ಯಾಸ ರಚನೆ ಹಾಗೂ ಘಟನೆಗಳು ಬಹಳ ವಿಭಿನ್ನವಾಗಿದೆ. ಅವು ಹಾರಾಡಲು ಬಳಕೆಯಾಗುವುದರಿಂದ ಒಂದೇ ರೀತಿ ಕಂಡರೂ ಅವುಗಳ ಮೂಲ ಒಂದೇ ಅಲ್ಲ. ಆದ್ದರಿಂದ ಅವು ಕಾರ್ಯಾನುರೂಪಿ ಅಂಗಗಳೇ ಹೊರತು ರಚನಾನುರೂಪಿ ಅಂಗಗಳಲ್ಲ.
ಉತ್ತರ: : F2 ಪೀಳಿಕೆಯಲ್ಲಿ ಕಂಡು ಬರುವ ಹೊಸ ಲಕ್ಷಣಗಳಿಳ್ಳ ಸಸ್ಯಗಳು:
1. ದುಂಡಾದ ಬೀಜಗಳುಳ್ಳ ಕುಬ್ಜ ಸಸ್ಯಗಳು
2. ಸುಕ್ಕುಗಟ್ಟಿದ ಬೀಜಗಳುಳ್ಳ ಎತ್ತರದ ಸಸ್ಯಗಳು F2 ಪೀಳಿಗೆಯಲ್ಲಿ ಹೊಸ ಲಕ್ಷಣಗಳುಳ್ಳ ಸಸ್ಯಗಳು ಕಾಣಿಸಿಕೊಳ್ಳಲು ಕಾರಣವಾದ ನಿಯಮ ಸ್ವತಂತ್ರ ವಿಗಂಡಣೆಯ ನಿಯಮ: ಗುಣವೊಂದನ್ನು ನಿಯಂತ್ರಿಸುವ ಅಂಶದ ಎರಡು ಪ್ರತಿಗಳು ಲೈಂಗಿಕ ಸಂತಾನೋತ್ಪತ್ತಿ ನಡೆಸುವ ಜೀವಿಗಳಲ್ಲಿ ರುತ್ತದೆ ಲಿಂಗಾಣುಗಳು ಉಂಟಾಗುವ ಸಂಧರ್ಭದಲ್ಲಿ ಪ್ರತಿಯೊಂದು ಗುಣವೂ ಇತರ ಗುಣದಿಂದ ಸ್ವತಂತ್ರವಾಗಿ ಬೇರ್ಪಡುತ್ತದೆ.
ಉತ್ತರ : ಭೂಮಿಯ ಮೇಲೆ ಇರುವ ಮಾನವ ಸಮೂಹವು ಹೆಚ್ಚು ದೊಡ್ಡ ಸಂಖ್ಯೆಯನ್ನು ಹೊಂದಿದೆ. ಇದರಿಂದ ವಂಶವಾಹಿಗಳು ಹರಿವಿನ ಪ್ರಮಾಣ ಹೆಚ್ಚಿದ್ದು ಉಂಟಾಗುವ ಭಿನ್ನತೆಗಳ ಪ್ರಮಾಣವೂ ಹೆಚ್ಚಿದೆ. ಮಾನವ ಸಮೂಹಕ್ಕೆ ಹೋಲಿಸಿದರೆ ಚಿಂಪಾಂಜಿಗಳ ಸಮೂಹ ತುಂಬಾ ಚಿಕ್ಕದು. ಇದರಿಂದ ವಂಶವಾಹಿಗಳ ಹರಿವಿನ ಪ್ರಮಾಣ ಕಡಿಮೆ ಇರುವುದು. ಅವುಗಳಲ್ಲಿ ಭಿನ್ನತೆಗಳೂ ಕಡಿಮೆ.
ಉತ್ತರ : ಪಳೆಯುಳಿಕೆಗಳು ಅಳಿದು ಹೋಗಿರುವ ಪ್ರಭೇದಗಳು. ಮತ್ತು ಅವುಗಳ ಲಕ್ಷಣಗಳ ಕುರಿತು ಮಾಹಿತಿ ನೀಡುತ್ತವೆ. ಮೇಲ್ಪದರದಲ್ಲಿ ಸಿಗುವ ಪಳೆಯುಳಿಕೆಗಳು ಆಳಪದರದಲ್ಲಿನ ಪಳೆಯುಳಿಕೆಗಳಿಗಿಂತ ಇತ್ತೀಚಿನವಾಗಿರುತ್ತವೆ. ಜೀವಿ ಪ್ರಭೇದಗಳ ನಡುವಣ ಸಂಬಂಧಗಳನ್ನು ನಿರ್ಣಯಿಸುವಲ್ಲಿ ಇವುಗಳು ಪ್ರಮುಖ ಸಾಕ್ಷಿಯಾಗಬಲ್ಲವು. ಉದಾಹರಣೆಗೆ ಕೆಲವು ಡೈನೋಸಾರ್ಗಳು ಹಾರಲು ಅಸಮರ್ಥವಾಗಿದ್ದರೂ ಗರಿಗಳನ್ನು ಹೊಂದಿದ್ದವು. ಹಕ್ಕಿಗಳು ಕಾಲಾಂತರದಲ್ಲಿ ಗರಿಗಳನ್ನು ಬಳಸಿ ಹಾರಲು ಹೋಂದಿಕೊಂಡಂತೆ ಕಾಣುತ್ತದೆ. ಡೈನೋಸಾರಸ್ ಗಳು ಸರೀಸೃಪಗಳಾದ್ದರಿಂದ ಹಕ್ಕಿಗಳ ಸರೀಸೃಪಗಳ ಅತಿ ಹತ್ತಿರದ ಸಂಬಂಧಿಗಳಾಗಿವೆ ಎಂದು ನಾವು ನಿರ್ಣಯಿಸಬಹುದು.
ಉತ್ತರ : ಸ್ಟ್ಯಾನ್ಲಿ ಎಲ್. ಮಿಲ್ಲರ್ ಮತ್ತು ಹೆರಾಲ್ಡ್ ಸಿ. ಯೂರಿ ಯವರು 1953 ರಲ್ಲಿ ಪ್ರಾಚೀನ ಭೂಮಿಯ ಮೇಲಿದ್ದ ಪರಿಸ್ಥಿತಿಯನ್ನೆ ಹೋಲುವ (ಮಿಥೇನ್, ಅಮೋನಿಯಾ, ಹೈಡ್ರೋಜನ್ ಸಲ್ಫೈಡ್, ಆದರೆ ಆಕ್ಸಿಜನ್ ರಹಿತ) ವಾತಾವರಣವನ್ನು ನೀರಿನ ಮೇಲೆ ನಿರ್ಮಿಸಿದರು. ಇದನ್ನು 100o C ಗಿಂತ ಕಡಿಮೆ ತಾಪದಲ್ಲಿಟ್ಟರು. ಮತ್ತು ಮಿಂಚಿನ ರೀತಿಯ ವಿದ್ಯುತ್ ಕಿಡಿಗಳನ್ನು ಅನಿಲ ಮಿಶ್ರಣದೊಳಗೆ ಹಾಯಿಸಿದರು. ಒಂದು ವಾರದ ನಂತರ ನೋಡಿದಾಗ ಮಿಥೇನ್ ನಲ್ಲಿದ್ದ 15% ಕಾರ್ಬನ್ ಸರಳ ಸಾವಯವ ಸಂಯುಕ್ತಗಳಾಗಿ ಪರಿವರಿರ್ತನೆಯಾಗಿದ್ದವು. ಇದರಲ್ಲಿ ಪ್ರೋಟಿನ್ ಅಣುಗಳ ರಚನೆಗೆ ಅಗತ್ಯವಾಗಿದ್ದ ಅಮೈನೋ ಆಮ್ಲಗಳು ಉಂಟಾಗಿದ್ದವು. ಇದರಿಂದ ನಾವು ನಿರ್ಜೀವ ದ್ರವ್ಯಗಳಿಂದ ಜೀವದ ಉಗಮವಾಗಿದೆ ಎಂದು ನಿರ್ಧರಿಸಬಹುದು.