ईमानदारों के सम्मेलन में

सारांश

       ईमानदारों के सम्मेलन में यह हरि शंकर परसाई द्वारा लिखित एक व्यंग्य रचना है। इससे ईमानदार लोगों की बेईमानी का उजागर हुआ है। एक दिन लेखक को एक पत्र आता है। लेखक इसे देखकर आश्चर्यचकित होते हैं। उसमें लिखा था कि वे इस नगर में एक ईमानदारों का सम्मेलन आयोजित कर रहे हैं। लेखक इस सम्मेलन का उद्घाटन करें क्योंकि वे इस देश के सबसे ईमानदार व्यक्ति हैं। उनके आगमन से उदीयमान ईमानदार अधिक प्रेरित होंगे। लेकिन लेखक ने ईमानदार होने जैसी कोई काम नहीं की थी। लेखक का ईमानदारी से कोई लेना-देना नहीं था।लेखक को दूसरे दर्जे में जाकर पहले दर्जे का किराया लेने से एक सौ पचास रुपये बचते थे। रेलवे स्टेशन पर लेखक का स्वागत किया गया। कई फूल मालाओं को पहनाया गया। लेखक ने यह सोचा कि अगर कोई माली होता तो उसे बेच लेता। सम्मेलन का उद्घाटन शानदार हुआ। लेखक ने एक घंटे तक भाषण दिया। सम्मेलन के बाद, लेखक की चप्पल चोरी हो गयी थी।चप्पलों को चोरी करनेवाला व्यक्ति आकर सुझाव दे रहा था कि चप्पल कैसे रकना है। रात में सम्मेलन से वापास आकर देखा तो, एक चादर गायब थी। दूसरे दिन दो और चादर गायब थीं। कुल तीन चादर चली गई थीं। अगले दिन सम्मेलन में जाना था। धूप का चश्मा कहीं नहीं था। धूप का चश्मा चोरी करनेवाला चश्मा पहने इतमिनान से लेखक के साथ बात कर रहा था। तीसरे दिन कमरे में कम्बल गायब था। इससे परेशान होकर, लेखक अपने सिर के नीचे पहनने के कपड़े सिरहाने दबाकर सोये। चौथे दिन ताला भी गायब था। लेखक सोचने लगे कि मेरा सारा सामान चला गया है। अब केवल मैं बचा हूँ, अगर रुका तो मैं ही चुरा लिया जाऊँगा । इस तरह लेखक ने ईमानदार लोगों की बेईमानी का उजागर किया है।

ಕನ್ನಡ ಸಾರಾಂಶ

       ಪ್ರಾಮಾಣಿಕರ ಸಮ್ಮೇಳನದಲ್ಲಿ ಇದು ಹರಿಶಂಕರ ಪರಸಾಯಿಯವರು ಬರೆದ ವ್ಯಂಗ್ಯ ರಚನೆಯಾಗಿದೆ. ಇದರ ಮೂಲಕ ಪ್ರಾಮಾಣಿಕರೆಂದು ಕರೆಯಲ್ಪಡುವ ಜನರ ಅಪ್ರಾಮಾಣಿಕತೆಯನ್ನು ಬಹಿರಂಗಪಡಿಸಿದ್ದಾರೆ. ಒಂದು ದಿನ ಲೇಖಕರಿಗೆ ಒಂದು ಪತ್ರ ಬರುತ್ತದೆ. ಅದನ್ನು ನೋಡಿದ ಲೇಖಕರಿಗೆ ಆಶ್ಚರ್ಯವಾಗುತ್ತದೆ. ಅದರಲ್ಲಿ ನಾವು ಈ ಊರಿನಲ್ಲಿ ಪ್ರಾಮಾಣಿಕರ ಸಮ್ಮೇಳನವನ್ನು ಮಾಡುತ್ತಿದ್ದೇವೆ. ನೀವು ಈ ದೇಶದಲ್ಲೇ ಸುಪ್ರಸಿದ್ದ ಪ್ರಾಮಾಣಿಕರಾಗಿರುವುದರಿಂದ ಈ ಸಮ್ಮೇಳನದ ಉದ್ಘಾಟನೆ ನೀವೆ ಮಾಡಬೇಕು .ನಿಮಗೆ ಮೊದಲನೆಯ ದರ್ಜೆಯಲ್ಲಿ ಪ್ರಯಾಣದ ವೆಚ್ಚ ಹಾಗೂ ತಮಗೆ ಉಳಿದುಕೊಳ್ಳಲು ಒಳ್ಳೆಯ ಸ್ಥಳ ಹಾಗೂ ಊಟದ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ . ನಿಮ್ಮ ಆಗಮನದಿಂದ ಹೊಸ ಪ್ರಾಮಾಣಿಕ ವ್ಯಕ್ತಿಗಳಿಗೆ ಹೆಚ್ಚು ಪ್ರೇರಣೆ ದೊರೆಯುತ್ತದೆ. ಆದರೆ ಲೇಖಕರು ಪ್ರಾಮಾಣಿಕ ವ್ಯಕ್ತಿಯೆಂದು ತಿಳಿಯಲು ಅಂಥ ಯಾವುದೇ ಕೆಲಸವನ್ನು ಮಾಡಿರಲಿಲ್ಲ , ಲೇಖಕರು ಎರಡನೇಯ ದರ್ಜೆಯ ಟಿಕೇಟ ತೆಗೆಸಿ ಮೊದಲನೇಯ ದರ್ಜೆಯ ದುಡ್ಡು ಪಡೆದರೆ 150 ರೂ . ಉಳಿತಾ ಯವಾಗುತ್ತದೆ ಎಂದು ಸಮ್ಮೇಳನಕ್ಕೆ ಹೊರಟರು. ಪ್ರಾಮಾಣಿಕತೆಗೂ ಲೇಖಕರಿಗೂ ಯಾವುದೇ ಸಂಬಂಧವಿರಲಿಲ್ಲ . ಈ ರೀತಿ ಮಾಡುವುದು ಅಪ್ರಾಮಾಣಿಕತೆಯಾಗಿತ್ತು , ರೇಲ್ವೆ ಸ್ಟೇಶನ್ನಲ್ಲಿ ಲೇಖಕರಿಗೆ ದೊಡ್ಡ ಪ್ರಮಾಣದ ಸ್ವಾಗತ ಮಾಡಲಾಯಿತು. ಹಲವಾರು ಮಾಲೆಗಳನ್ನು ಹಾಕಿದರು . ಅಲ್ಲಿ ಹೂವಾಡಿಗನಿದ್ದಿದ್ದರೆ ಮಾಲೆಗಳನ್ನು ಅವನಿಗೆ ಮಾರಬಹುದಿತ್ತೆಂದು ವಿಚಾರ ಮಾಡಿ ಆಚೆ ಇಚೆ ಕಣ್ಣಾಡಿಸಿ ಲೇಖಕರು ನೋಡಿದರು. ಸಮ್ಮೇಳನ ವೈಭವದಿಂದ ಉದ್ಘಾಟನೆಯಾಯಿತು . ಲೇಖಕರು ಒಂದು ಘಂಟೆಗಳ ಕಾಲ ಭಾಷಣ ಮಾಡಿದರು. ಸಮ್ಮೇಳನದ ನಂತರ ಲೇಖಕರು ಚಪ್ಪಲಿ ಕಾಣಲಿಲ್ಲ ಯಾವುದೋ ಒಂದು ಜೊತೆ ಹಳೆಯದಾದ ಚಪ್ಪಲಿ ಮಾತ್ರ ಉಳಿದಿತ್ತು . ರಾತ್ರಿ ಸಮ್ಮೇಳನದಿಂದ ಹಿಂತುರಿಗಿದಾಗ ಒಂದು ಚಾದರ ಕಾಣೆಯಾಗಿತ್ತು . ಎರಡನೇಯ ದಿನ ಘೋಷ್ಠಿ ಮುಗಿಸಿ ಬಂದ ನಂತರ ಮತ್ತೆರಡು ಚಾದರ ಅಲ್ಲಿಂದ ಕಾಣೆಯಾಗಿತ್ತು , ಒಟ್ಟು ಮೂರು ಚಾದರಗಳು ಅಲ್ಲಿರಲಿಲ್ಲ . ಮರುದಿನ ಸಮ್ಮೇಳನಕ್ಕೆ ಹೋಗುವಾಗ ಬಿಸಿಲಿನಿಂದ ಕನ್ನಡಕವನ್ನು ( ಚಶಮಾ) ಹುಡುಕಾಡಿದೆ ಎಲ್ಲೂ ಕಾಣಲಿಲ್ಲ . ಸಂಜೆ ಇದ್ದ ಕನ್ನಡಕ ಈಗ ಕಾಣೆಯಾಗಿತ್ತು . ಮೂರನೇ ದಿನ ಕೋಣೆಗೆ ಬಂದಾಗ ಚಳಿಯಿರುವುದನ್ನು ಕಂಡು ಹಾಸಿಗೆಯಿಂದ ಕಂಬಳಿಯನ್ನು ತೆಗೆದುಕೊಳ್ಳಲು ನೋಡಿದೆ ಕಂಬಳಿ ಅಲ್ಲಿಂದ ಕಾಣೆಯಾಗಿತ್ತು . ಇದರಿಂದ ವಿಚಲಿತರಾದ ಲೇಖಕರು ರಾತ್ರಿ ಹಾಕಿಕೊಂಡ ಬಟ್ಟೆಗಳನ್ನು ತಲೆಯ ಕೆಳಗೆ ಹಾಗೂ ಹೊಸ ಚಪ್ಪಲ ( ಪಾದರಕ್ಷೆ) ಹಾಗೂ ಶೇವಿಂಗ್ ಡಬ್ಬಿಯನ್ನು ಹಾಸಿಗೆಯ ಕೆಳಗೆ ಇಟ್ಟುಕೊಂಡು ಮಲಗಿದರು , ನಾಲ್ಕನೇ ದಿನ ಬೆಳಿಗ್ಗೆ ಲೇಖಕರಿಗೆ ಊರಿಗೆ ಹೋಗುವದಿತ್ತು . ಅವರೆಲ್ಲರೂ ಒಳ್ಳೆಯ ರೀತಿಯಲ್ಲಿ ದುಡ್ಡನ್ನು ನೀಡಿದರು . ಪರಸಾಯಿಯವರ ಟ್ರೇನ್ ತಡವಿದ್ದದ್ದರಿಂದ ಸ್ವಾಗತ ಸಮಿತಿಯ ಮಂತ್ರಿಗಳು ಒಳ್ಳೆಯ ಹೋಟೆಲ್ ಒಂದರಲ್ಲಿ ಲೇಖಕರನ್ನು ಊಟಕ್ಕೆ ಕರೆದರು. ಲೇಖಕರು ಕೋಣೆಗೆ ಬೀಗ ಹಾಕಲೆಂದು ಬೀಗ ಹುಡುಕಿದರು. ಆದರೆ ಬೀಗ ಸಿಗಲಿಲ್ಲ .ಅದು ಸಹಿತ ಕಳ್ಳತನವಾಗಿತ್ತು .ಇದನ್ನು ಕಂಡ ಪರಸಾಯಿಯವರು ಅಟೋ ತರಿಸಿ ನಾನು ಸ್ಟೇಶನ್ನಿಗೆ ಹೋಗುತ್ತೇನೆ ಇನ್ನೂ ನಾನು ಇಲ್ಲಿ ಇರುವುದಿಲ್ಲವೆಂದಾಗ ಮಂತ್ರಿಗಳು ನಮ್ಮ ಮೇಲೇಕೆ ನಿಮಗೆ ಬೇಸರ ಎಂದು ಕೇಳಿದರು. ಅದಕ್ಕೆ ನಾನು ನಿಮ್ಮ ಮೇಲೆ ಬೇಸರವಿಲ್ಲ ನನ್ನ ಎಲ್ಲ ವಸ್ತುಗಳು ಕಳೆದು ಹೋದವು . ನಾನು ಮಾತ್ರ ಉಳಿದಿದ್ದೇನೆ ಆದರೆ ನಾನು ಇಲ್ಲೇ ಉಳಿದರೆ ನಾನು ಕೂಡಾ ಕಳ್ಳತನವಾಗುವುದು ಖಂಡಿತ ಎಂದು ಹೇಳಿದರು. ಈ ರೀತಿ ಪ್ರಾಮಾಣಿಕರೆಂದು ಕರೆಯಲ್ಪಡುವ ಜನರ ಅಪ್ರಾಮಾಣಿಕತೆಯನ್ನು ಬಹಿರಂಗಪಡಿಸಿದ್ದಾರೆ.