इंटरनेट - क्रांति

सारांश

       आज का युग इंटरनेट युग है । इंटरनेट क्रांति से गाँव हो या शहर, देश हो या विदेश सब जगह इसका असर पड रह है। इंटरनेट का मतलब है कि अनगिनत कंप्यूटरों के कई अंतर्जाल का एक दूसरे से संबंध स्थापित करने का जाल है। हम एक, पल में दूर बैठे मित्र हो या रिश्तेदार हो उनसे इंटरनेट के जरिए संपर्क स्थापित कर सकते हैं। इंटरनेट द्वारा पल भर में, बिना ज्यादा खर्च किए कोई भी विचार हो, स्थिर चित्र हो, वीडियो चित्र, दुनिया के किसी भी कोने में भेजना संभव हो गया है। आज के संदर्भ में इसके बिना संचार व सूचना दोनों ही क्षेत्र ठप पड़ जाते हैं। इंटरनेट द्वारा घर बैठे-बैठे खरीदारी कर सकते हैं। कोई भी बिल भर सकते हैं। लाइन में घंटों खडे रहने का समय बच सकता है । इंटरनेट -- बैंकिंग द्वारा दुनिया की किसी भी जगह पर चाहे जितनी भी रकम भेजी जा सकती है। 'वर्चुअल मीटिंग रूम' में एक जगह बैठकर दुनिया के कई देशों के प्रतिनिधियों के साथ 8-10 दूरदर्शन के परदे पर चर्चा कर सकते हैं। एक ही कमरे में बैठकर विभिन्न देशों में रहने वाले लोगों के साथ विचार - विनिमय कर सकते हैं। इंटरनेट के कारण बहुत से लोगों को रोजगार मिला है और सिर्फ हमारे देश में ही नहीं, कई देशों की आर्थिक स्थिति में भी सुधार हुआ है। बेरोज़गारी का नामोनिशान मिटाना इस के जरिए संभव है। 'सोशल नेटवर्किंग' एक क्रांतिकारी खोज है। सोशल नेटवर्किंग के कई साइट्स हैं, जैसे फेसबुक, आरकुट, ट्विटर, लिंक्डइन आदि। इन साइटों के कारण देश - विदेश के लोगों की रहन - सहन, वेश भूषा, खान - पान के अलावा संस्कृति, कला आदि का प्रभाव शीघ्रातिशीघ्र हमारे समाज पर पड़ रहा है। भारत जैसे देश ई-गवर्नेन्स (ई - प्रशासन) द्वारा बदलाव लाने की कोशिश कर रहे हैं। ई-गवर्नेन्स का अर्थ है - सरकार के सभी कामकाज का विवरण, अभिलेख, सरकारी आदेश आदि को यथावत लोगों को सूचित किया जाता है। इससे प्रशासन पारदर्शी बन सकता है। इंटरनेट सचमुच एक वरदान है। जीवन के हर क्षेत्र में इसका अदभुत प्रभाव देखने को मिल रहा है। जैसे चिकित्सा, कृषि, विज्ञान, अंतरिक्ष ज्ञान, शिक्षा आदि। यहाँ तक कि देश के सशस्त्र सेना की कार्यवाही में इंटरनेट का बहुत बड़ा योगदान है। इंटरनेट से कई हानियाँ हो सकती है । जैसे-पैरसी, बैंकिंग फ्रॉड, हैकिंग आदि बढ़ रही हैं । मुफ्त वेब साइट, चैटिंग आदि से बच्चे और युव पीढी फंसे हुए हैं । इससे वक्त का दुरुपयोग होता है । बच्चे अनुपयुक्त और अनावश्यक जानकरी प्राप्त करते हैं।

ಕನ್ನಡ ಸಾರಾಂಶ

       ಈಗಿನ ಯುಗ ಇಂಟರ್ನೆಟ್ ಯುಗವಾಗಿದೆ. ಇಂಟರ್ನೆಟ್ ಪ್ರಭಾವದಿಂದ ಎಲ್ಲೆಡೆ ಇದರ ಪ್ರಭಾವ ಬೀರಿ ಇಂಟರ್ನೆಟ್ನಿಂದ ಎಲ್ಲಾ ವಿಷಯಗಳನ್ನು ತಿಳಿಯಬಹುದಾಗಿದೆ. ಒಂದೇ ಕ್ಷಣದಲ್ಲಿ ದೂರದಲ್ಲಿರುವ ಸಂಬಂಧಿಕರು ಅಥವಾ ಸ್ನೇಹಿತರನ್ನು ಸಂಪರ್ಕಿಸಬಹುದು, ಇಂಟರ್ನೆಟ್ ಮೂಲಕ ಹೆಚ್ಚು ಹಣವನ್ನು ಖರ್ಚು ಮಾಡದೆ ವಿಡಿಯೋ ಚಿತ್ರ ಮತ್ತು ಚಿತ್ರಗಳನ್ನು ಪ್ರಪಂಚದ ಯಾವುದೇ ಭಾಗಕ್ಕೆ ಇಂಟರ್ನೆಟ್ ಮೂಲಕ ಕಳುಹಿಸಬಹುದು. ಇಂಟರ್ನೆಟ್ ಇಲ್ಲದೆ ಹೋದರೆ ಮಾಹಿತಿ ತಂತ್ರಜ್ಞಾನ ನಿಷ್ಕ್ರಿಯವಾಗುತ್ತದೆ. ಇಂಟರ್ನೆಟ್ ಮೂಲಕ ಮನೆಯಲ್ಲಿಯೇ ಕುಳಿತುಕೊಂಡು ವಸ್ತುಗಳನ್ನು ಖರೀದಿ ಮಾಡಬಹುದು. ಯಾವುದೇ ಬಗೆಯ ಬಿಲ್ಲುಗಳನ್ನು ಪಾವತಿ ಮಾಡಬಹುದಾಗಿದೆ. ಗಂಟೆಗಟ್ಟಲೆ ಸಾಲಿನಲ್ಲಿ ನಿಂತುಕೊಳ್ಳುವ ಸಮಯವನ್ನು ಇಂಟರ್ನೆಟ್ ಉಳಿಸಬಹುದಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಾವು ಪ್ರಪಂಚದ ಯಾವುದೇ ಜಾಗಕ್ಕೆ ಹಣವನ್ನು ಕಳುಹಿಸಲು ಸಾಧ್ಯವಾಗಿದೆ. “ವರ್ಚುವಲ್ ಮೀಟಿಂಗ್ ರೂಮ್*ನಲ್ಲಿ ಕುಳಿತುಕೊಂಡು ಪ್ರಪಂಚದ ಹಲವಾರು ದೇಶದ ಪ್ರತಿನಿಧಿಗಳ ಜೊತೆಯಲ್ಲಿ 8-10 ದೂರದರ್ಶನದ ಪರದೆಯ ಮೇಲೆ ಚರ್ಚೆ ಮಾಡಲು ಸಾಧ್ಯವಾಗಿದೆ, ಒಂದೇ ಕೊಠಡಿಯಲ್ಲಿ ಕುಳಿತುಕೊಂಡು್ ಹಲವಾರು ದೇಶಗಳ ಜನರೊಡನೆ ಮಾತನಾಡಲು ಸಾಧ್ಯವಾಗಿದೆ. ಇಂಟರ್ನೆಟ್ ಕಾರಣದಿಂದ ಇಂದು ಬಹಳಷ್ಟು ಜನರಿಗೆ್ ಉದ್ಯೋಗ ದೊರಕಿದೆ. ಇದರಿಂದ ಹಲವಾರು ದೇಶಗಳ ಆರ್ಥಿಕ ಸ್ಥಿತಿಯಲ್ಲಿ ಸಹ ಸುಧಾರಣೆಯಾಗಿದೆ. ನಿರುದ್ಯೋಗತನ ಅಳಿಸಲು ಸಾಧ್ಯವಾಗಿದೆ. ಸೋಶಿಯಲ್ ನೆಟ್ವರ್ಕಿಂಗ್ ಒಂದು ಕ್ರಾಂತಿಕಾರಿ ಅನ್ವೇಷಣೆಯಾಗಿದೆ. ಇದರಲ್ಲಿ ಹಲವಾರು್ ಸೈಟ್ಗಳು ಇರುತ್ತವೆ. ಉದಾಹರಣೆಗಾಗಿ ಫೇಸ್ಬುಕ್, ಆರ್ಕುಟ್, ಟ್ವಿಟರ್, ಲಿಂಕ್ಸ್-ಇನ್, ಮುಂತಾದವುಗಳು ಈ ಸೈಟ್ ಕಾರಣದಿಂದಾಗಿ ದೇಶ-ವಿದೇಶಗಳ ಜನರ ಜೀವನ ಕ್ರಿಯೆ, ವೇಷಭೂಷಣ, ಆಹಾರ ಪದ್ಧತಿ, ಸಂಸ್ಕೃತಿ ಕಲೆಗಳ ಪ್ರಭಾವ ಬೇಗನೆ ನಮ್ಮ ಸಮಾಜದ ಮೇಲೆ ಬೀಳುತ್ತಿದೆ. ಭಾರತ ದೇಶದಲ್ಲಿ ಈ - ಗವರ್ನೆನ್ಸ ಮೂಲಕ ಬಹಳ ದೊಡ್ಡ ಪರಿವರ್ತನೆ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಈ- ಗವರ್ನೆನ್ಸ ನಿಂದ ಸರ್ಕಾರದ ಎಲ್ಲಾ ಕೆಲಸಗಳ ವಿವರಣೆ, ಫೈಲ್ಗಳು, ಸರ್ಕಾರದ ಆದೇಶಗಳನ್ನು ಮುಂತಾದವುಗಳನ್ನು ಜನರಿಗೆ ಸೂಚಿಸಲು ಸಾಧ್ಯವಾಗಿದೆ. ಇದರಿಂದ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕ ಮಾಡಲು ಸಾಧ್ಯವಾಗಿದೆ. ಇಂಟರ್ನೆಟ್ ನಿಜವಾಗಲು ಒಂದು ನಮಗೆ ಸಿಕ್ಕ ವರವಾಗಿದೆ. ಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲಿ ಇದರ ಅದ್ಭುತ ಪ್ರಭಾವವನ್ನು ನೋಡಲು ಸಿಗುತ್ತಿದೆ, ಉದಾಹರಣೆಗಾಗಿ ಚಿಕಿತ್ಸೆ, ಕೃಷಿ ವಿಜ್ಞಾನ, ಅಂತರಿಕ್ಷ ಜ್ಞಾನ ಶಿಕ್ಷಣ ಮುಂತಾದವು .ಇಷ್ಟಲ್ಲದೆ ದೇಶದ ರಕ್ಷಣಾ ಪಡೆಗಳಲ್ಲೂ ಸಹ ಇಂಟರ್ನೆಟ್ನ್ನು ಬಳಸಲಾಗುತ್ತಿದೆ. ಇಂಟರ್ನೆಟ್ನಿಂದ ಕೆಲವೊಂದು ಕೆಟ್ಟ ಪ್ರಭಾವವಗಳು ಸಹ ಬೀರುತ್ತವೆ. ಇದರಿಂದ ಪೈರಸಿ ಬ್ಯಾಂಕಿಂಗ ಮೋಸ ವಂಚನೆಗಳು,ಹೈಕಿಂಗ, ಮುಂತಾದವು ಹೆಚ್ಚಾಗುತ್ತಿದೆ.ಫ್ರೀ ವೆಬ್ಸೈಟ್ ಮತ್ತು ಚ್ಯಾಟಿಂಗ್ನಿಂದ ಇಂದಿನ ಯುವ ಪೀಳಿಗೆ ಅನಾವಶ್ಯಕ ಮಾಹಿತಿಗಳನ್ನು ಪಡೆಯುತ್ತಿದೆ.ಇದರ ಸದ್ಬಳಕೆ ಮಾಡಬೇಕು ಹಾಗೂ ಕೆಟ್ಟಪ್ರಭಾವಗಳಿಂದ ಎಚ್ಚರವಾಗಬೇಕು. ಇದರಿಂದ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಎಲ್ಲಾ ಜನ ಇದರ ಸಧ್ಬಳಕೆ ಮಾಡಬೇಕು ಹಾಗೂ ಕೆಟ್ಟ ಪ್ರಭಾವಗಳಿಂದ ಎಚ್ಚರವಾಗಬೇಕು.