ಜೀವಕ್ರಿಯೆಗಳು
ಮುಖ್ಯಾಂಶಗಳು
• ಜೀವನ ನಿರ್ವಹಣೆಗೆ ಮತ್ತು ಉಳಿವಿಗಾಗಿ ಜೀವಿಗಳು ನಡೆಸುವ ಪ್ರಮುಖ ಕ್ರಿಯೆಗಳೇ ಜೀವಕ್ರಿಯೆಗಳು.
• ಏಕಕೋಶ ಜೀವಿಗಳಲ್ಲಿ ವಿಸರಣೆಯ ಮೂಲಕ ಜೀವಕ್ರಿಯೆ ನಡೆದರೆ, ಬಹುಕೋಶ ಜೀವಿಗಳಲ್ಲಿ ವಿವಿಧ ರೀತಿಯ ಜೀವಕ್ರಿಯೆಗಳನ್ನು ನಡೆಸಲು ವಿಶೇಷ ಅಂಗಗಳಿರುತ್ತವೆ.
• ಜೀವಕ್ರಿಯೆಗಳನ್ನು ನಡೆಸಲು ಶಕ್ತಿಯ ಅವಶ್ಯಕತೆಯಿದೆ, ಆ ಶಕ್ತಿಯ ಅವಶ್ಯಕತೆಯನ್ನು ಪೋಷಣೆಯ ಮೂಲಕ ಪಡೆಯುತ್ತವೆ.
• ಪೋಷಣೆಯಲ್ಲಿ ಎರಡು ವಿಧಗಳಿವೆ.
ಸ್ವಪೋಷಣೆ: ತನ್ನ ಪೋಷಣೆಯನ್ನು ಆಹಾರವನ್ನು ಜೀವಿಯು ಸ್ವತಹ ತಾನೆ ಮಾಡಿಕೊಳ್ಳುತ್ತವೆ (ಉದಾ: ಹಸಿರು ಸಸ್ಯ ಆಹಾರ ತಯಾರಿಸುವ ವಿಧಾನ).
ಪರಪೋಷಣೆ: ಆಹಾರಕ್ಕಾಗಿ ಬೇರೆ ಜೀವಿಗಳ ಮೇಲೆ ಅವಲಂಬನೆ. (ಉದಾ: ಪ್ರಾಣಿಗಳು ಆಹಾರಕ್ಕಾಗಿ ಸಸ್ಯ ಮತ್ತು ಪ್ರಾಣಿಗಳನ್ನು ಅವಲಂಬಿಸಿರುವುದು)
• ಮಾನವರಲ್ಲಿ ಪೋಷಣೆ: 2 ಹಂತದಲ್ಲಿ ನಡೆಯುತ್ತದೆ. ಯಾಂತ್ರಿಕ ಪಚನಕ್ರಿಯೆ ಮತ್ತು ರಾಸಾಯನಿಕ ಪಚನಕ್ರಿಯೆ (ಕಿಣ್ವಗಳ ಸಹಾಯದಿಂದ).
• ಉಸಿರಾಟ ಕ್ರಿಯೆ: ಗ್ಲುಕೋಸ್ ವಿಭಜಿಸಿ ಶಕ್ತಿ ಬಿಡುಗಡೆಯಾಗುವ ಕ್ರಿಯೆ ಅಥವಾ ವಿಧಾನ.
• ಆಮ್ಲಜನಕ ಸಹಿತ ಮತ್ತು ಆಮ್ಲಜನಕ ರಹಿತ ಉಸಿರಾಟಗಳೆ ಎಂಬ ಎರಡು ವಿಧಾನಗಳಿವೆ.
• ರಕ್ತಪರಿಚಲನೆ (ಸಾಗಾಣಿಕ ವ್ಯೂಹ): ಹೃದಯ, ರಕ್ತ ಮತ್ತು ರಕ್ತನಾಳಗಳನ್ನು ಒಳಗೊಂಡಿದೆ.
• ವಿಸರ್ಜನೆ: ನೈಟ್ರೋಜನ್ ಯುಕ್ತ ತ್ಯಾಜ್ಯ ಪದಾರ್ಥವನ್ನು ದೇಹದಿಂದ ಹೊರ ಹಾಕುವ ಕ್ರಿಯೆ.
• ವಿಸರ್ಜನಾಂಗ ವ್ಯೂಹವು ಮೂತ್ರಪಿಂಡ, ಮೂತ್ರನಾಳ, ಮೂತ್ರಕೋಶಗಳನ್ನು ಒಳಗೊಂಡಿದೆ.
• ಮೂತ್ರಪಿಂಡವು ನೆಫ್ರಾನ್ ಎಂಬ ಸೂಕ್ಷ್ಮನಾಳವನ್ನು ಹೊಂದಿದ್ದು, ಅದು ಮುಖ್ಯ ಕಾರ್ಯನಿರ್ವಾಹಕ ಘಟಕವಾಗಿದೆ.
• ಸಸ್ಯಗಳಲ್ಲಿ ನೀರು, ಖನಿಜ, ಆಹಾರ ಮತ್ತು ಇತರೆ ವಸ್ತುಗಳ ಸಾಗಾಣಿಕೆಯು ವಾಹಕ ಅಂಗಾಂಶಗಳಾದ ಕ್ಸೈಲಂ ಮತ್ತು ಪ್ಲೋಯಂ ಮೂಲಕ ನಡೆಯುತ್ತದೆ.
• ಸಸ್ಯಗಳಲ್ಲಿ ವಿಸರ್ಜನೆಯು ವಿಶೇಷವಾಗಿ ಹಳೆಯ ಕ್ಸೈಲಂ ಗಳಲ್ಲಿ ತ್ಯಾಜ್ಯ ಪದಾರ್ಥಗಳು ಅಂಟು ಮತ್ತು ರಾಳಗಳ ರೂಪದಲ್ಲಿ ಸಂಗ್ರಹವಾಗುತ್ತದೆ.