कर्नाटक संपदा
सारांश
       कर्नाटक राज्य भारत का विकासशील राज्य है । यहाँ की जनसंख्या लगभग छ: करोड़ है। प्रकृति माता ने कर्नाटक को अपने हाथों से साँवारकर सुंदर और समृद्ध बनाया है। कर्नाटक की प्राकृतिक सुषमा रमणीय है। कर्नाटक के पश्चिम में अरबी समुद्र है। कर्नाटक में दक्षिण से उत्तर के छोर तक फैली लंबी पर्वतमालाओं को पश्चिमी घाट कहते हैं। इन्हीं घाटों का कुछ भाग सह्याद्रि कहलाता है। राज्य के दक्षिण भाग में नीलगिरि पर्वत श्रेणियाँ है। कर्नाटक में कन्नड़ भाषा बोली जाती है। कर्नाटक की राजधानी बेंगलूरु है । यहाँ विभिन्न प्रांत के लोग आकर बस गये हैं। बेंगलूरु शिक्षा का ही नहीं बल्कि बड़े-बड़े उद्योग धंधों का भी केन्द्र है। यहाँ की अनेक संस्थाएँ पूरे भारत में प्रसिद्ध है। उदाहरण के लिए भारतीय विज्ञान संस्थान, एच.ए.एल, एच.एम.टी, आइ.टी.आइ, बी.एच.ई.एल, बी.इ.एल आदि। बेंगलूरु को सिलिकॉन सिटी भी कहा जाता है । सर सी.वी. रामन, सर एम. विश्वेश्वरय्या, डा. सी. एन. आर. राव, डॉ. शकुंतला देवी जैसे दिग्गजों ने वैज्ञानिक तथा प्रौद्योगिकी के क्षेत्र में नारायण मूर्ति ने अपनी महत्तर उपलब्धियों से कर्नाटक को विश्व पटल पर अंकित किया है। 2013 में डॉ. सी.एन.आर. राव को सर्वोच्च पुरस्कार भारत रत्न प्रदान किया गया था। कर्नाटक में सोना, चाँदी, ताँबा, लोहा आदि कई प्रकार के धातुएँ मिलती हैं। भद्रावती में कागज, लोहे और इस्पात के बड़े कारखाने मौजूद हैं। इस के अतिरिक्त कर्नाटक में चीनी, सिमेंट, रेशम और कागज उत्पादन के अनेक कारखाने हैं। कर्नाटक में चंदन के पेड़ अत्यधिक मात्रा में पाये जाते हैं। इसलिए कर्नाटक को चंदन का आगार कहते हैं।चंदन के पेड़ से चंदन का तेल, साबुन और कलाकृतियाँ भी बनायी जाती हैं।कर्नाटक में कावेरी, कृष्णा, तुंगभद्रा आदि अनेक नदियाँ बहती हैं। इन नदियों पर बाँध भी बनाए गए हैं । इन से हज़ारों एकड जमीन सींची जाती है। यहाँ विद्युत उत्पादन भी किया जाता है । जोग, अब्बी, गोकाक, शिवनसमुद्र आदि जलप्रपात मनमोहक हैं। कर्नाटक राज्य की शिल्पकला अद्भुत है। बादामी, ऎहोले, पट्टदकल्लु में जो मंदिर हैं, उन की शिल्पकला औरवास़्तुकला अद़्भुत है।श्रवणबेलगोला में 57 फुट ऊँची गोमटेश्वर की एकशिला प्रतिमा है, जो दुनिया को त्याग और शाति को संदेश दती है। गंगा, कदंब, राष्ट्रकूट, चालुक्य, होयसल, ओडेयर आदि राजवंशजों ने तथा कृष्णदेवराय, मदकरिनायक,अब्बक्का देवी, कित्तूर चेन्नम्मा, टिप्पू सुल्तान, आदिलशाह जैसे शासकों ने कर्नाटक राज्य की श्रीवृदधि में महत्वपूर्ण योगदान दिया है। कर्नाटक के अनेक साहित्यकारों ने सारे संसार में कर्नाटक की कीर्ति फैलायी है। वचनकार बसवण्णा क्रांतिकारी समाज सुधारक थे। अक्कमहादेवी, अल्लमप्रभु, सर्वज्ञ जैसे अनेक संतों ने अपने अनमोल वचनों द्वारा प्रेम, दया और धर्म की सीख दी है। पुरंदरदास, कनकदास आदि भक्त कवियों ने भक्ति, नीति, सदाचार के गीत गाये हैं। पंप, रन्न, पोन्न, कुमारव्यास, हरिहर, राघवांक आदि ने महान काव्यों की रचना कर कन्नड साहित्य को समृद्ध बनाया है। कुवेम्पु, द.रा. बेंद्रे, शिवराम कारंत, मास्ति वेंकटेश अय्यंगार, वि.कृ. गोकाक, यू.आर. अनंतमूर्ति, गिरीश कार्नाड, चंद्रशेखर कंबार आदि आधुनिक काल के साहित्यकार ज्ञानपीठ पुरस्कार से अलंकृत हैं। यह कन्नड भाषा,संस्कृति तथा कर्नाटक के लिए गौरव का विषय है ।
ಕನ್ನಡ ಸಾರಾಂಶ
       ಕರ್ನಾಟಕ ಭಾರತ ದೇಶದ ಪ್ರಗತಿಶೀಲ ರಾಜ್ಯವಾಗಿದೆ. ಇಲ್ಲಿನ ಜನಸಂಖ್ಯೆ ಸುಮಾರು 6 ಕೋಟಿ ಇದೆ. ಪ್ರಕೃತಿ ಮಾತೆ ಕರ್ನಾಟಕ ರಾಜ್ಯವನ್ನು ತನ್ನ ಕೈಗಳಿಂದ ಸಿಂಗರಿಸಿದ್ದಾಳೆ ಹಾಗೂ ಇದನ್ನು ಸಮೃದ್ಧಿಗೊಳಿಸಿದ್ದಾಳೆ. ಕರ್ನಾಟಕದ ಪ್ರಾಕೃತಿಕ ಸೌಂದರ್ಯ ರಮಣೀಯವಾಗಿದೆ. ಇದರ ಪಶ್ಚಿಮ ಭಾಗದಲ್ಲಿ ಅರಬ್ಬಿ ಸಮುದ್ರವಿದೆ. ಕರ್ನಾಟಕದಲ್ಲಿ ಉತ್ತರದಿಂದ ದಕ್ಷಿಣದವರೆಗೆ ಪಶ್ಚಿಮ ಘಟ್ಟದ ಬೆಟ್ಟಗಳು ಹರಡಿವೆ. ಇದರ ಕೆಲವು ಭಾಗಗಳನ್ನು “ಸಹ್ಯಾದ್ರಿ ಬೆಟ್ಟ ಎಂದು ಕರೆಯುತ್ತೇವೆ,.ದಕ್ಷಿಣದಲ್ಲಿ ನೀಲಗಿರಿ ಬೆಟ್ಟಗಳು ಶೋಭಿಸುತ್ತವೆ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಮಾತನಾಡಲಾಗುತ್ತದೆ. ಹಾಗೂ ಇದರ ರಾಜಧಾನಿ ಬೆಂಗಳೂರು ಆಗಿದೆ. ಇಲ್ಲಿ ದೇಶ-ವಿದೇಶಗಳಿಂದ ಬಂದ ಜನರು ವಾಸವಾಗಿದ್ದಾರೆ. ಬೆಂಗಳೂರು ಶಿಕ್ಷಣದಲ್ಲಷ್ಟೇ ಅಲ್ಲ ಬೃಹತ್ ಕೈಗಾರಿಕೆಯ ಕೇಂದ್ರವೂ ಸಹ ಆಗಿದೆ. ಇಲ್ಲಿ ಪ್ರಸಿದ್ಧವಾದ ಭಾರತೀಯ ವಿಜ್ಞಾನ ಸಂಸ್ಥೆ HAL, HMT, ITI, BHEL, BEL. ಅಂತಹ ಬೃಹತ್ ಸಂಸ್ಥೆಗಳು ಇವೆ. ಇದನ್ನು ಸಿಲಿಕಾನ್ ಸಿಟಿ ಎಂದು ಹೇಳಲಾಗುತ್ತದೆ. ಸರ್ ಸಿ.ವಿ. ರಾಮನ್, ಸರ್. ಎಂ. ವಿಶ್ವೇಶ್ವರಯ್ಯ, ಡಾ| ಸಿ.ಎನ್.ಆರ್.ರಾವ್, ಡಾ| ಶಕುಂತಲಾ ದೇವಿ ಅಂತಹ ದಿಗ್ಗಜರು ವಿಜ್ಞಾನ ಕ್ಷೇತ್ರದಲ್ಲಿದ್ದಾರೆ. 2013ರಲ್ಲಿ ಸಿ.ಎನ್.ಆರ್. ರಾವ್ ರವರಿಗೆ ಸರ್ವೋಚ್ಛ ಪುರಸ್ಕಾರ ಭಾರತ ರತ್ನ ನೀಡಲಾಗಿದೆ. ಕರ್ನಾಟಕದಲ್ಲಿ ಹಲವಾರು ಬಗೆಯ ಖನಿಜ ಪದಾರ್ಥಗಳು ದೊರೆಯುತ್ತವೆ. ಉದಾ :ಚಿನ್ನ, ತಾಮ್ರ, ಕಬ್ಬಿಣ ಹಾಗೂ ಮುಂತಾದವು. ಭದ್ರಾವತಿಯಲ್ಲಿ ಕಾಗದ, ಕಬ್ಬಿಣ ಮತ್ತು ಸ್ಟೀಲ್ನ ದೊಡ್ಡ ಕಾರ್ಖಾನೆಗಳಿವೆ. ಇದನ್ನು ಹೊರತುಪಡಿಸಿ ಕರ್ನಾಟಕದ ಸಕ್ಕರೆ, ಸಿಮೆಂಟ್, ರೇಷ್ಟ ಹಾಗೂ ಕಾಗದ ಉತ್ಪಾದನೆ ಮಾಡುವ ಕಾರ್ಖಾನೆಗಳು ಇವೆ. ಕರ್ನಾಟಕದಲ್ಲಿ ಗಂಧದ ಮರಗಳು ಹೆಚ್ಚಿನ ಪ್ರಮಾಣದಲ್ಲಿವೆ. ಆದ್ದರಿಂದ ಕರ್ನಾಟಕವನ್ನು “ಗಂಧದ ಬೀಡು' ಎಂದು ಕರೆಯುವರು. ಇಲ್ಲಿ ಗಂಧದ ಎಣ್ಣೆ, ಸಾಬೂನು ಹಾಗೂ ಕಲಾಕೃತಿಗಳನ್ನೂ ಸಹ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಕಾವೇರಿ, ಕೃಷ್ಣ ಹಾಗೂ ತುಂಗಭದ್ರ ಮುಂತಾದ ನದಿಗಳು ಹರಿಯುತ್ತದೆ. ಈ ನದಿಗಳ ಮೇಲೆ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇವುಗಳಿಂದ ಸಾವಿರಾರು ಎಕರೆಯನ್ನು ನೀರಾವರಿಗೆ ಬಳಸಲಾಗಿದೆ. ವಿದ್ಯುಚ್ಛಕ್ತಿ ಕೇಂದ್ರಗಳನ್ನು ಸಹ ಸ್ಥಾಪನೆ ಮಾಡಲಾಗಿದೆ. ಜೋಗ, ಅಬ್ಬಿ, ಗೋಕಾಕ್ ಮತ್ತು ಶಿವನ ಸಮುದ್ರ ಮುಂತಾದ ಜಲಪಾತಗಳಿಂದ ಆಕರ್ಷಣೀಯವಾಗಿದೆ. ಕರ್ನಾಟಕ ರಾಜ್ಯದ ಶಿಲ್ಪಕಲೆ ಅದ್ಭುತವಾಗಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿ ಇರುವ ದೇವಾಲಯಗಳ ಶಿಲ್ಪಕಲೆ ಮತ್ತು ವಾಸ್ತು ಕಲೆ ಅದ್ಭುತವಾಗಿದೆ. ಬೇಲೂರು, ಹಳೆಬೀಡು, ಸೋಮನಾಥಪುರದ ದೇವಾಲಯದಲ್ಲಿ ಇರುವ ಕಲ್ಲಿನಪ್ರತಿಮೆಗಳು ಮಾತನಾಡುವ ಸ್ಥಿತಿಯಲ್ಲಿದೆ ಎಂದು ಎನಿಸುತ್ತವೆ. ಈ ಸುಂದರವಾದ ಪ್ರತಿಮೆಗಳು ನಮಗೆ ರಾಮಾಯಣ, ಮಹಾಭಾರತದ ಪುರಾಣದ ಕಥೆಗಳನ್ನು ಹೇಳುವಂತೆ ಎನ್ನಿಸುತ್ತವೆ. ಶ್ರವಣ ಬೆಳಗೊಳದಲ್ಲಿ 57ಅಡಿ ಗೊಮ್ಮಟೇಶ್ವರ ಏಕಶಿಲಾ ಪ್ರತಿಮೆ ಇದೆ. ಇದು ಜಗತ್ತಿಗೆ ತ್ಯಾಗ ಮತ್ತು ಶಾಂತಿಯ ಸಂದೇಶವನ್ನು ನೀಡುತ್ತದೆ. ಬಿಜಾಪುರದಲ್ಲಿ ಇರುವ ಗೋಲಗುಂಬಜ್ ವಿಸ್ಪರಿಂಗ್ ಗ್ಯಾಲರಿ ವಾಸ್ತು ಕಲೆಯ ದೃಷ್ಟಿಯಿಂದ ಅದ್ವಿತೀಯವಾಗಿದೆ. ಮೈಸೂರಿನ ಅರಮನೆ ಕರ್ನಾಟಕದ ವೈಭವದ ಪ್ರತೀಕವಾಗಿದೆ. ಪ್ರಾಚೀನ ಸೆಂಟ್ ಫಿಲೋಮಿನಾ ಚರ್ಚ್, ಜಗಮೋಹನ್ ರಾಜ್ಮಹಲ್ (ಅರ್ಟ್ ಗ್ಯಾಲರಿ) ಪುರಾತತ್ವ ವಸ್ತು ಸಂಗ್ರಹಾಲಯ ಬಹಳ ಆಕರ್ಷವಾಗಿದೆ, ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ಒಡೆಯರ್ ಮುಂತಾದ ರಾಜವಂಶಗಳು ಮತ್ತು ಕೃಷ್ಣದೇವರಾಯ, ಮದಕರಿನಾಯಕ, ರಾಣಿ ಅಬ್ಬಕ್ಕ ದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು, ಆದಿಲ್ಷಾರಂತಹ ರಾಜರು ಕರ್ನಾಟಕ ರಾಜ್ಯವನ್ನು ಸಮೃದ್ಧಿಗೊಳಿಸಲು ತಮ್ಮ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ. ಕರ್ನಾಟಕದ ಹಲವಾರು ಸಾಹಿತಿಗಳು ಇಡೀ ಜಗತ್ತಿನಲ್ಲಿ ಕರ್ನಾಟಕದ ಕೀರ್ತಿಯನ್ನು ಹರಡಿಸಿದ್ದಾರೆ. ವಚನಕಾರರಾದ ಬಸವಣ್ಣನವರು ಕ್ರಾಂತಿಕಾರಿ ಹಾಗೂ ಸಮಾಜ ಸುಧಾರಕರಾಗಿದ್ದರು. ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರಂತಹ ಹಲವಾರು ಸಂತರು ತಮ್ಮ ಅಮೂಲ್ಯವಾದ ವಚನಗಳ ಮೂಲಕ ಪ್ರೀತಿ, ದಯೆ, ಧರ್ಮದ ವಿಷಯದ ಬಗ್ಗೆ ಕಲಿಸಿರುತ್ತಾರೆ. ಪುರಂದರದಾಸರು, ಕನಕದಾಸರು ಭಕ್ತ ಕವಿಗಳು ಭಕ್ತಿ, ನೀತಿ ಹಾಗೂ ಸದಾಚಾರದ ಹಾಡನ್ನು ಹಾಡಿರುತ್ತಾರೆ. ಪಂಪ, ರನ್ನ, ಪೊನ್ನ, ಕುಮಾರ ವ್ಯಾಸ, ಹರಿಹರ, ರಾಘವಾಂಕ ಮುಂತಾದವರು ಮಹಾನ್ಕಾವ್ಯವನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಿಗೊಳಿಸಿದ್ದಾರೆ. ಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತ, ಮಾಸ್ತಿವೆಂಕಟೇಶ್ ಅಯ್ಯಂಗರ್, ವಿ.ಕೃ.ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಮುಂತಾದವರು ಆಧುನಿಕ ಕಾಲದ ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿಯಿಂದ ಅಲಂಕೃತರಾಗಿದ್ದಾರೆ. ಈ ಕನ್ನಡ ಭಾಷೆ ಸಂಸ್ಕೃತಿ ಹಾಗೂ ಕರ್ನಾಟಕ ರಾಜ್ಯಕ್ಕೆ ಗೌರವದ ವಿಷಯವಾಗಿದೆ.