ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮ

ಒಂದು ವಾಹಕದಲ್ಲಿ ವಿದ್ಯುತ್ ಪ್ರವಹಿಸುತ್ತಿರುವಾಗ ಅದರ ಸುತ್ತಲೂ ಕಾಂತಕ್ಷೇತ್ರವಿರುತ್ತದೆ. ಇದನ್ನು ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮ ನ್ನುವರು.

ಕಾಂತದ ಸುತ್ತಲಿನ ಪ್ರದೇಶದಲ್ಲಿ ಕಾಂತೀಯ ಕ್ಷೇತ್ರವಿದ್ದು, ಇದರಲ್ಲಿ ಕಾಂತದ ಬಲವನ್ನು ಪತ್ತೆ ಮಾಡಬಹುದು.

ಕಾಂತೀಯ ಬಲರೇಖೆಗಳನ್ನು ಕಾಂತಕ್ಷೇತ್ರವನ್ನು ಪ್ರತಿನಿಧಿಸಲು ಬಳಸುವರು.

ವಿದ್ಯುತ್ ಕಾಂತವು ಅವಾಹಕ ವಸ್ತುವಿನಿಂದ ಆವರಿಸಲ್ಪಟ್ಟ ತಾಮ್ರದ ತಂತಿಯ ಸುರುಳಿಯಿಂದ ಸುತ್ತಿರುವ ಮೃದುವಾದ ಕಬ್ಬಿಣವನ್ನು ಹೊಂದಿರುತ್ತದೆ.

ವಿದ್ಯುತ್ ಪ್ರವಹಿಸುತ್ತಿರುವ ಲೋಹದ ತಂತಿಯು ತನ್ನೊಂದಿಗೆ ಕಾಂತಕ್ಷೇತ್ರವನ್ನು ಹೊಂದಿರುತ್ತದೆ. ತಂತಿಯ ಸುತ್ತಲೂ ಕಾಂತೀಯ ಬಲರೇಖೆಗಳು ಏಕಕೇಂದ್ರೀಯ ವೃತ್ತಗಳ ಸರಣಿಯನ್ನು ಒಳಗೊಂಡಿದ್ದು ಇವುಗಳ ದಿಕ್ಕನ್ನು ಫ್ಲೇಮಿಂಗನ ಬಲಗೈ ನಿಯಮದಿಂದ ತಿಳಿಯಬಹುದು.

ವಿದ್ಯುತ್ ಪ್ರವಹಿಸುತ್ತಿರುವ ಒಂದು ವಾಹಕವನ್ನು ಕಾಂತಕ್ಷೇತ್ರದಲ್ಲಿ ಇರಿಸಿದಾಗ ಅದು ಬಲವನ್ನು ಅನುಭವಿಸುತ್ತದೆ. ಇದು ಮೋಟಾರ್ ನ ತತ್ವವಾಗಿದೆ.

ವಿದ್ಯುತ್ಕಾಂತೀಯ ಪ್ರೇರಣೆ ಎಂಬ ವಿದ್ಯಾಮಾನವು ಸಮಯದೊಂದಿಗೆ ಬದಲಾಗುತ್ತಿರುವ ಕಾಂತಕ್ಷೇತ್ರದಲ್ಲಿ ಇರಿಸಲಾದ ಸುರುಳಿಯಲ್ಲಿ ಪ್ರೇರಿತ ವಿದ್ಯುತ್ಪ್ರವಾಹವನ್ನು ಉಂಟುಮಾಡುವುದಾಗಿದೆ.

ಒಂದು ವಿದ್ಯುತ್ ಜನಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.