मात्रभूमि

कविता का सारांश

कवि भगवतीचरणवर्मा जी कहते हैं कि हे मातृभूमि, तेरी पवित्र धरती पर गाँधी, बुद्ध और राम जैसे महान विभूतियोंने जन्म लिया है जिन्होंने भारत की महानता का परिचय सारे विश्व में फैलाया है। ऐसे अमरों की जननी तुम्हें शतशत बार प्रणाम.कवि वर्माजी भारत माता की प्राकृतिक सौंदर्य का वर्णन करते हुए कहते हैं कि सुंदर हरे भरे खेत, फलफूलों से सुशोभित यह पवित्र भूमि भारत के वैभव को दर्शाती है। भारत की धरती में अपार खनिज संपदा होने के कारण हमारा देश ऐश्वर्यशाली है। हे, भारत माता, तुम अपने मुक्त हस्तों से लोगों को सुख - समृद्धि और धनधाम बाँटती हो इसलिए माँ तुम्हें मैं शत शत बार प्रणाम करता हूँ।हे भारत माता, हम कराड़ों देशवासी आपके आभारी हैं। न्यायप्रिय होने के कारण आपने एक हाथ में ज्ञानदीप ले रखा है जिसकी वजह से ज्ञान रूपी प्रकाश सारे विश्व में (सार्थक ज्ञान) फैलने से जगत का स्वरूप ही बदलरहा है। भारतवासियों को हे, माँ आप पर अत्यधिक गर्व है इसी एक कारण से सभी नगरवासी और ग्रामीण पूरे जोश से जय हिंद का नारा लगाते हैं, इसलिए माँ मैं आपको शत शत बार प्रणाम करता हूँ।

ಕನ್ನಡ ಸಾರಾಂಶ

ಕವಿ ಹೇಳುತ್ತಾರೆ ಹೇ ಮಾತೃಭೂಮಿ, ನಿನ್ನ ಪವಿತ್ರವಾದ ಧರೆಯ ಮೇಲೆ ಗಾಂಧಿ, ಬುದ್ಧ ಮತ್ತು ರಾಮರಂತಹ ಮಹಾನ್ ಪುರುಷರು ಜನಿಸಿದ್ದಾರೆ. ಇವರು ಭಾರತದ ಹಿರಿಮೆಯನ್ನು ಇಡೀ ಜಗತ್ತಿನಲ್ಲಿ ಪರಿಚಯಿಸಿದ್ದಾರೆ. ಅಮರ ವ್ಯಕ್ತಿಗಳ ತಾಯಿ ನಿನಗೆ ಶತ ಶತ ನಮನಗಳು. ಕವಿ ವರ್ಮರವರು ಭಾರತದ ಪ್ರಾಕೃತಿಕ ಸೌಂದರ್ಯವನ್ನು ವರ್ಣಿಸುತ್ತಾ ಹೇಳುತ್ತಾರೆ. ಇಲ್ಲಿನ ಹೊಲ-ಗದ್ದೆಗಳು ಸುಂದರವಾದ ಹಸಿರಿನಿಂದ ಕೂಡಿದೆ. ಹಣ್ಣು ಹಂಪಲು ಹಾಗೂ ಹೂವುಗಳಿಂದ ಶೋಭಿಸುವ ಈ ಪವಿತ್ರ ಭೂಮಿ ಭಾರತದ ವೈಭವವನ್ನು ಸೂಚಿಸುತ್ತದೆ ಭಾರತದ ಧರೆಯಲ್ಲಿ ಅಪಾರವಾದ ಖನಿಜ ಸಂಪನ್ಮೂಲಗಳು ದೊರಕುವ ಕಾರಣದಿಂದಾಗಿ ನಮ್ಮ ದೇಶ ಐಶ್ವರ್ಯ ಭರಿತ ದೇಶವಾಗಿದೆ. ಹೇ ಭಾರತ ಮಾತೆ, ನಿನ್ನ ಮುಕ್ತ ಹಸ್ತಗಳಿಂದ ಜನರಿಗೆ ಸುಖ-ಸಮೃದ್ಧಿ ಹಾಗೂ ಧನ ಹಾಗೂ ಆಶ್ರಯ ಸ್ಥಳವನ್ನು ಒದಗಿಸುತ್ತಿದ್ದೀಯಾ ಆದ್ದರಿಂದ ತಾಯಿ ನಿನಗೆ ಶತ ಶತ ನಮನಗಳನ್ನು ಅರ್ಪಿಸುತ್ತಿದ್ದೇನೆ.ಹೇ ಭಾರತ ಮಾತೆ | ನಮ್ಮ ದೇಶದ ಕೋಟಿ ಕೋಟಿ ಜನರು ತಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ಹಾಗೂ ಸದಾಕಾಲ ನಿಮ್ಮ ಜೊತೆಯಲ್ಲಿಯೇ ಇದ್ದೇವೆ. ತಾಯಿ ನೀನು ನ್ಯಾಯ ಪ್ರಿಯಳಾದ್ದರಿಂದ ಒಂದು ಕೈಯಲ್ಲಿ ನ್ಯಾಯದ ಪತಾಕೆಯನ್ನು ಹಿಡಿದಿದ್ದೀಯಾ ಮತ್ತೆ ಇನ್ನೊಂದು ಕೈಯಲ್ಲಿ ಜ್ಞಾನದ ದೀಪವನ್ನು ಹಿಡಿದಿದ್ದೀಯಾ ಅದರಿಂದ ಜ್ಞಾನ ದೀಪದ ಕಿರಣಗಳು ಇಡೀ ಜಗತ್ತಿನಲ್ಲಿಯೇ ಹರಡಿರುವುದರಿಂದ ಜಗತ್ತಿನ ಸ್ವರೂಪವೇ ಬದಲಾಗುತ್ತಿದೆ. ಭಾರತದ ಜನರಿಗೆ ತಾಯಿ ನಿನ್ನ ಮೇಲೆ ಅಪಾರವಾದ ಹೆಮ್ಮೆಯಿದೆ. ಇದೇ ಒಂದು ಕಾರಣದಿಂದ ಎಲ್ಲಾ ನಗರದಲ್ಲಿ ವಾಸಿಸುತ್ತಿರುವ ಜನರು ಹಾಗೂ ಎಲ್ಲಾಗ್ರಾಮಸ್ಥರು ಸಂಪೂರ್ಣ ಉತ್ಸಾಹದಿಂದ 'ಜೈ ಹಿಂದ್' ಎಂಬ ಘೋಷಣೆಯನ್ನು ಕೂಗುತ್ತಿದ್ದಾರೆ. ಆದ್ದರಿಂದ ತಾಯಿ ನಾನು ನಿನಗೆ ಶತ ಶತ ನಮನಗಳನ್ನು ಸಲ್ಲಿಸುತ್ತೇನೆ.