1. ಸಮಾಂತರ ಶ್ರೇಢಿಗಳು

ಸಮಾಂತರ ಶ್ರೇಢಿಯ ವ್ಯಾಖ್ಯೆ

         ಮೊದಲ ಪದವನ್ನು ಹೊರತುಪಡಿಸಿ ಪ್ರತಿಯೊಂದು ಪದವನ್ನು ಪಡೆಯಲು ಅದರ ಹಿಂದಿನ ಪದಕ್ಕೆ ಒಂದು ನಿರ್ದಿಷ್ಟ ಸಂಖ್ಯೆಯನ್ನು ಕೂಡಿಸುವುದರಿಂದ ಪಡೆಯುವ ಸಂಖ್ಯಾ ಪಟ್ಟಿಯೇ ಸಮಾಂತರ ಶ್ರೇಢಿ
ಉದಾಹರಣೆ:
       4,7,10,13,16,19,22.
       2,4,6,8,10...

ಸಮಾಂತರ ಶ್ರೇಢಿಯ ಸಾಮಾನ್ಯ ರೂಪ

a, a+d, a+2d,a+3d...
a → ಮೊದಲ ಪದ
d → ಸಾಮಾನ್ಯ ವ್ಯತ್ಯಾಸ

ಸಮಾಂತರ ಶ್ರೇಢಿಯ ವಿಧಗಳು

1) ಪರಿಮಿತ ಸಮಾಂತರ ಶ್ರೇಢಿ
     ಉದಾಹರಣೆ: 3,6,9,12,15...24
2) ಅಪರಿಮಿತ ಸಮಾಂತರ ಶ್ರೇಢಿ
     ಉದಾಹರಣೆ: 3,6,9,12,15...

ಸಮಾಂತರ ಶ್ರೇಢಿಯ ಸೂತ್ರಗಳು

ಸಮಾಂತರ ಶ್ರೇಢಿಯ nನೇ ಪದ an = a+(n-1)d
ಮೊದಲ n ಪದಗಳ ಮೊತ್ತ Sn =
n / 2
[2a+(n-1)d]
ಮೊದಲ n ಪದಗಳ ಮೊತ್ತ Sn =
n / 2
[a+l]
ಮೊದಲ n ಸ್ವಾಭಾವಿಕ ಸಂಖ್ಯೆಗಳ ಮೊತ್ತ Sn =
n(n+1) / 2
ಸಮಾಂತರ ಶ್ರೇಢಿಯ nನೇ ಪದ an = Sn - Sn-1
ಸಾಮಾನ್ಯ ವ್ಯತ್ಯಾಸ d = an - an-1
3 ಅನುಕ್ರಮ ಪದಗಳು (a-d), a, (a+d)
4 ಅನುಕ್ರಮ ಪದಗಳು (a-3d), (a-d), (a+d), (a+3d)