ವರ್ಗಸಮೀಕರಣಗಳು

ಮುಖ್ಯಾಂಶಗಳು

ವರ್ಗಸಮೀಕರಣ

ಒಂದು ಸಮೀಕರಣದ ಚರಾಕ್ಷರದ ಮಹತ್ತಮ ಘಾತ 2 ಆಗಿದ್ದರೆ ಅದನ್ನು ವರ್ಗಸಮೀಕರಣ ಎನ್ನುವರು.

ವರ್ಗಸಮೀಕರಣದ ಆದರ್ಶರೂಪ

ax² + bx + c = 0
a,b,c ಗಳು ವಾಸ್ತವ ಸಂಖೈಗಳು ಮತ್ತು a ≠ 0

ವರ್ಗಸಮೀಕರಣದ ಮೂಲವನ್ನು ಕಂಡುಹಿಡಿಯುವ ವಿಧಾನಗಳು

1) ಅಪವರ್ತನ ವಿಧಾನ
2) ವರ್ಗಪೂರ್ಣಗೊಳಿಸುವ ವಿಧಾನ
3) ಸೂತ್ರ ವಿಧಾನ

ವರ್ಗಸಮೀಕರಣದ ಮೂಲಗಳನ್ನು ಕಂಡುಹಿಡಿಯುವ ಸೂತ್ರ

- b ± b2 - 4ac  / 2a

ಶೋಧಕ

ವರ್ಗಸಮೀಕರಣದಲ್ಲಿ b² - 4ac ಯನ್ನು ವರ್ಗಸಮೀಕರಣದ ಶೋಧಕ ಎನ್ನುವರು.

ಮೂಲಗಳ ಸ್ವರೂಪ

ಮೂಲಗಳು ಮೂಲಗಳ ಸ್ವರೂಪ
b² - 4ac > 0 ಮೂಲಗಳು ವಾಸ್ತವ ಮತ್ತು ಭಿನ್ನ
b² - 4ac = 0 ಮೂಲಗಳು ವಾಸ್ತವ ಮತ್ತು ಸಮ
b² - 4ac < 0 ಮೂಲಗಳು ಊಹಾಮೂಲಗಳು