सत्य की महिमा
पाठ का सारांश
       सत्य वह है जो मिथ्या नहीं अर्थात् वास्तव में जो घटित हो और अधिकांश लोगों का साक्ष्य हो । जो कुछ भी अपनी आँखों से देखा. बिना नमक मिर्च लगाए बोल दिया - यही सत्य है । सत्य दॄष्टी का प्रतिबिंब है, ज्ञान की प्रतिलिपि हैं। आत्मा की वाणी है।सत्यवादिता के लिए साफ सुथरा मन चाहिए। झूठ बोलने से अपमानित होना पड़ता है। साथ में जो झूठ बोलता है उस पर कोई विश्वास नहीं करता है।शास्त्र में कहा गया है "सत्यं ब्रूयात, प्रियं ब्रूयात, न ब्रूयात सत्यमप्रियम | अर्थात् सच बोलो जो दूसरों को प्रिय लगे, अप्रिय सत्य मत बोलो।" संसार में जितने महान व्यक्ति हुए, सबने सत्य का सहारा लिया है। सत्य का पालन किया है। राजा हरिशचंद्र की सत्यनिष्ठा विश्वविख्यात है । उन्हें सत्य के मार्ग पर चलते अनेक कठिनाइयों का सामना करना पड़ा, लेकिन उन की कीर्ति आज भी सूरज की रोशनी से कम प्रकाशमान नहीं है । राजा दशरथ ने सत्यवचन निभाने के लिए अपने प्राण त्याग दिए। महात्मा गाँधी ने सत्य की शक्ति से ही विदेशी शासन को झकझोर दिया। गाँधीजी कहते थे - “सत्य एक विशाल वृक्ष है। उसका जितना आदर किया जाता है, उतने ही फल उसमें लगते हैं। उसका अंत नहीं होता।"
       सब लोगों को सत्य बोलने की आदत बचपन से ही डालनी चाहिए। झूठ बोलने से कुछ क्षणिक लाभ अवश्य होता है, पर उससे अधिक हानि ही होती है। सत्य की महिमा अपार है।. सत्य महान और परम शक्तिशाली है। संस्कृत की सूक्ति है - सत्यमेव जयते, नानृतम अर्थात् सत्य की ही विजय होता है असत्य की नहीं।अतः हमें हर स्थिति में सत्य बोलने और पालन करने का अभ्यास करना चाहिए।
ಕನ್ನಡ ಸಾರಾಂಶ
       ಸತ್ಯವೆಂದರೆ ಇರುವುದನ್ನು ಇದ್ದ ಹಾಗೆ ನೇರವಾಗಿ ಹೇಳುವುದೇ ಸತ್ಯ, ಯಾವುದೆ ಘಟನೆಯನ್ನು ತನ್ನ ಕಣ್ಣಾರೆ ನೋಡಿ ಅದರಲ್ಲಿ ಯಾವುದೇ ಉಪ್ಪು, ಖಾರವನ್ನು ಸೇರಿಸದೆ ಹೇಳುವುದೇ ಸತ್ಯ, ಸತ್ಯ ನಮ್ಮ ದೃಷ್ಟಿಯ ಪ್ರತಿಬಿಂಬವಾಗಿರುತ್ತದೆ. ಜ್ಞಾನದ ಪ್ರತಿಲಿಪಿಯಾಗಿದೆ.ಆತ್ಮದ ವಾಣಿಯಾಗಿದೆ. ಸತ್ಯ ಹೇಳಲು ಸ್ವಚ್ಛವಾದ ಮನಸ್ಸಿರಬೇಕು.ಸುಳ್ಳು ಹೇಳುವುದರಿಂದ ಅವಮಾನಕ್ಕೊಳಗಾಗಬೇಕು.ಅವನ ಮೇಲೆ ಯಾರು ಕೂಡ ವಿಶ್ವಾಸವಿಡುವದಿಲ್ಲ. ಯಾವುದೇ ಒಬ್ಬ ವ್ಯಕ್ತಿಗೆ ತೊಂದರೆ ಕೊಡಬೇಕೆಂದು ಸತ್ಯವನ್ನು ಹೇಳಬಾರದು ಶಾಸ್ತ್ರಗಳಲ್ಲಿ ಹೇಳಲಾಗಿದೆ. “ಸತ್ಯಂ ಬ್ರುಯಾತ್. ಪ್ರಿಯಾ ಬ್ರುಯಾತ್ ನ ಬ್ರುಯಾಥ್ ಸತ್ಯಂ ಪ್ರಿಯಂ” ಇದರ ಅರ್ಥವೇನೆಂದರೆ”ಸತ್ಯವಾದುದನ್ನು ಹೇಳಿ ಪ್ರಿಯವಾದುದನ್ನು ಹೇಳಿ. ಅಪ್ರಿಯ ಸತ್ಯವನ್ನು ಎಂದಿಗೂ ಹೇಳಬೇಡಿ”ಪಪಂಚದಲ್ಲಿ ಮಹಾನ್ ವ್ಯಕ್ತಿಗಳು ಸತ್ಯವನ್ನು ಅಳವಡಿಸಿಕೊಂಡು ಮುಂದೆ ಬಂದಿದ್ದಾರೆ ರಾಜ ಹರಿಶಂದನ ಸತ್ಯ ನಿಷ್ಠೆ ವಿಶ್ವ ವಿಖ್ಯಾತಿ ಪಡೆದಿದೆ. ರಾಜ ದಶರಥನು ಸತ್ಯ ವಚನವನ್ನು ನಿಭಾಯಿಸಲು ಹೋಗಿ ತನ್ನ ಪ್ರಾಣವನ್ನು ತ್ಯಜಿಸಿದನು. ಮಹಾತ್ಮಗಾಂಧೀಜಿಯವರು ಸತ್ಯದ ಶಕ್ತಿಯ ಮೂಲಕ ಪರಕೀಯರ ಆಡಳಿತವನ್ನು ನಾಶ ಮಾಡಿದರು. ಗಾಂಧೀಜಿಯವರು ಹೇಳುತ್ತಿದ್ದರು - “ಸತ್ಯ ಒಂದು ವಿಶಾಲ ವೃಕ್ಷದಂತೆ ಆಗಿದೆ. ಅದನ್ನು ಎಷ್ಟು ಗೌರವಿಸುತ್ತೇವೋ ಅದು ಅಷ್ಟೇ ಫಲವನ್ನು ನೀಡುತ್ತದೆ. ಅದರ ಕೊನೆ ಆಗುವುದಿಲ್ಲ’’ಬಾಲ್ಯದಿಂದಲೇ ಸತ್ಯವನ್ನು ಹೇಳುವುದನ್ನು ಹವ್ಯಾಸ ಮಾಡಿಕೊಳ್ಳಬೇಕು. ಒಮ್ಮೊಮ್ಮೆ ಸುಳ್ಳು ಹೇಳಿದರೆ ಅದು ಕ್ಷಣಿಕವಾಗಿ, ಲಾಭ ಕೊಡುತ್ತದೆ. ಅದರಿಂದ ನಷ್ಟ ಹೆಚ್ಚಾಗುತ್ತದೆ. ವ್ಯಕ್ತಿತ್ವವೂ ಸಹ ಕುಂಠಿತವಾಗುತ್ತದೆ. ಸುಳ್ಳು ಹೇಳುವ ಜನರ ಮೇಲೆ ನಂಬಿಕೆ ಹೋಗುತ್ತದೆ. ಅಭಿವೃದ್ಧಿಯ ದ್ವಾರಗಳು ಮುಚ್ಚಿ ಹೋಗುತ್ತವೆ. ಸತ್ಯದ ಮಹಿಮೆ ಅಪಾರವಾಗಿದೆ. ಹಾಗಾಗಿ ಸಂಸ್ಕತದಲ್ಲಿ ಒಂದು ನೀತಿ ಪರಕ ವಾಕ್ಯವಿದೆ - “ಸತ್ಯಮೇವ ಜಯತೆ, ನಾನೃತಮ್” ಇದರ ಅರ್ಥವೇನೆಂದರೆ ಸತ್ಯವು ಜಯಗಳಿಸುತ್ತದೆ. ಆದರೆ ಸುಳ್ಳು ಸೋಲುತ್ತದೆ. ಸತ್ಯ ಒಂದು ಕಿಡಿಯಂತೆ ಆಗಿರುತ್ತದೆ. ಸುಳ್ಳು ಒಂದು ಕ್ಷಣದಲ್ಲೇ ಭಸ್ಮವಾಗುತ್ತದೆ. ಆದ್ದರಿಂದ ನಾವು ಪ್ರತಿಯೊಂದು ಸ್ಥಿತಿಯಲ್ಲಿ ಸತ್ಯವನ್ನು ಹೇಳುವುದು ಮತ್ತು ಅದನ್ನು ಪಾಲಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.