ಶಬರಿ ಲೇಖಕರು

ಗದ್ಯ ಪಾಠ 2. ಶಬರಿ

ಲೇಖಕರ ಪರಿಚಯ:

         ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಇವರು ಕ್ರಿ.ಶ.1905 ರಲ್ಲಿ ಮಂಡ್ಯಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ನವೋದಯ ಪ್ರಮುಖ ಕವಿಗಳಲ್ಲಿ ಒಬ್ಬರಾದ ಪು.ತಿ.ನ. ರವರು ಗೀತನಾಟಕ, ಕವಿತೆ, ಸಣ್ಣಕತೆ, ಪ್ರಬಂಧ ಮೊದಲಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳು ಅಹಲ್ಯೆ, ಗೋಕುಲ ನಿರ್ಗಮನ, ಶಬರಿ, ಹಂಸ, ದಮಯಂತಿ ಮತ್ತು ರೂಪಕಗಳು, ಹಣತೆ, ರಸ, ಸರಸ್ವತಿ, ರಥಸಪ್ತಮಿ, ಶ್ರೀಹರಿಚರಿತೆ ಮೊದಲಾದವುಗಳು ಪ್ರಮುಖ ಕೃತಿಗಳು. ಇವರಿಗೆ ದೊರೆತ ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. 1981 ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ 53ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.