ಗದ್ಯ ಪಾಠ 2 ಶಬರಿ
ಒಂದು ಅಂಕದ ಪ್ರಶ್ನೆಗಳು
ಉತ್ತರ: ದಾಶರಥಿ ಎಂದರೇ ಶ್ರೀರಾಮ.
ಉತ್ತರ: ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳದ ಹೂವು, ಮಧುಪರ್ಕ ಮತ್ತು ರುಚಿಕರ ಹಣ್ಣು-ಹಂಪಲುಗಳನ್ನು ಸಂಗ್ರಹಿಸಿದ್ದಳು.
ಉತ್ತರ: ಮತಂಗ ಮುನಿಯ ಆಶ್ರಮದಲ್ಲಿ ಶಬರಿ ವಾಸವಾಗಿದ್ದಳು.
ಉತ್ತರ: ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದನು ಮಹರ್ಷಿ.
ಉತ್ತರ: ಭೂಮಿಜಾತೆ ಎಂದರೆ ಸೀತೆ.
ಎರಡು ಅಂಕದ ಪ್ರಶ್ನೆಗಳು
ಉತ್ತರ: ಲಕ್ಷ್ಮಣನು “ತಾಳಿಕೋ ಅಣ್ಣ ತಾಳಿಕೋ ಸೂರ್ಯನೇ ಕಾಂತಿ ಕಳೆದುಕೊಂಡರೆ ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯ ಕಳೆದುಕೊಂಡರೆ ಈ ಲೋಕಕ್ಕೆ ಧೈರ್ಯ ನೀಡುವವರು ಯಾರು? ಎಂದು ಅಣ್ಣನನ್ನು ಸಂತೈಸಿದನು.
ಉತ್ತರ: ರಾಮನ ಸ್ವಾಗತಕ್ಕಾಗಿ ಶಬರಿಯ ಸವಿಯಾದ ಬಗೆಬಗೆಯ ಹಣ್ಣುಗಳನ್ನು, ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು ಸುವಾಸನೆಯಿಂದ ಕೂಡಿದ ಬಾಡದ ಹೂವುಗಳನ್ನು ಸಂಗ್ರಹಿಸಿ ಸಿದ್ಧಮಾಡಿಕೊಂಡಿದ್ದಳು.
ಉತ್ತರ: ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು “ತಾಯಿ ನಿನ್ನ ಪ್ರೀತಿಯಲ್ಲಿ ನಿನ್ನ ಸುಖದಲ್ಲಿ ನಾವು ಸುಖಿಗಳಾಗಿದ್ದೇವೆ. ಕಾಡಿನಲ್ಲಿ ಈ ಆನಂದ ಕಾಣುವ ಪುಣ್ಯಕ್ಕೆ ಎಂದೆಂದಿಗೂ ನಿನಗೆ ನಾವು ಚಿರಋಣಿಗಳಾಗಿದ್ದೇವೆ. ನಿಮ್ಮ ಆತಿಥ್ಯದಲ್ಲಿ ಸ್ವಲ್ಪವೂ ಕೊರತೆ ಕಾಣಲಿಲ್ಲ. ನಮ್ಮ ಅಯೋಧ್ಯೆಯ ಅರಮನೆಯಲ್ಲೂ ಕೂಡ ಇದಕ್ಕಿಂತ ಹಿತವಾಗಿದ್ದು ಇಲ್ಲ. ಇಂದು ನಾವು ಕಾಡು ಎಂಬುದನ್ನು ಮರೆತು ಮನೆಯೆಂದೇ ತಿಳಿದೆವು. ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದೆ ತಿಳಿದೆವು” ಎಂದು ಶಬರಿಗೆ ಹೇಳಿದರು.
ಮೂರು/ನಾಲ್ಕು ಅಂಕದ ಪ್ರಶ್ನೆಗಳು
ಉತ್ತರ:
ಆಯ್ಕೆ: ಈ ವಾಕ್ಯವನ್ನು ಪು.ತಿ.ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ ಗೀತಾನಾಟಕದಿಂದ ಆಯ್ದ ‘ಶಬರಿ’ ಎಂಬ ಗದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ: ಈಮಾತನ್ನು ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ. ತನ್ನಿಂದ ಇನಿತು ಉಪಕಾರವಿಲ್ಲದಿದ್ದರೂ ತನ್ನನ್ನು ಪ್ರೀತಿಯಿಂದ ನೆನೆಯುತ್ತ ಹಂಬಲಿಸುತ್ತಿರುವ ವೃದ್ಧೆ ಶಬರಿಯನ್ನು ಕಂಡು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ: ಪೂಜ್ಯೆಯಾದ ಶಬರಿಯು ತನ್ನನ್ನು ಪ್ರೀತಿಂದ ನೆನೆಯುತ್ತ, ಬರುವಿಕೆಗಾಗಿ ಭಕ್ತಿಯಿಂದ ಹಂಬಲಿಸುತ್ತ ಇರುವ ದೃಶ್ಯವನ್ನು ನೋಡಿ ರಾಮನು “ಅವಳ ಅನುರಾಗವನ್ನು ಕಂಡು ನಾಚಿದೆನು” ಎಂದು ಹೇಳುವುದು ಸ್ವಾರಸ್ಯಪೂರ್ಣವಾಗಿದೆ.
ಉತ್ತರ:
ಆಯ್ಕೆ: ಈ ವಾಕ್ಯವನ್ನು ಪು.ತಿ.ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ ಗೀತನಾಟಕದಿಂದ ಆಯ್ದ ‘ಶಬರಿ’ ಎಂಬ ಗದ್ಯಪಾಠದಿಂದ ಆರಿಸಲಾಗಿದೆ.
ಸಂದರ್ಭ: ರಾಮನ ದರ್ಶನ ಭಾಗ್ಯದಿಂದ ಸಂತುಷ್ಟಳಾದ ಶಬರಿಯು ಮುಕ್ತಿಯನ್ನು ಪಡೆಯುವುದಕ್ಕಾಗಿ ಅಗ್ನಿ ಪ್ರವೇಶಿಸಿದ ಸಂದರ್ಭದಲ್ಲಿ ರಾಮನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: “ಬೆಳಕನ್ನು ಇಷ್ಟಪಡುವವರು ಉರಿಯುವ ಬತ್ತಿಯ ಕಪ್ಪನ್ನು ನೋಡುವುದಿಲ್ಲ,” ಎಂಬ ಮಾತು ಶಬರಿಯ ರಾಮಭಕ್ತಿಯ ಶ್ರೇಷ್ಠತೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತದೆ.
ಉತ್ತರ: ಶಬರಿಯ ರಾಮ-ಲಕ್ಷ್ಮಣರನ್ನು ಕಂಡು ಹಿಗ್ಗಿ, ಸಂತಸದಿಂದ ರುಚಿಕರ ಹಣ್ಣುಗಳನ್ನು ನೀಡಿ ಸತ್ಕರಿಸುತ್ತಾಳೆ. ರಾಮನನ್ನು ಕಂಡ ತಾನು ಪರಮಸುಖಿಯೆಂದು ನರ್ತಿಸುತ್ತಾಳೆ. ರಾಮನೂ ಕೂಡ “ನಿನ್ನ ಆದರದಿಂದ ನಾವು ಸುಖಿ, ನಿನಗೆ ನಾವು ಋಣಿ” ಎನ್ನುತ್ತಾನೆ. ಶಬರಿಯ ಕಣ್ಣೀರು ತುಂಬಿಕೊಂಡು “ನನ್ನ ಜಾಡನ್ನು ಹಿಡಿದು ಬಂದು ಸಂತಸ ನೀಡಿದಿರಿ, ಹಸಿವು ತೃಷೆ ಹಿಂಗಿತೆ? ನಾನೊಬ್ಬಳು ಬಡವಿ, ನನ್ನ ಮೇಲೆ ಮರುಕ ತೋರಿದಿರಾ” ಎನ್ನುತ್ತಾಳೆ. ಶ್ರೀರಾಮನು “ನಿನ್ನ ಅತಿಥ್ಯದಲ್ಲಿ ಸ್ವಲ್ಪವೂ ಕೊರತೆಯಿಲ್ಲ, ನಮ್ಮ ಅರಮನೆಗಿಂತ ನಿನ್ನ ಆಶ್ರಮವೇ ಚಂದ, ನೀನೇ ತಾಯಿಯಂತೆ” ಎನ್ನುತ್ತಾಳೆ. ಶಬರಿಯು “ನಿನ್ನ ರೂಪದಂತೆ ನಿನ್ನ ಮಾತು ಸುಂದರ ಹಾಗೂ ಉದಾರ, ನಾನು ಧನ್ಯಳಾದೆ. ಸಿದ್ಧರ ವರ ನನಗೆ ಫಲಿಸಿತು. ಗುರುಪೂಜೆಯನ್ನುಮಾಡಿದ ಪುಣ್ಯ ನನಗೆ ಇಂದು ಸೇರಿತು. ನನ್ನ ಚಿಂತೆಯೆಲ್ಲ ಹಿಂಗಿ ಹೋಯಿತು” ಎನ್ನುತ್ತಾಳೆ. ಶ್ರೀರಾಮನು “ದುಃಖವನ್ನು ಮರೆಸಿ, ಶಾಂತಿ ನೀಡುವ ಈ ವನದಲ್ಲಿ ಶುದ್ಧ ಪ್ರೇಮ ಮೂರ್ತಿ ನೀನು” ಎಂದು ಶಬರಿಯನ್ನು ಬಾಯಿತುಂಬ ಹೊಗಳುತ್ತಾನೆ.
ಉತ್ತರ: ಶಬರಿ ಮಾತಂಗ ಋಷಿಯ ಆಶ್ರಮದಲ್ಲಿರುತ್ತಾಳೆ. ಸಿದ್ಧರಾದ ಮಾತಂಗ ಋಷಿಗಳು ಶಬರಿಯ ಮನದಾಸೆಯನ್ನು ತಿಳಿದವರಾಗಿದ್ದು “ರಾಮಲಕ್ಷ್ಮಣರು ಆಶ್ರಮಕ್ಕೆ ಬಂದೇ ಬರುತ್ತಾರೆ. ನಿನ್ನಿಷ್ಟಾರ್ಥ ನೆರವೇರುತ್ತದೆ ಎಂದು ಹೇಳಿರುತ್ತಾರೆ. ಅವರ ಮಾತಿನಂತೆ ರಾಮಲಕ್ಷ್ಮಣರು ಶಬರಿಯ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಶಬರಿಯು ರಾಮನ ದರ್ಶನದಿಂದ ಪುಳಕಿತಳಾದಳು. ಕಣ್ತುಂಬ ರಾಮನ ದರ್ಶನ ಮಾಡಿ ಮೈಯನ್ನು ಮುಟ್ಟಿ ನಮಸ್ಕರಿಸಿ ಸಂಭ್ರಮಿಸಿದಳು. ಪರಿಮಳದ ವನಮಾಲೆಯನ್ನು ರಾಮನ ಕೊರಳಿಗೆ ಹಾಕಿ, ರುಚಿಕರ ಹಣ್ಣುಗಳನ್ನು ನೀಡಿ ಉಪಚÀರಿಸಿದಳು, ಧನ್ಯಳಾದೆನೆಂದು ಸಂತಸ ವ್ಯಕ್ತಪಡಿಸಿದಳು. ಹಲವಾರು ವರ್ಷಗಳಿಂದ ರಾಮನ ದರ್ಶನಕ್ಕಾಗಿ ಕಾದು ಮುನಿಗಳ ಮಾತನ್ನು ನಂಬಿ, ರಾಮನು ಬರುವ ಸುದಿನವನ್ನು ಎದುರು ನೋಡುತ್ತಿದ್ದ ಶಬರಿಗೆ ರಾಮನ ದರ್ಶನವಾಯಿತು. ಶಬರಿಯ ಮನದಾಸೆ ಈಡೇರಿತು. ಹಾಗಾಗಿ ‘ನಂಬಿ ಕೆಟ್ಟವರಿಲ್ಲ’ಎಂಬ ಮಾತು ಶಬರಿಯ ಪಾಲಿಗೆ ನಿಜವಾಯಿತು.