ಭಾರತಕ್ಕೆ ಯುರೋಪಿಯನ್ನರ ಆಗಮನ
ಒಂದು ಅಂಕದ ಪ್ರಶ್ನೆಗಳು
ಉತ್ತರ: ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸಿದ್ದು.
ಉತ್ತರ: ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲಾರಂಭಿಸಿದರು.
ಉತ್ತರ: ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು.
ಉತ್ತರ: 1453 ರಲ್ಲಿ ಆಟೋಮನ್ ಟರ್ಕರು ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
ಉತ್ತರ: ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾ ಶಕ್ತಿಯನ್ನು ಬಲಪಡಿಸುವ ಉದ್ದೇಶದಿಂದ.
ಉತ್ತರ: ಸಾ.ಶ. 1510 ರಲ್ಲಿ ಬಿಜಾಪುರದ ಸುಲ್ತಾನದಿಂದ ಗೋವಾವನ್ನು ಗೆದ್ದುಕೊಂಡು ಪೋರ್ಚುಗೀಸರ ಆಡಳಿತ ಕೇಂದ್ರವಾಗಿ ಪರಿವರ್ತಿಸಿದನು.
ಉತ್ತರ: ಪೂರ್ವ ದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ.
ಉತ್ತರ: ಇಂಗ್ಲೀಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾರದೆ
ಉತ್ತರ: ದಕ್ಷಿಣ ಭಾರತದಲ್ಲಿ ಫ್ರೆಂಚರ ಅಧಿಪತ್ಯವನ್ನು ಸ್ಥಾಪಿಸುವುದು.
ಉತ್ತರ: ಪೋರ್ಚುಗೀಸರ ಯಶಸ್ವಿ ಪ್ರಯತ್ನಗಳಿಂದ ಪ್ರೇರಣೆಗೊಂಡರು.
ಉತ್ತರ: ಡಚ್ ಮತ್ತು ಇಂಗ್ಲೀಷರ ಆಗಮನ
ಉತ್ತರ: ದಕ್ಷಿಣ ಭಾರತದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಉಳಿಸಿಕೊಳ್ಳುವ ಸಲುವಾಗಿ.
ಉತ್ತರ: ಕೃಷಿ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಬಂಗಾಳ ಪ್ರಾಂತ್ಯವು ಸಮೃದ್ಧ ಬೆಳವಣಿಗೆ ಹೊಂದಿತ್ತು.
ಉತ್ತರ: ದಸ್ತಕಗಳನ್ನು ಕಂಪನಿಯ ನೌಕರರು ತಮ್ಮ ಖಾಸಗಿ ವ್ಯಾಪಾರ-ವ್ಯವಹಾರಕ್ಕಾಗಿ ದುರುಪಯೋಗ ಪಡಿಸಿಕೊಳ್ಳತೊಡಗಿದರು.
ಉತ್ತರ: ಲಾಬೋರ್ಡಿನನು ಡೂಪ್ಲೆಗೆ ತಿಳಿಸದೆ ಬ್ರಿಟಿಷರಿಂದ ಹಣ ಪಡೆದು ಮದ್ರಾಸ್ ನ್ನು ಬಿಟ್ಟುಕೊಟ್ಟು ಮಾರಿಷಸ್ ಗೆ ಹೊರಟು ಹೋದನು.
ಉತ್ತರ: ಎರಡನೇಯ ಕಾರ್ನಾಟಿಕ್ ಯುದ್ಧದಲ್ಲಿ ಫ್ರೆಂಚರಿಗೆ ಆದ ಸೋಲು.
ಉತ್ತರ: ಮೀರ್ ಖಾಸಿಂ ದಸ್ತಕ್ ನ ದುರ್ಬಳಕೆಯನ್ನು ಪರಿಶೀಲಿಸಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ಎಂದು ಘೋಷಿಸಿದನು.
ಉತ್ತರ: ಸಲಾಬತ್ ಜಂಗನ ರಕ್ಷಣೆಗಾಗಿ
ಉತ್ತರ: ಬ್ರಿಟಿಷರು ಮೀರ್ ಜಾಫರನಿಗೆ ನವಾಬನನ್ನಾಗಿ ಮಾಡುವ ಆಮಿಷಮೊಡ್ಡಿದ್ದರಿಂದ.
ಉತ್ತರ: ಬ್ರಿಟಿಷರು ಮೀರ್ ಜಾಫರ್ ಅಸಮರ್ಥನೆಂದು ಬಿಂಬಿಸಿ
ಎರಡು ಅಂಕದ ಪ್ರಶ್ನೆಗಳು
ಉತ್ತರ:
1453 ರಲ್ಲಿ ಆಟೋಮನ್ ಟರ್ಕರು ಕಾನಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು.
ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರವಾದ ತೆರಿಗೆಯನ್ನು ವಿಧಿಸತೊಡಗಿದರು.
ವರ್ತಕರಿಗೆ ಈ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.
ಉತ್ತರ:
ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಕಾನಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.
ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು.
ಉತ್ತರ:
ಸ್ಫೇನ್, ಪೋರ್ಚುಗಲ್ ಮೊದಲಾದ ಯುರೋಪಿನ ದೇಶಗಳ ರಾಜರು ಸಾಹಸಿ ನಾವಿಕರನ್ನು ಪ್ರೊತ್ಸಾಹಿಸಲಾರಂಭಿಸಿದರು.
ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್, ಸಿಡಿಮದ್ದು ಮೊದಲಾದವುಗಳು ನೆರವಿಗೆ ಬಂದವು.
ಉತ್ತರ: ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರಿಗೆ ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್, ಸಿಡಿಮದ್ದು ಮೊದಲಾದವುಗಳು ಸಹಕಾರಿಯಾದವು.
ಉತ್ತರ: ಲಿಸ್ಟನ್ ನಿಂದ ಹೊರಟ ಪೋರ್ಚುಗಲ್ ನಾವಿಕ ವಾಸ್ಕೋಡಗಾಮನು 1498 ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ‘ಕಾಪ್ಪಡ್’ ಎಂಬಲ್ಲಿಗೆ ಬಂದು ತಲುಪಿದನು.
ಉತ್ತರ:
ಸಾ.ಶ. 1602 ರಲ್ಲಿ ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು.
ಭಾರತದಲ್ಲಿ ಸೂರತ್, ಬ್ರೋಚ್, ಕ್ಯಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲೀಪಟ್ಟಣ, ಚಿನ್ಸೂರ್ ಮೊದಲಾದ ಕಡೆಗಳಲ್ಲಿ ತಮ್ಮ ಕೋಠಿಗಳನ್ನು ಸ್ಥಾಪಿಸಿಕೊಂಡರು.
ಉತ್ತರ:
ನವಾಬನ ವಿರೋಧಿಗಳಾದ ಮಾಣಿಕ್ ಚಂದ್, ಓಮೀಚಾಂದಾ, ಜಗತ್ ಸೇಠ್ ಮೊದಲಾದ ಶ್ರೀಮಂತರನ್ನು ತನ್ನತ್ತ ಸೆಳೆದುಕೊಂಡನು.
ಸಿರಾಜನ ಸೇನಾಪತಿಯಾದ ಮೀರ್ ಜಾಫರನಿಗೆ ನವಾಬನನ್ನಾಗಿ ಮಾಡುವ ಆಮಿಷವೊಡ್ಡಿ ಯುದ್ಧದಲ್ಲಿ ತಟಸ್ಥವಾಗಿರಲು ರಾಜ್ಯವನ್ನು ಒಪ್ಪಿಸಿದನು.
ಉತ್ತರ: ಸಿರಾಜನ ಸೇನಾಪತಿಯಾದ ಮೀರ್ ಜಾಫರನಿಗೆ ಬ್ರಿಟಿಷರು ಯುದ್ಧದಲ್ಲಿ ತಟಸ್ಥವಾಗಿದ್ದರೆ ಬಂಗಾಳದ ನವಾಬನನ್ನಾಗಿ ಮಾಡುವುದಾಗಿ ಆಮಿಷವೊಡ್ಡಿದ್ದರು, ಅದರಂತೆ ಯುದ್ಧದ ನಂತರ ಬಂಗಾಳದ ನವಾಬನನ್ನಾಗಿ ಮಾಡಿದರು.
ಉತ್ತರ:
ಮೀರ್ ಖಾಸಿಂ ತನ್ನನ್ನು ಸ್ವತಂತ್ರ ರಾಜನೆಂದು ಭಾವಿಸಿದನು.
ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೋಷಿಸಿದನು.
ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ ನೇರ ಸ್ಪರ್ಧೆಗಿಳಿದರು.
ಬ್ರಿಟಿಷರ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿತು.
ಉತ್ತರ:
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ‘ದಿವಾನಿ’ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
ಷಾ ಆಲಂ ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು.
ಯುದ್ಧ ನಷ್ಟ ಪರಿಹಾರವಾಗಿ ಷೂಜ್-ಉದ್-ದೌಲನು 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
ಮೀರ್ ಜಾಫರ್ನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಆಡಳಿತ ಕಂಪನಿಯು ನಿರ್ವಹಿಸತೊಡಗಿತು.
ಉತ್ತರ:
ಬ್ರಿಟಿಷರು ಭೂಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದ್ದರು. ನವಾಬನು ಆಡಳಿತ, ನ್ಯಾಯ ಮೊದಲಾದ ಆಡಳಿತಾತ್ಮಕ ಕಾರ್ಯ ನಿರ್ವಹಿಸುತ್ತಿದ್ದನು.
ರಾಬರ್ಟ್ ಕ್ಲೈವ್
ಉತ್ತರ:
ಬಕ್ಸಾರ್ ಕದನವು ಬ್ರಿಟಿಷರು ಬಂಗಾಳದ ನಿಜವಾದ ಒಡೆಯರೆಂದು ದೃಢೀಕರಿಸಿತು.
ಔದ್ ಕೂಡ ಅವರ ಅಧೀನದಲ್ಲಿ ಉಳಿಯುವಂತಾಯಿತು.
ರಾಬರ್ಟ್ ಕ್ಲೈವ್ ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ ಪದ್ಧತಿಯನ್ನು ಜಾರಿಗೊಳಿಸಿದನು.
ಬ್ರಿಟಿಷರು ತಮ್ಮ ವಾಣಿಜ್ಯ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ ರಾಜಕೀಯ ಪರಮಾಧಿಕಾರ ಸ್ಥಾಪಿಸಿದರು.
ಮೂರು/ನಾಲ್ಕು ಅಂಕದ ಪ್ರಶ್ನೆಗಳು
ಉತ್ತರ:
ಲಾಬೋರ್ಡಿನನು ಬ್ರಿಟಿಷರಿಂದ ಹಣ ಪಡೆದು ಮದ್ರಾಸ್ ನ್ನು ಬಿಟ್ಟುಕೊಟ್ಟನು.
ಡೂಪ್ಲೆಯು ಮದ್ರಾಸ್ ನ್ನು ಮತ್ತೆ ಪಡೆಯುವ ವಿಫಲ ಪ್ರಯತ್ನ ನಡೆಸಿದನು.
ಕಾರ್ನಾಟಿಕ್ ಯುದ್ಧವು ಫ್ರೆಂಚರಿಗೆ ರಾಜಕೀಯ ಹಿನ್ನಡೆಯನ್ನು ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟಿತು.
ಫ್ರೆಂಚರು ಭಾರತದಲ್ಲಿ ತಮ್ಮ ಎಲ್ಲಾ ನೆಲೆಗಳನ್ನು ಕಳೆದುಕೊಂಡರು.
ದಕ್ಷಿಣ ಭಾರತದಲ್ಲಿ ಫ್ರೆಂಚರು ಮೂಲೆ ಗುಂಪಾದರು.
ಉತ್ತರ:
ಪ್ಲಾಸಿ ಕದನಕ್ಕೆ ಕಾರಣಗಳು:
ದಸ್ತಕ್ ಗಳ ದುರುಪಯೋಗ
ಅನುಮತಿ ಇಲ್ಲದೆ ಕೋಟೆಯ ದುರಸ್ಥಿ
ಕಪ್ಪು ಕೋಣೆ ದುರಂತ
ಪ್ಲಾಸಿ ಕದನದ ಪರಿಣಾಮಗಳು –
ಈ ಯುದ್ಧವು ಭಾರತೀಯರಲ್ಲಿದ್ದ ಅನೈತಿಕ, ಅಸಂಘಟನೆ ಮತ್ತು ಈ ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು.
ಮೀರ್ ಜಾಫರ್ ಬಂಗಾಳದ ನವಾಬನಾದನು.
ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು.
ಮೀರ್ ಜಾಫರನು ಕಂಪನಿಗೆ 17 ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನು.
ಉತ್ತರ:
ಬಕ್ಸಾರ ಕದನಕ್ಕೆ ಕಾರಣಗಳು:
ಬ್ರಿಟಿಷರು ಮೀರ್ ಖಾಸಿಂನನ್ನು ಇಳಿಸಿ ಮೀರ್ ಜಾಫರ್ ನನ್ನು ಬಂಗಾಳದ ನವಾಬನನ್ನಾಗಿ ಮಾಡಿದರು.
ಭಾರತೀಯ ವ್ಯಾಪಾರಿಗಳು ಮತ್ತು ವಿವಿಧ ಕಸುಬುದಾರರು ಅವನ ಬೆಂಬಲಕ್ಕೆ ನಿಂತರು.
ಮೀರ್ ಖಾಸಿಂನು ಎರಡನೇ ಷಾ ಆಲಂ ಮತ್ತು ಷೋಜ-ಉದ್-ದೌಲನೊಂದಿಗೆ ಒಪ್ಪಂದ ಮಾಡಿಕೊಂಡನು.
ಬಕ್ಸಾರ ಕದನದ ಪರಿಣಾಮಗಳು
ಬಂಗಾಳದ ಮೇಲಿನ ‘ದಿವಾನಿ’ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
ಷಾ ಆಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು.
ಷೂಜ್-ಉದ್-ದೌಲನು ಕಂಪನಿಗೆ ಯುದ್ಧ ನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
ಮೀರ್ ಜಾಫರನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.
ಉತ್ತರ:
ಜಹಾಂಗೀರನು ಸೂರತ್ ನಲ್ಲಿ ಮೊದಲ ದಾಸ್ತಾನು ಮಳಿಗೆಯನ್ನು ಸ್ಥಾಪಿಸಲು ಫರ್ಮಾನ್ ನೀಡಿದನು.
ಜಹಾಂಗೀರನಿಂದ ಸರ್. ಥಾಮಸ್ ರೋ ಮೊಘಲ್ ಸಾಮ್ರಾಜ್ಯದ ಕೆಲವೆಡೆಗಳಲ್ಲಿ ಫ್ಯಾಕಟ್ರಿಗಳನ್ನು ಸ್ಥಾಪಿಸಲು ಅನುಮತಿ ಪಡೆದನು.
ಚಂದ್ರಗಿರಿಯ ರಾಜನಿಂದ ಮದ್ರಾಸ್ ನಲ್ಲಿ ಭೂಮಿಯನ್ನು ಪಡೆದು ಸೆಂಟ್ ಜಾರ್ಜ್ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದನು.
ಸುತನುತಿ, ಕಲ್ಕತ್ತ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಫೋರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿದರು.
ಕಾರ್ನಾಟಿಕ್ ಯುದ್ಧಗಳಿಂದ ಫ್ರೆಂಚರನ್ನು ಮೂಲೆ ಗುಂಪನ್ನಾಗಿಸಿದರು.
17 ನೇ ಶತಮಾನದ ಅಂತ್ಯದ ವೇಳೆಗೆ ಇಂಗ್ಲೀಷರು ಮದ್ರಾಸ್, ಬಾಂಬೆ ಮತ್ತು ಕಲ್ಕತ್ತಗಳನ್ನು ತಮ್ಮ ಪ್ರೆಸಿಡೆನ್ಸಿ ಕೇಂದ್ರಗಳನ್ನು ಮಾಡಿಕೊಂಡರು.
ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೀಷರು ಕಲ್ಕತ್ತಾವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.