ವೀರಲವ

ವೀರಲವ

ಕವಿ ಕೃತಿ ಪರಿಚಯ:

ಕವಿ ಲಕ್ಷ್ಮೀಶ ಕ್ರಿ.ಶ 1550 ರಲ್ಲಿ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು ಈತನಿಗೆ ಲಕ್ಷೀರಮಣ ಲಕ್ಷೀಪತಿ ಎಂಬ ಹೆಸರುಗಳೂ ಇವೆ. “ಜೈಮಿನಿಭಾರತ” ವೆಂಬ ಪ್ರಸಿದ್ದ ಕೃತಿಯನ್ನು ಬರೆದಿದ್ದಾರೆ. ಲಕ್ಷೀಶನಿಗೆ ಉಪಮಾಲೋಲ ಕರ್ಣಾಟಕ ಕವಿ ಚೂತವನ ಚೈತ್ರ. ಎಂಬ ಬಿರುದುಗಳಿವೆ.

ಪದಗಳ ಅರ್ಥ:

ಅಂಜಿ-ಹೆದರಿ.
ಅಬ್ದಿಪ-ವರುಣ.
ಉಪವನ-ಉದ್ಯಾನವನ.
ಕದಳಿ-ಬಾಳೆ.
ತುರಂಗ-ಕುದರೆ.
ವಾಜಿ-ಹಯ.
ನೆತ್ತಿ-ಹಣೆ.
ವಾಸಿ-ಪ್ರತಿಜ್ಞೆ.
ಉರ್ವಿ-ಭೂಮಿ.
ಅಗುಡು-ಶೌರ್ಯ.
ಚರಿಸು-ಸಂಚರಿಸು.
ಆರ್ಪರ್-ಸಮರ್ಥರು.
ಮುಳಿ-ಕೋಪ.